*ಈ ಸರ್ವರ ಕಾಟಕ್ಕೆ ಮುಕ್ತಿ ಯಾವಾಗ?*?
ರಾಯಬಾಗ: ಪಡಿತರ ಚೀಟಿಯಲ್ಲಿ ಫಲಾನುಭವಿಗಳ ತಿದ್ದುಪಡಿ,ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರ್ಪಡೆ ಹಾಗೂ ಪಡಿತರ ವಿತರಣಾ ಕೇಂದ್ರ ಬದಲಾವಣೆ ಮಾಡಲು ರಾಜ್ಯ ಆಹಾರ ಇಲಾಖೆ ಇತ್ತೀಚೆಗೆ 2 ನೇ ಬಾರಿಗೆ ಬೆಂಗಳೂರು, ಕಲಬುರ್ಗಿ, ಹಾಗೂ ಬೆಳಗಾವಿ ವಲಯಗಳಿಗೆ ಪ್ರತ್ಯೇಕ ದಿನಾಂಕವನ್ನು ನಿಗಧಿಗೊಳಿಸಿತ್ತು. ಆರಂಭದಿಂದ ನಿಗದಿಪಡಿಸಿದ ದಿನಾಂಕ ಮುಗಿಯುವವರೆಗೂ ಸರ್ವರ ಇಲ್ಲದೇ ಸಾರ್ವಜನಿಕರು, ವೃದ್ಧರು ಹಾಗೂ ಮಕ್ಕಳು ಗ್ರಾಮ ಒನ್ ಕೇಂದ್ರಗಳ ಮುಂದೆ ಸುಡು ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತರೂ ಫಲಕಾರಿಯಾಗಿಲ್ಲ. ಇದರಿಂದ ಗ್ರಾಮೀಣ ಭಾಗದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿನ ನಾಗರಿಕರು ಈ ಸರ್ವರ್ ತೀವ್ರ ತೊಂದರೆ ಯಾತನೆಗಳನ್ನು ಅನುಭವಿಸಿದರು. ಆರಂಭದಲ್ಲಿ ಬೆಂಗಳೂರು ವಲಯಕ್ಕೆ ಮಾತ್ರ ಸರ್ವರ್ ತೊಡಕು ಆಗಿಲ್ಲದಿರುವುದು ಗಮನಾರ್ಹ. ಕೂಲಿ ಮಾಡಿ ಹೊಟ್ಟೆ ತುಂಬಿಕೊಳ್ಳುವ ಕಡು ಬಡ ಕಾರ್ಮಿಕರು ತಮ್ಮ ನಿತ್ಯ ಕೆಲಸ ಕಾರ್ಯಗಳನ್ನು ಬಿಟ್ಟು ಈ ಸರ್ವರ್ ಕಾಟದಿಂದ ಪದದಾಟ ನಡೆಸಿ ನಿರಾಶರಾಗಿ ರೋಸಿ ಹೋಗಿ ಬೇಸರಿಸಿದ್ದಾರೆ. ಈ ದುಸ್ಥಿತಿ ತಪ್ಪಿಸಲು ಸಂಬಂಧಿಸಿದ ಅಧಿಕಾರಿಗಳು ಆಗಾಗ ಎಲ್ಲರಿಗೂ ತಲೆನೋವಾಗಿ ಪರಿಣಮಿಸಿದ ಈ ಸರ್ವರ್ ಕಿರಿ ಕಿರಿಗೆ ಪರ್ಯಾಯ ಮಾರ್ಗೋಪಾಯಗಳನ್ನು ಹಾಗೂ ಸೂಕ್ತ ಪರಿಹಾರ ಕಂಡುಹಿಡಿದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಬೇಕಾಗಿದೆ. ಈ ಸರ್ವರ ಕಾಟಕ್ಕೆ ಮುಕ್ತಿ ಯಾವಾಗ? ಎಂದು ಹಲವಾರು ಫಲಾನುಭವಿ ಜನರು ಮಾಧ್ಯಮದವರ ಮುಂದೆ ತಮ್ಮ ಅಳಲು ತೋಡಿಕೊಂಡರು.
*ಡಾ. ಜಯವೀರ ಎ.ಕೆ. ಖೇಮಲಾಪುರ*,
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments