*ನಾಳೆ ದಿನಾಂಕ 17-10-2023. ನವರಾತ್ರಿಯ 3ನೇ ದಿನ ಚಂದ್ರಘಂಟಾ ಪೂಜೆ; ದುರ್ಗಾ ಮಾತೆಯ ಮೂರನೇ ಶಕ್ತಿಯ ಮಹತ್ವ ತಿಳಿಯಿರಿ*
ನವರಾತ್ರಿಯ ಮೂರನೇ ದಿನದಂದು ಚಂದ್ರ ಘಂಟಾ ಪೂಜೆ ಕೈಗೊಳ್ಳಲಾಗುತ್ತದೆ. ಶಾಂತಿ ಸ್ವರೂಪಿಯಂತೆ ಕಾಣುವ ಚಂದ್ರಘಂಟಾ ದೇವಿಯ ಪೂಜೆ ಮಾಡಿದರೆ ನ್ಮಜನ್ಮಾಂತರದ ಪಾಪವು ಮರೆಯಾಗುತ್ತದೆ. ಅಗೋಚರ ಬಂಧದಿಂದಲೂ ಬಿಡುಗಡೆಯಾಗಬಹುದು ಎಂದು ಜ್ಯೋತಿಷಿ ಎಚ್. ಸತೀಶ್ ಈ ಲೇಖನದಲ್ಲಿ ತಿಳಿಸಿದ್ದಾರೆ.
ಮಂತ್ರ ತಂತ್ರ ಮುಂತಾದ ವಿಧಿ ವಿಧಾನಗಳಿಂದ ಪೂಜೆಗೈಯುವ ದುರ್ಗಾ ಮಾತೆಯ ಮೂರನೆಯ ಶಕ್ತಿಯ ಹೆಸರೇ ಚಂದ್ರ ಘಂಟ. ನವರಾತ್ರಿಯ 3ನೆಯ ದಿನದಂದು ಈಕೆಯ ಪೂಜೆಯನ್ನು ಮಾಡಲಾಗುತ್ತದೆ. ನೋಡಲು ಶಾಂತಿ ಸ್ವರೂಪಿಯಂತೆ ಕಾಣುತ್ತಾಳೆ. ಮಸ್ತಕದಲ್ಲಿ ಘಂಟೆಯನ್ನು ಹೋಲುವ ಅರ್ಧ ಚಂದ್ರನಿದ್ದಾನೆ. ಈ ಕಾರಣದಿಂದಲೇ ಈಕೆಗೆ ಚಂದ್ರ ಘಂಟ ಎಂಬ ಹೆಸರು ಬಂದಿದೆ. ಪ್ರತಿಯೊಂದು ಕೈಗಳಲ್ಲಿಯೂ ಆಯುಧಗಳನ್ನು ಹಿಡಿದುತನ್ನ ವಾಹನವಾದ ಸಿಂಹದ ಮೇಲೆ ಈಕೆ ಕುಳಿತಿದ್ದಾಳೆ. ಇವಳ ಆಕೃತಿ ರಾಕ್ಷಸರನ್ನು ಸಂಹರಿಸಲು ಹೊರಟಂತಿದೆ.
ನವರಾತ್ರಿಯ ಮೂರನೆಯ ದಿನದ ಪೂಜೆಯು ಅತಿ ವಿಶೇಷವಾಗುತ್ತದೆ. ಇಂದಿನ ಪೂಜೆಯಿಂದ ಹೊಸದಾದ ಅನುಭವ ಉಂಟಾಗುತ್ತದೆ. ವಿಶೇಷವಾದ ಧ್ವನಿಗಳ ಕಾರಣ ಮನಸ್ಸಿಗೆ ಅಗೋಚರವಾದ ಆನಂದ ಲಭ್ಯವಾಗುತ್ತದೆ.
ಈ ದೇವಿಯ ಪೂಜೆ ಮಾಡಿದರೆ ಜನ್ಮಜನ್ಮಾಂತರದ ಪಾಪವು ಮರೆಯಾಗುತ್ತದೆ. ಅಗೋಚರ ಬಂಧದಿಂದಲೂ ಬಿಡುಗಡೆಯಾಗಬಹುದು. ಭಕ್ತಿಯಿಂದ ಬೇಡಿದಲ್ಲಿ ಭಕ್ತರ ಜೀವನದ ಕಷ್ಟ ನಷ್ಟಗಳನ್ನು ದೂರ ಮಾಡುತ್ತಾಳೆ. ಇವಳ ಕೈಯಲ್ಲಿರುವ ಘಂಟೆಯನಾದವು ಭಕ್ತರನ್ನು ಕಾಪಾಡಲು ಅನುವಾಗುತ್ತದೆ. ಕೇವಲ ಈ ಶಬ್ದದಿಂದಲೇ ಭೂತ ಪ್ರೇತಗಳು ದೂರ ಉಳಿಯುತ್ತವೆ ಎಂದು ಹೇಳಲಾಗಿದೆ.
ಈಕೆಯ ಪೂಜೆಯಿಂದ ಲಭಿಸುವ ಮತ್ತೊಂದು ಬಲವೆಂದರೆ ಆತ್ಮ ಬಲ. ಕೆಟ್ಟ ಜನರ ಅಂತ್ಯಕ್ಕಾಗಿಯೇ ಜನ್ಮ ತಳೆದ ದುರ್ಗೆಯು ಭಕ್ತರ ಕಣ್ಣಿಗೆ ಶಾಂತಿಯಿಂದ ಕಾಣುವಂತೆ ಮಾಡುತ್ತದೆ. ಈಕೆಯನ್ನು ನೋಡಿದ ಭಕ್ತಾದಿಗಳು ಮಾನಸಿಕ ಶಾಂತಿ ಮತ್ತು ಸಂತಸವನ್ನು ಪಡೆಯುತ್ತಾನೆ. ಈಕೆಯ ಸುತ್ತ ಇರುವ ಬೆಳಕಿನ ಹೃದಯವು ಕೇವಲ ಸಾಧಕರಿಗೆ ಕಾಣುತ್ತದೆ. ಸಂಗೀತ, ನಾಟ್ಯ, ವಚನ, ಸಾಹಿತ್ಯ ಮುಂತಾದ ವಿಧಿ ವಿಧಾನಗಳಿಂದ ದೇವಿಯ ಮನಸ್ಸನ್ನು ಗೆಲ್ಲಬಹುದು. ಈಕೆಯ ಉಪಾಸನೆಯಿಂದ ಸಂಸಾರಿಕ ಕಷ್ಟದಿಂದ ದೂರವಾಗಬಹುದು.
ವಾರಣಾಸಿಯಲ್ಲಿರುವ ಚಂದ್ರಘಂಟಾ ದೇವಾಲಯವು ಚಂದ್ರಘಂಟಾ ರೂಪದಲ್ಲಿ ದುರ್ಗಾದೇವಿಗೆ ಸಮರ್ಪಿತವಾಗಿದೆ. ಇದು ದುರ್ಗೆಯ ಒಂಬತ್ತು ರೂಪಗಳಲ್ಲಿ ಮೂರನೆಯದು. ಚಂದ್ರಘಂಟಾ ರೂಪದಲ್ಲಿ, ದುರ್ಗಾ ದೇವಿಯು ತನ್ನ ಮೂರನೇ ಕಣ್ಣು ತೆರೆದಿರುವಂತೆ ಕಾಣುತ್ತಾಳೆ. ಅವಳನ್ನು ಯುದ್ಧದ ದೇವತೆ ಎಂದು ಕರೆಯಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ಜನರು ಶೌರ್ಯ ಮತ್ತು ಧೈರ್ಯದ ಆಶೀರ್ವಾದವನ್ನು ಪಡೆಯಲು ದುರ್ಗಾ ದೇವಿಯ ಚಂದ್ರಘಂಟಾ ರೂಪವನ್ನು ಪ್ರಾರ್ಥಿಸುತ್ತಾರೆ.
ವಾರಣಾಸಿಯಲ್ಲಿರುವ ಚಂದ್ರಘಂಟಾ ದೇವಿ ಮಂದಿರವು ಜೈತಪುರಿಯಲ್ಲಿದೆ. ನವರಾತ್ರಿಯ ಮೂರನೇ ದಿನದಂದು ಭಕ್ತರು ದೇವಾಲಯದಲ್ಲಿ ಸೇರುತ್ತಾರೆ. ತೆಂಗಿನಕಾಯಿಗಳು ಕೆಂಪು ಬಟ್ಟೆ ಮತ್ತು ಕೆಂಪು ಹೂವುಗಳಿಂದ ಪೂಜಿಸುತ್ತಾರೆ.
ಸಮಸ್ತ ಜನತೆಗೆ ನವರಾತ್ರಿಯ ಮೂರನೇ ದಿನದ ಶುಭಾಶಯಗಳು.💐
ಸಂಜಯ ಎಸ್ ಗುರವ.
ಕರ್ನಾಟಕ ರಾಜ್ಯ ಉಪಾಧ್ಯಕ್ಷರು.
ರಾಷ್ಟ್ರೀಯ ಗುರವ ಸಮಾಜ ಮಹಾಸಂಘ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments