ಆಗಂತುಕ (ಕಾದಂಬರಿ)
ಸಂಚಿಕೆ- ೧೪
ಹಿಂದಿನ ಸಂಚಿಕೆಯಲ್ಲಿ
ರಘುವೀರನನ್ನು ರೌಡಿಗಳು ಅಡ್ಡಗಟ್ಟಿ ವಜ್ರಗಳನ್ನು ಕೊಡೆಂದು ಬಲವಂತಪಡಿಸಿದಾಗ ವಜ್ರಗಳು ಕಸದ ರಾಶಿಯಲ್ಲಿ ಸೇರಿದೆಯೆಂದು ಹೇಳಿದ್ದರೂ ಅವನನ್ನು ಬಿಡದೆ ಅವರ ಬಾಸ್ ಬಳಿ ಎಳೆದುಕೊಂಡು ಹೋಗುತ್ತಿರುವಾಗ ಪೋಲೀಸ್ ಇನ್ಸ್ ಪೆಕ್ಟರ್ ರವರು ಬಂದು ಗಾಳಿಯಲ್ಲಿ ಗುಂಡು ಹಾರಿಸಿದ ಶಬ್ದ ಕೇಳಿ ರೌಡಿಗಳು ಓಡಿ ಹೋದ ನಂತರ ರಘುವೀರನು ಮನೆಗೆ ಬರುತ್ತಾನೆ
ಕಥೆಯನ್ನು ಮುಂದುವರೆಸುತ್ತಾ
ಮನೆಗೆ ಬಂದ ರಘುವೀರನು ಬಾಗಿಲ ಕರೆಗಂಟೆ ಒತ್ತಿದಾಗ ಅವರಮ್ಮ ಬಂದು ಬಾಗಿಲು ತೆಗೆದು ಇದೇನಪ್ಪಾ ಇವತ್ತು ಇಷ್ಚು ಹೊತ್ತಾಗಿ ಬಂದಿದ್ದೀಯಾ ಪುನಃ ರೌಡಿಗಳು ತೊಂದರೆ ಕೊಟ್ಟರಾ ?
ಹೌದಮ್ಮಾ ಆ ಆಗಂತುಕರು ನಾನು ಕಾರಿನಲ್ಲಿ ಬರುತ್ತಿರುವಾಗ ಕಾರು ಕೆಟ್ಟೋಯ್ತು ಅದನ್ನು ರಿಪೇರಿ ಮಾಡುತ್ತಿರುವಾಗ ಅಡ್ಡಗಟ್ಟಿ ವಜ್ರದ ಹರಳನ್ನು ಕೇಳಿದರು ನಾನು ಕಸದ ರಾಶಿಯೊಳಗೆ ಸೇರಿದೆ ಬೇಕಿದ್ದರೆ ತೆಗೆದುಕೊಳ್ಳಿ ಎಂದೆ ಅದಕ್ಕೆ ಅವರು ವಜ್ರಗಳು ಸಿಗುವವರೆಗೂ ನೀನು ನಮ್ಮಲ್ಲೇ ಇರಬೇಕೆಂದು ಹೇಳಿ ಎಳೆದೊಯ್ಯುತ್ತಿರುವ ವೇಳೆಗೆ ಪೋಲೀಸ್ ಇನ್ಸ್ ಪೆಕ್ಟರ್ ರವರು ಬಂದು ಗಾಳಿಯಲ್ಲಿ ಗುಂಡು ಹಾರಿಸಿದಾಗ ಹೆದರಿ ಓಡಿಹೋದರಮ್ಮಾ
ಅಯ್ಯೋ ನಾಳೆಯಿಂದ ಹೇಗೆ ಕೆಲಸಕ್ಕೆ ಹೋಗುತ್ತೀಯಾ? ಪುನಃ ಸಿಕ್ಕಿದರೆ ನಿನಗೇನು ಮಾಡುತ್ತಾರೋ ಎಂದು ನನಗೇಕೋ ಭಯವಾಗುತ್ತಿದೆ ಕಣಪ್ಪಾ
ಇನ್ಸ್ ಪೆಕ್ಟರ್ ರವರು ಪೋಲೀಸ್ ರಕ್ಷಣೆ ಕೊಡುತ್ತೇನೆಂದು ಹೇಳಿದ್ದಾರಮ್ಮಾ
ನೀನು ಎಲ್ಲಿ ಹೋದರೂ ಯಾವಾಗಲೂ ಅವರು ಇರುತ್ತಾರಾ?
ಹೌದಂತೆ ನನ್ನ ಬಳಿ ಬಂದವರನ್ನು ಸುಲಭವಾಗಿ ಹಿಡಿಯಬಹುದೆಂದು ಹೇಳಿದ್ದಾರೆ
ನೀನು ಹುಷಾರಾಗಿರಪ್ಪಾ ಎಂದು ಹೇಳಿ ಬೇಗ ಮುಖ ತೊಳೆದು ಬಾ ಊಟ ಹಾಕುತ್ತೇನೆ ಎನ್ನಲು
ರಘುವೀರನು ಫ್ರೆಶ್ ಅಪ್ ಆಗಿ ಬರುವ ವೇಳೆಗೆ ರಾತ್ರಿ ಹನ್ನೊಂದು ಗಂಟೆಯಾಗಿದ್ದು ಅವರಪ್ಪ ಮಲಗಿರುವುದನ್ನು ನೋಡಿ ಈಗ ಎಬ್ಬಿಸಿ ವಿಚಾರ ಹೇಳಿದರೆ ಭಯಗೊಂಡು ರಾತ್ರಿ ಎಲ್ಲಾ ನಿದ್ದೆ ಮಾಡದೆ ಯೋಚಿಸುತ್ತಿರುತ್ತಾರೆಂದುಕೊಂಡು ಊಟ ಮಾಡಿ ಮಲಗಲು ಹೋಗುತ್ತಾನೆ
ಇನ್ಸ್ ಪೆಕ್ಟರ್ ರವರು ರಕ್ಷಣೆ ಕೊಡುವುದಾಗಿ ಹೇಳಿದ್ದರಿಂದ ರಘುವೀರನು ಮಾರನೇ ದಿನದಿಂದ ಧೈರ್ಯವಾಗಿ ಬಸ್ ನಲ್ಲಿಯೇ ಕೆಲಸಕ್ಕೆ ಹೋಗಿದ್ದು ಕೆಲಸ ಮುಗಿದ ನಂತರ
ಹೇಗಿದ್ದರೂ ಪೋಲೀಸ್ ರಕ್ಷಣೆ ಇದೆ ಎಂದು ಧೈರ್ಯವಾಗಿ ಬಸ್ಸಿನಲ್ಲೇ ವಾಪಸ್ ಬಂದು ಮನೆಗೆ ನಡೆದುಕೊಂಡು ಬರುತ್ತಿರುವಾಗ ಯಾವ ಪೋಲೀಸ್ ಸಿಬ್ಬಂದಿಯೂ ಇಲ್ಲದಿರುವುದವ್ನು ನೋಡಿ ಭಯ ಶುರುವಾಗಿರುತ್ತದೆ ಭಯದಿಂದಲೇ ಅಕ್ಕಪಕ್ಕ ನೋಡುತ್ತಾ ಬಿರ ಬಿರನೆ ಹೆಜ್ಜೆ ಹಾಕುತ್ತಾ ಬರುತ್ತಿದ್ದು ಮೊಬೈಲ್ ರಿಂಗ್ ಆಗುತ್ತದೆ ಯಾರು ಫೋನ್ ಮಾಡುತ್ತಿದ್ದಾರೋ ಎಂದು ಇನ್ನೂ ಹೆಚ್ಚಿನ ಭಯವಾಗಿ ಕೈ ನಡುಗಿಸುತ್ತಾ ಜೇಬಿನಿಂದ ಮೊಬೈಲ್ ತೆಗೆದು ಹಲೋ ಎನ್ನಲು
ನೀವೇನಾ ರಘುವೀರಾ ಎಂದು ಪ್ರಶ್ನಿಸಿದ ತಕ್ಷಣ ಹೆದರಿಕೊಂಡು ಹೌದು ನೀವ್ಯಾರು ಎಂದು ತಡವರಿಸುತ್ತಾ ಕೇಳುತ್ತಾನೆ
ನಿಮ್ಮನ್ನು ಯಾರಾದರೂ ಅಪಹರಿಸುತ್ತಾರೆಂದು ಅವರನ್ನು ಹಿಡಿಯಲು ಬಂದಿದ್ದೇವೆ ನೀವು ಧೈರ್ಯವಾಗಿರಿ
ಸಾರ್ ನೀವು ಎಲ್ಲಿದ್ದೀರಿ ಸಾರ್ ಎಂದು ರಘುವೀರನು ಅಳುಕಿನಿಂದ ಕೇಳಲು
ನಿಮ್ಮ ಬಲಗಡೆ ಸ್ವಲ್ಪ ದೂರದಲ್ಲಿದ್ದೇವೆ ಇಲ್ಲಿ ಕತ್ತಲಿರುವುದರಿಂದ ನಾವು ನಿಮಗೆ ಕಾಣುತ್ತಿಲ್ಲ ಈಗ ಬೆಳಕಿಗೆ ಬರುತ್ತೇವೆ ತಿರುಗಿ ನೋಡಿ ಎನ್ನಲು
ರಘುವೀರನು ಬಲಗಡೆ ತಿರುಗಿ ನೋಡಿದಾಗ
ಸಿವಿಲ್ ಡ್ರೆಸ್ ನಲ್ಲಿದ್ದ ಪೋಲೀಸ್ ಸಿಬ್ಬಂದಿಯನ್ನು ಕಂಡ ರಘುವೀರನಿಗೆ ಇವರು ಪೋಲೀಸ್ ಡ್ರೆಸ್ ನಲ್ಲಿಲ್ಲ ನನಗೆ ಮೋಸಮಾಡಿ ಕರೆದುಕೊಂಡು ಹೋಗುತ್ತಾರೆಂದು ಅನುಮಾನ ಬಂದು ಓಡಿಹೋಗಲು ಯತ್ನಿಸಿದಾಗ
ರಘುವೀರ್ ನಿಂತುಕೊಳ್ಳಿ ನಾವು ಪೋಲೀಸ್ ಸಿಬ್ಬಂದಿ ನಿಮ್ಮ ರಕ್ಷಣೆಗೆ ಬಂದಿದ್ದೇವೆಂದು ಕೂಗಿ ಹೇಳುತ್ತಿದ್ದರೂ
ರಘುವೀರ ಕೇಳಿಸಿಕೊಂಡರೂ ಅಲ್ಲಿ ನಿಲ್ಲದೆ ಮನೆಗೆ ಓಡಿ ಹೋಗಿ ಏದುಸಿರು ಬಿಡುತ್ತಾ ಕರೆಗಂಟೆ ಒತ್ತಿದಾಗ
ಅವರಪ್ಪ ಬಂದು ಬಾಗಿಲು ತೆಗೆದ ತಕ್ಷಣ
ಅಪ್ಪಾ ಬೇಗ ಬಾಗಿಲು ಹಾಕು ಆಗಂತುಕರು ನನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದಾರೆ ಯಾರು ಬಂದರೂ ಬಾಗಿಲು ತೆಗಯಬೇಡ
ನಾನೀಗಲೇ ಇನ್ಸ್ ಪೆಕ್ಟರಿಗೆ ಫೋನ್ ಮಾಡುತ್ತೇನೆಂದು ಹೇಳಿ ತಕ್ಷಣ ಫೋನ್ ಮಾಡುತ್ತಾನೆ
ಇನ್ಸ್ ಪೆಕ್ಟರ್ ಫೋನ್ ರಿಸೀವ್ ಮಾಡುವುದಿಲ್ಲ
ಸಾರ್ ಪ್ಲೀಸ್ ಫೋನ್ ರಿಸೀವ್ ಮಾಡಿ ಎಂದು ಮನಸ್ಸಿನಲ್ಲಿ ಬೇಡಿಕೊಳ್ಳುತ್ತಾ ಪುನಃ ಫೋನ್ ಮಾಡಿದರೂ ಇನ್ಸ್ ಪೆಕ್ಟರ್ ರಿಸೀವ್ ಮಾಡುವುದೇ ಇಲ್ಲ ಅಯ್ಯೋ ಅವರು ಮನೆಗೆ ಬಂದು ಬಿಟ್ಟರೆ ಗತಿ ಏನಪ್ಪಾ ನಮ್ಮಪ್ಪ ಅಮ್ಮನನ್ನು ಹೊಡೆದು ನನ್ನನ್ನು ಎಳೆದುಕೊಂಡು ಹೋದರೇನು ಮಾಡಲಿ ನಮ್ಮಪ್ಪ ಅಮ್ಮನನ್ನು ಯಾರು ನೋಡಿಕೊಳ್ಳುತ್ತಾರೆ ವಜ್ರಗಳು ಸಿಗದೇ ಇದ್ದರೆ ನನ್ನನ್ನಂತೂ ಜೀವ ಸಹಿತ ಬಿಡುವುದಿಲ್ಲ ಅಯ್ಯೋ ಈಗೇನು ಮಾಡಲೆಂದು ಭಯಭೀತನಾಗಿರುವಾಗ
ಪೋಲೀಸ್ ಸಿಬ್ಬಂದಿಯವರು ರಘುವೀರನನ್ನು ಹಿಂಬಾಲಿಸುತ್ತಾ ಅವರ ಮನೆಗೆ ಬಂದು ಬಾಗಿಲು ತಟ್ಟಲು
ಅವರಪ್ಪನು ಈ ವೇಳೆಯಲ್ಲಿ ಯಾರು ಬಂದಿದ್ದಾರೆಂದು ಬಾಗಿಲು ತೆಗೆಯಲು ಹೋದಾಗ
ಅಪ್ಪಾ ಬಾಗಿಲು ತೆಗೆಯಬೇಡ ಯಾರೋ ಆಗಂತುಕರು ನನ್ನನ್ನು ಎಳೆದುಕೊಂಡು ಹೋಗಲು ಬಂದಿದ್ದಾರೆನ್ನಲು
ಅವರಪ್ಪನು ಬಾಗಿಲು ತೆಗೆಯಲು ಹೋಗಿದ್ದವರು ಅಲ್ಲೇ ನಿಲ್ಲುತ್ತಾರೆ
ಪೋಲೀಸ್ ಸಿಬ್ಬಂದಿಯವರು ರೀ ಸ್ವಾಮೀ ಬಾಗಿಲು ತೆಗೀರ್ರೀ ನಾವುಗಳು ಪೋಲೀಸ್ ರವರು ಎಂದಾಗಲೂ ಸಹ
ಅಪ್ಪಾ ಅಪ್ಪಾ ಅವರು ಸುಳ್ಳು ಹೇಳುತ್ತಿದ್ದಾರೆ ಅವರು ಪೋಲೀಸ್ ರವರವರಲ್ಲ ಖಂಡಿತ ಬಾಗಿಲು ತೆಗೆಯಬೇಡವೆಂದು ಹೇಳಿ ರಘುವೀರನು ಬಾಗಿಲು ತೆಗೆಯಲು ಬಿಡುವುದಿಲ್ಲ
ಪುನಃ ರಘುವೀರನು ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿದಾಗ
ಇನ್ಸ್ ಪೆಕ್ಟರ್ ರವರು ಫೋನ್ ರಿಸೀವ್ ಮಾಡಿ ಹಲೋ ಎನ್ನಲು
ಸಾರ್ ಸಾರ್ ನಮ್ಮ ಮನೆಗೆ ಯಾರೋ ಬಂದು ನನ್ನನ್ನು ಎಳೆದುಕೊಂಡು ಹೋಗುತ್ತಾರೆ ದಯವಿಟ್ಟು ಬೇಗ ಬನ್ನಿ ಸಾರ್ ಎಂದು ಗಾಬರಿಯಿಂದ ಹೇಳಲು
ನಿಮ್ಮನ್ನು ಫಾಲೋ ಮಾಡಿ ಅವರನ್ನು ಹಿಡಿಯಲು ನಮ್ಮವರನ್ನು ಕಳುಹಿಸಿದ್ದೆ ಅವರು ನಿಮಗೆ ಸಿಗಲಿಲ್ಲವಾ ?
ಯಾರೋ ಸಿವಿಲ್ ಡ್ರೆಸ್ ನಲ್ಲಿದ್ದವರು ನನಗೆ ಫೋನ್ ಮಾಡಿ ನಿಮ್ಮ ರಕ್ಷಣೆಗೆ ಇದ್ದೇವೆಂದು ಹೇಳಿದ್ರು ನನಗೆ ನಂಬಿಕೆ ಬರಲಿಲ್ಲಾ ಸಾರ್
ಅವರ ಮೇಲೇಕೆ ಅನುಮಾನ ಬಂತು?
ಅವರು ಸಿವಿಲ್ ಡ್ರೆಸ್ ನಲ್ಲಿದ್ದರು ಸಾರ್
ಏನು ಹೇಳುತ್ತಿದ್ದೀರಾ? ಅವರು ಪೋಲೀಸ್ ಯೂನಿಫಾರಂನಲ್ಲಿದ್ದರೆ ಖದೀಮರು ನಿಮ್ಮ ಬಳಿ ಯಾರು ಬರುತ್ತಾರೆ?
ಸಾರಿ ಸಾರ್ ನನಗೆ ಗೊತ್ತಾಗಿಲ್ಲ ಆಗಂತುಕರು ಮನೆಗೆ ಬಂದಿದ್ದಾರೆಂದು ತಿಳಿದುಕೊಂಡು ಫೋನ್ ಮಾಡಿದೆ ಸಾರಿ ಸಾರ್ ಎಂದು ಫೋನ್ ಕಟ್ ಮಾಡಿ ಅಪ್ಪಾ ಬಾಗಿಲು ತೆಗಿ ಪರವಾಗಿಲ್ಲ
ಯಾರೋ ಏನೋ ಬಾಗಿಲು ತೆಗೆಯಬೇಡವೆಂದು ನೀನೇ ಹೇಳಿದೆ
ಅವರು ಪೋಲೀಸ್ ಸಿಬ್ಬಂದಿ ಕಣಪ್ಪಾ ರೌಡಿಗಳಿಗೆ ನನ್ನ ಫೋನ್ ನಂಬರ್ ಗೊತ್ತಿಲ್ಲ ಅವರು ಹೇಗೆ ನನಗೆ ಫೋನ್ ಮಾಡುತ್ತಾರೆ ಎನ್ನಲು
ಅವರಪ್ಪ ಧೈರ್ಯದಿಂದ ಬಾಗಿಲು ತೆಗೆದಾಗ
ಪೋಲೀಸ್ ಸಿಬ್ಬಂದಿ ಒಳಗೆ ಬಂದು ಏನ್ರೀ ನಾವು ಪೋಲೀಸ್ ರವರೆಂದು ಹೇಳಿದ್ರೂ ಮನೆಗೆ ಓಡಿಬಂದು ಬಾಗಿಲಲ್ಲಿ ಇಷ್ಟೊತ್ತು ನಿಲ್ಲುವಂತೆ ಮಾಡಿದ್ರಿ?
ಸಾರಿ ಸಾರ್ ಗೊತ್ತಾಗಲಿಲ್ಲವೆಂದಾಗ
ನಾವು ಪೋಲೀಸ್ ರವರು ನಮ್ಮ ಮುಖ ಚೆನ್ನಾಗಿ ಜ್ಞಾಪಕ ಇಟ್ಟುಕೊಳ್ಳಿ ನಾಳೆಯೂ ಇದೇರೀತಿ ಹೆದರಿಕೊಂಡೀರಿ ಧೈರ್ಯವಾಗಿರಿ
ಈ ಸನ್ನಿವೇಶದಲ್ಲಿ ಯಾರನ್ನು ಕಂಡರೂ ಭಯವಾಗುತ್ತದೆ ಸಾರ್ ಎಂದು ರಘುವೀರನು ಹೇಳಲು
ಹೌದೌದು ಸಾರ್ ಭಯವಿದ್ದಾಗ ಹಗ್ಗ ತುಳಿದರೂ ಹಾವು ತುಳಿದಂತೆ ಭಾಸವಾಗುತ್ತದೆಂದು ಅವರಪ್ಪ ಧ್ವನಿಗೂಡಿಸುತ್ತಾರೆ
ನೀವು ಇನ್ನೇನೂ ಭಯ ಪಡಬೇಡಿರಿ ನಮ್ಮ ಇಲಾಖೆ ಆ ಗುಂಪನ್ನು ಹಿಡಿಯುವವರೆಗೂ ಬಿಡುವುದಿಲ್ಲನೆಂದು ಧೈರ್ಯತುಂಬಿ ಹೋಗುತ್ತಾರೆ.
ಪೋಲೀಸ್ ಸಿಬ್ಬಂದಿ ಹೋದ ನಂತರ ರಘುವೀರನು ಒಂದು ಲೋಟ ನೀರು ಕುಡಿದು ಅಬ್ಬಾ ನನಗಂತೂ ಜೀವವೇ ಬಾಯಿಗೆ ಬಂದಂತಾಗಿತ್ತು ಇನ್ನುಮುಂದೆ ಸ್ವಲ್ಪ ಧೈರ್ಯವಾಗಿರಬಹುದು ಕಣಪ್ಪಾ
ಆ ರೌಡಿಗಳು ಸಿಗುವವರೆಗೂ ನೆಮ್ಮದಿ ಎಲ್ಲಿದೆಯಪ್ಪಾ?
ಹೌದಪ್ಪಾ ಅಲ್ಲಿಯವರೆಗೂ ಭಯದಿಂದಲೇ ದಿನದೂಡಬೇಕೆಂದು ಹೇಳಿ ಫ್ರೆಶ್ ಅಪ್ ಆಗಲು ಹೋಗುತ್ತಾನೆ.
ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ಪೋಲೀಸ್ ಅಧೀಕ್ಷಕರು ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ ವಜ್ರಗಳು ಏನಾದವು? ವಜ್ರದ ವ್ಯಾಪಾರಿಯನ್ನು ಕೊಲೆಮಾಡಿದವರು ಸಿಕ್ಕಿದ್ರಾ ಎಂದು ಪ್ರಶ್ನಿಸಿದಾಗ
ವಜ್ರದ ಹರಳುಗಳೆಲ್ಲವೂ ಕಸದ ರಾಶಿಯಲ್ಲಿ ಸೇರಿವೆ ಸಾರ್ ಎನ್ನುತ್ತಾರೆ
ಕೋಟ್ಯಾಂತರ ರೂಪಾಯಿ ಬೆಲೆಯ ವಜ್ರಗಳು ಅದು ಹೇಗೆ ಕಸದ ರಾಶಿಗೆ ಸೇರಿತು? ನೀವು ಹೇಗೆ ಬಿಟ್ರೀ?
ಸಾರ್ ನಾವು ಹುಡುಕುತ್ತಲೇ ಇದ್ದೆವು ಆದರೆ ನಮ್ಮ ಕಣ್ತಪ್ಪಿ ಹೋಗಿದೆ ಎಂದು ಇನ್ಸ್ ಪೆಕ್ಟರ್ ರವರು ನಡೆದ ಘಟನೆ ಹೇಳುತ್ತಾರೆ
ನೋಡ್ರೀ ನನಗೆ ಅದೆಲ್ಲಾ ಗೊತ್ತಿಲ್ಲಾ ವಜ್ರಗಳನ್ನು ಕಳೆದುಕೊಂಡಿರುವವರಿಗೆ ಹುಡುಕಿಕೊಡಬೇಕಾದದ್ದು ನಮ್ಮ ಕರ್ತವ್ಯ
ಆದಷ್ಟೂ ಬೇಗ ಹುಡುಕಿಸಿ ಅದರ ಮಾಲೀಕರಿಗೆ ತಲುಪಿಸಿ
ಸಾರ್ ಅದು ಕಸದ ರಾಶಿಯೊಳಗೆ ಸೇರಿದೆ ಅದರ ಮೇಲೆ ರಾಶಿ ರಾಶಿ ಕಸ ಬಿದ್ದಿದೆ ಅದನ್ನು ಹೇಗೆ ಹುಡುಕಲು ಆಗುತ್ತದೆ ಸಾರ್?
ಕಸದಲ್ಲಾದರೂ ಸೇರಿರಲಿ ಪಾತಾಳದಲ್ಲಾದರೂ ಇರಲಿ ಕ್ರೇನ್ ತರಿಸಿ ಅದರಿಂದ ಕಸವನ್ನು ವಿಂಗಡಿಸಿದರೆ ನೀಲಿ ಕೋಟು ಸಿಗುತ್ತದೆ
ಅದು ಬಹಳ ಕಷ್ಟ ಜೊತೆಗೆ ತುಂಬಾ ಹಣ ಖರ್ಚಾಗುತ್ತದೆ ಸಾರ್
ಖರ್ಚನ್ನು ವಜ್ರದ ಮಾಲೀಕರಿಂದ ವಸೂಲು ಮಾಡಿ ಅವರ ವಜ್ರಗಳನ್ನು ಅವರಿಗೆ ಕೊಡಿಸಲು ಏರ್ಪಾಡು ಮಾಡಿ ಕಿಳಿಯಿತಾ?
ಇನ್ಸ್ ಪೆಕ್ಟರ್ ಮರು ಮಾತಾಡದೆ ಆಯ್ತು ಸಾರ್ ಎನ್ಮಲು
ಅಧೀಕ್ಷಕರು ಫೋನ್ ಕಟ್ ಮಾಡುತ್ತಾರೆ
ಮಾರನೇ ದಿನ ಬೆಳಿಗ್ಗೆ ರಘುವೀರನ ತಂದೆ ವಾಕಿಂಗ್ ಮಾಡಿ ಮನೆಗೆ ಬಂದು ಪತ್ನಿಯಿಂದ ಕಾಫಿ ಪಡೆದು ಕುಡಿಯುತ್ತಾ ಟಿವಿ ಆನ್ ಮಾಡಿ ನ್ಯೂಸ್ ನೋಡುತ್ತಿರುವಾಗ
ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್ ಎಂದು ಬಿತ್ತರಿಸುತ್ತಿದ್ದು ನಗರದ ಕಸವನ್ನು ಹೊರವಲಯದಲ್ಲಿ ಹಾಕಿರುವುದನ್ನು ಯಾರೋ ರಾತ್ರಿ ವೇಳೆಯಲ್ಲಿ ಸುಮಾರು ಐದಾರು ಲಾರಿಗಳಷ್ಟು ಕಸವನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗಿದ್ದಾರೆಂದು ವರದಿ ಬಿತ್ತರಗೊಳ್ಳುತ್ತಿರುವುದನ್ನು ನೋಡಿದ ರಘುವೀರನ ಅಪ್ಪನು ಲೋ ರಘೂ ಇಲ್ಲಿ ಬಾರೋ ಯಾರೋ ಕಸವನ್ನೇ ಕದ್ದುಕೊಂಡು ಹೋಗಿದ್ದಾರಂತೆ ಇನ್ನೇನು ತಾನೇ ಬಿಡುತ್ತಾರೆ ಎಂದು ಜೋರಾಗಿ ನಗುತ್ತಾ ಮಗನನ್ನು ಕೂಗಿ ಹೇಳಲು
ಆಗತಾನೆ ಎದ್ದು ಫ್ರೆಶ್ ಅಪ್ ಆಗಿ ಮುಖವನ್ನು ಟವಲಿನಿಂದ ಒರೆಸಿಕೊಳ್ಳುತ್ತಾ ಏನಪ್ಪಾ ಅದು ಕಸವನ್ನೇ ಕದ್ದುಕೊಂಡು ಹೋಗಿದ್ದಾರಾ? ಅವರು ಯಾರೂ ಅಲ್ಲಪ್ಪ ವಜ್ರದ ಹರಳನ್ನು ಹುಡುಕುತ್ತಿರುವ ಗ್ಯಾಂಗ್ ನವರು ವಜ್ರಗಳು ಕಸದಲ್ಲಿ ಸೇರಿವೆ ಎಂದು ಬೇರೆ ಯಾರಿಗೂ ನಾನು ಹೇಳಿಲ್ಲ ಕಣಪ್ಪಾ ಎಂದು ಹೇಳಿ ಸ್ವಲ್ಪ ಹೊತ್ತು ನ್ಯೂಸ್ ನೋಡಿ
ಕೆಲಸಕ್ಕೆ ಹೊತ್ತಾಯಿತೆಂದು ಸ್ನಾನ ಮಾಡಲು ಹೋಗುತ್ತಾನೆ.
ಮುಂದುವರೆಯುತ್ತದೆ
ಡಾ. ಎನ್ ಮುರಳೀಧರ್
ವಕೀಲರು ಹಾಗೂ ಸಾಹಿತಿ
ನೆಲಮಂಗಲ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments