ದೀಪಾವಳಿ* (ಕವನ)

 *ಆತ್ಮೀಯರೇ ದೀಪಾವಳಿ ಹಬ್ಬದ ಶುಭಾಶಯಗಳೊಂದಿಗೆ..* 


*ದೀಪಾವಳಿ* (ಕವನ)


 """"""""""""""""

ದೀಪದಿಂದ ದೀಪ ಹಚ್ಚಿ

ಕಡ್ಡಿ ಗಿರಿ ಪಟಾಕಿ ಮೆಚ್ಚಿ

ಬರುವ ಶಬ್ದದಿ ಖುಷಿ ಹೆಚ್ಚಿ

ಬೆಳಕು ದುತ್ತನೆ ಮೇಲಕ್ಕೇರಿ 

ಭೂವಿಯ ತುಂಬಾ ಬರಿ ಕತ್ತಲೆ//


ನಮಗೇಕೆ ಪಟಪಟ ಪಟಾಕಿ ಸದ್ದು

ಪರಿಸರದಲ್ಲೆಲ್ಲಾ ಮಾಲಿನ್ಯದೆ ದೂಳು

ಬೇಗ ವೇಗ ಹುಡುಕಬೇಕಿದೆ ಮದ್ದು

ಇರದಿರೆ ನಮಗೆಲ್ಲ ವಿನಾಶ ತಪ್ಪದು//


ಭ್ರಷ್ಟತೆಯ ಶಬ್ದ ಮೊಳಗುತಿದೆ ಎಲ್ಲೆಡೆ 

ಶೋಷಣೆಯ ಶಬ್ದ ಮುಗಿಲು ಮುಟ್ಟಿದೆ

ಅಸಮಾನತೆಯ ಶಬ್ದ ದೇಶದಲ್ಲೆಡೆ ಹರಡಿದೆ

ಪಟಾಕಿ ಶಬ್ದದಡಿ ಎಲ್ಲವ ಮರೆಸಿದೆ//


ದೀಪವ ಉರಿಸಿ ಬೆಳಕನು ಬರಿಸೋಣ 

ಪ್ರೀತಿ ಕರುಣೆಯಿಂದ ಅಂಧಕಾರವ ಓಡಿಸೋಣ

ಕತ್ತಲೆಯಿಂದ ಬೆಳಕಿನೆಡೆ ಎಲ್ಲರ ಸೇರಿಸೋಣ 

ಅಜ್ಞಾನದಿಂದ ಜ್ಞಾನದೆಡೆ ಸಾಗಿಸೋಣ 

ಸಮರಸದಿ ಬಾಳೋಣ ಎಲ್ಲರ  ಬೆರೆಸೋಣ//


             **********

ಗಣಪತಿ ಗೋ ಚಲವಾದಿ (ಗಗೋಚ)

ಬಿಎಂಟಿಸಿ ನಿರ್ವಾಹಕರು

ಮಯೂರವರ್ಮ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು

Image Description

Post a Comment

0 Comments