*ಕರುಣಾಳು ನೀನಾದೆ *

 🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏


ಶೀರ್ಷಿಕೆ :

 *ಕರುಣಾಳು ನೀನಾದೆ*


ಓ ನನ್ನ ಬಾಳ ಗೆಳೆಯನೇ

ಒಲವ ತುಂಬಿದ ಚೆಲುವನೇ

ನಿನ್ನಯ ಪ್ರೀತಿಯ ಅರಮನೆ

ನನಗಾಗಿ ತೆರೆದು ಕಾದಿರುವನೇ


ಎನ್ನ ಬಾಳಿಗೆ ಜೀವವಾದೆ

ಹೃದಯದ ಕೂಗಿಗೆ ಕೋಗಿಲೆ ಯಾದೆ

ಮನಸಿನ ಮಾತಿಗೆ ಮುದವಾದೆ

ಕರುಣೆಯ ಕಣ್ಣಿಗೆ ಕರುಣಾಳು ನೀನಾದೆ


ಎಂದೋ ಕೂಡಿ ಆಡಿದ ನೆನಪು

ಮಿಡಿಯಿತು ಮನದ ಮುಡಿಪು

ಬೆರೆತು ಸ್ನೇಹ ಸಲಿಗೆಯಾದ ಹುರುಪು

ಅದೇ ಕಾರಣ ವಾಯ್ತು ಕಣ್ ಮಿರುಪು


ಮಾಡಿದ ಸ್ನೇಹಕ್ಕೆ ಬೆಲೆ ಕಟ್ಟ ದಾದೆ

ಕೂಡಿದ ಕಂಕಣ ಭಾಗ್ಯಕ್ಕೆ ಕಟಿ ಬದ್ದಳಾದೆ

ಬಾಳ ಪಯಣಿಗ ನೀನೆಂದು ಜೊತೆಯಾದೆ

ನನ್ನ ಒಲುಮೆಯ ಗೆಳೆಯ ಸಂಗಾತಿಯಾದೆ.


✍️ *ಮಳೆಬಿಲ್ಲು ಲೀಲಾ ಗುರುರಾಜ್* ತುಮಕೂರು.


Image Description

Post a Comment

0 Comments