ಆಗಂತುಕ ಕಾದಂಬರಿ
ಸಂಚಿಕೆ- ೨
ಹಿಂದಿನ ಸಂಚಿಕೆಯಲ್ಲಿ
ಬಸ್ಸಿನಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಇಬ್ಬರು ಯುವಕರನ್ನು ಹಿಡಿದು ಠಾಣೆಗೆ ಕರೆತಂದು ಮಾದಕ ವಸ್ತು ನಿಮಗೆ ಹೇಗೆ ದೊರೆಯಿತೆಂದು ಇನ್ಸ್ ಪೆಕ್ಟರ್ ಎಷ್ಟೇ ಕೇಳಿದರೂ ಅವರು ಬಾಯಿ ಬಿಡುವುದಿಲ್ಲ
ಕಥೆಯನ್ನು ಮುಂದುವರೆಸುತ್ತಾ
ಯುವಕರಿಗೆ ಎಷ್ಟು ಹೊಡೆದರೂ ಮಾದಕ ವಸ್ತುಗಳ ವಿವರಗಳ ಬಗ್ಗೆ ಬಾಯಿ ಬಿಡದೇ ಇದ್ದುದ್ದರಿಂದ ಇನ್ಸ್ ಪೆಕ್ಟರ್ ರವರಿಗೆ ವಿಪರೀತ ಕೋಪಬಂದಿರುತ್ತದೆ ಇನ್ನೂ ಹೆಚ್ಚಿಗೆ ಹೊಡೆದು ಸತ್ತುಹೋದರೆ ಲಾಕಪ್ ಡೆತ್ ಆಗಿ ನಮ್ಮ ತಲೆಗೆ ಬರುತ್ತದೆಂದು ದಫೇದಾರರನ್ನು ಕರೆದು ಇವರಿಗೆ ಏರೋಪ್ಲೇನ್ ಹತ್ತಿಸಿ ಆಗಲಾದರೂ ಬಾಯಿ ಬಿಡುತ್ತಾರೆಂದು ಹೇಳಿದರೂ ಆ ಯುವಕರು ಏನೂ ಮಾತನಾಡದೆ ಮೌನವಾಗಿರುತ್ತಾರೆ
ನಿಮ್ಮ ಮೊಬೈಲ್ ಕೊಡ್ರೋ. ನೀವು ಯಾರಿಗೆ ಫೋನ್ ಮಾಡಿದ್ದೀರಿ ನೋಡೋಣವೆನ್ನಲು
ನಮ್ಮಲ್ಲಿ ಮೊಬೈಲ್ ಇಲ್ಲಾ ಸಾರ್ ನಾವುಗಳು ಮೊಬೈಲ್ ಯೂಸ್ ಮಾಡುವುದೇ ಇಲ್ಸವೆಂದಾಗ
ಇವರನ್ನು ಮೊದಲು ಎಳೆದುಕೊಂಡು ಹೋಗಿ ಏರೋಪ್ಲೇನ್ ಹತ್ತಿಸ್ರೀ ಬಡ್ಡಿಮಕ್ಕಳು ಆಗಲಾದರೂ ಬಾಯಿ ಬಿಡುತ್ತಾರೆಂದು ಹೇಳಲು
ದಫೇದಾರರು ಅವರಿಬ್ಬರನ್ನು ಒಳಗೆ ಕರೆದುಕೊಂಡು ಹೋಗುತ್ತಿರುವಾಗ
ಸಾರ್ ನಮಗೇನೂ ಗೊತ್ತಿಲ್ಲಾ ಸಾರ್ ಅದು ನಮ್ಮ ಬ್ಯಾಗ್ ಅಲ್ಲಾ ಸಾರ್ ನಮ್ಮ ಪಕ್ಕ ಕುಳಿತಿದ್ದವನ ಬ್ಯಾಗ್ ನಮ್ಮನ್ನು ಬಿಟ್ಟು ಬಿಡಿ ಸಾರ್ ಎಂದು ಅಂಗಲಾಚಿದರೂ
ನಿಮ್ಮ ಬ್ಯಾಗ್ ಅಲ್ಲದಿದ್ದರೆ ಅವನ್ಯಾರೋ ಫೋನ್ ಮಾಡಿ ನಿಮ್ಮನ್ನು ಬಿಡಿಸಲು ಕೇಳುತ್ತಿದ್ದ? ನಡೀರೋ ಒಳಗೆ ಎನ್ನುತ್ತಾ ದಫೇದಾರ್ ಅವರ ಕುತ್ತಿಗೆಯ ಮೇಲೆ ಎರಡು ಹೊಡೆದು ನೆಲದ ಮೇಲೆ ಕೂಡಿಸಿ ನಿಮಗೆ ನಮ್ಮ ಟ್ರೀಟ್ ಮೆಂಟ್ ಕೊಡುವವರೆಗೂ ನೀವುಗಳು ಬಾಯಿ ಬಿಡುವುದಿಲ್ಲ ಅಲ್ಲವೇನ್ರೋ. ಬಡ್ಡಿ ಮಕ್ಕಳಾ.
ಇಲ್ಲಾ ಸಾರ್ ನಮಗೇನೂ ಗೊತ್ತಿಲ್ಲಾ ಸಾರ್ ಯಾರೋ ಒಬ್ಬ ಬಂದು ಈ ಬ್ಯಾಗನ್ನು ನಮ್ಮ ಮನೆಗೆ ತಲುಪಿಸಿರೆಂದು ಹೇಳಿದ ಸಾರ್ ಎಂದು ಹೇಳಿದಾಗ
ಅವನು ಯಾರೆಂದು ದಫೇದಾರರು ಅವರ ಬಾಯಿ ಬಿಡಿಸಲು ಪ್ರಯತ್ನಿಸಿರುವಾಗ
ಪುನಃ ಇನ್ಸ್ ಪೆಕ್ಟರ್ ಗೆ ಅದೇ ಅಪರಿಚಿತ ನಂಬರಿಂದ ಕರೆ ಬಂದಿದ್ದು
ಇನ್ಸ್ ಪೆಕ್ಟರ್ ರಿಸೀವ್ ಮಾಡಿ ಯಾರೋ ನೀನು ಎಂದು ದರ್ಪದಿಂದ ಕೇಳಲು
ನಾನು ಯಾರಾದರೇನು ? ಮೊದಲು ನೀನು ಹಿಡಿದಿರುವ ಇಬ್ಬರನ್ನು ರಿಲೀಸ್ ಮಾಡು ಇಲ್ಲದಿದ್ದರೆ ಪರಿಣಾಮ ನೆಟ್ಟಗಿರಲ್ಲಾ ಹುಷಾರ್ ಎನ್ನುತ್ತಾರೆ
ನೀನ್ಯಾರೆಂದು ಮೊದಲು ಹೇಳು ನಿನಗೂ ಇದಕ್ಕೂ ಏನೋ ಸಂಬಂಧ?
ನಾನು ಯಾರಾದರೇನು ಮಗಾ…. ನಾನು ಹೇಳಿದಂತೆ ಕೇಳು ನೀನು ಹಿಡಿದಿರುವ ಇಬ್ಬರನ್ನು ಬಿಟ್ಟು ಬಿಡು ಅಷ್ಟೇ
ಅವರನ್ನು ಬಿಡುವುದಿಲ್ಲ ಏನು ಮಾಡುತ್ತೀಯಾ? ಇಂದೇ ಕೋರ್ಟಿಗೆ ಹಾಜರುಪಡಿಸುತ್ತೇನೆ ಬೇಕಿದ್ದರೆ ಕೋರ್ಟಿಗೆ ಬಂದು ಬಿಡಿಸಿಕೋ ತಿಳಿಯಿತಾ ಎಂದು ಅವನ ಉತ್ತರಕ್ಕೂ ಕಾಯದೆ ಫೋನ್ ಕಟ್ ಮಾಡಿ ಬೇರೆ ಕೆಲಸದಲ್ಲಿ ನಿರತರಾಗುತ್ತಾರೆ
ಅರ್ಧಗಂಟೆಯ ನಂತರ ನಾಲ್ಕು ಜನರು ಠಾಣೆಗೆ ಬಂದು ಇನ್ಸ್ ಪೆಕ್ಟರ್ ಮುಂದೆ ಇದ್ದ ಕುರ್ಚಿಯಲ್ಲಿ ಕುಳಿತುಕೊಂಡು ರೀ ಇನ್ಸ್ ಪೆಕ್ಟರ್ ನೀವು ಇಲ್ಲಿರಬೇಕೆಂದರೆ ನೀವು ಹಿಡಿದಿರುವ ಯುವಕರನ್ನು ಬಿಡುವಂತೆ ಅವಾಜ್ ಹಾಕಿದಾಗ
ನೀವು ಯಾರು ನನಗೆ ಹೇಳುವುದಕ್ಕೆ? ನಿಮ್ಮ ಕೆಲಸ ನೀವು ನೋಡಿಕೊಳ್ಳಿ ನನ್ನ ಕೆಲಸ ನಾನು ಮಾಡುತ್ತೇನೆ ಎನ್ನುತ್ತಾರೆ
ಓ ಹೋ ಹಾಗೋ ನೀವು ಯುವಕರನ್ನು ಬಿಡುವವರೆಗೂ ನಿಮ್ಮ ಕೆಲಸ ಮಾಡಲು ನಾವು ಬಿಡುವುದಿಲ್ಲ ಅದು ಗೊತ್ತಾ ?
ಏನ್ ಹೆದರಿಸುತ್ತೀರಾ? ನೀವು ಏನು ಬೇಕಾದರೂ ಮಾಡಿಕೊಳ್ಳಿ ಅವರನ್ನು ಬಿಡುವುದಿಲ್ಲವೆಂದು ಖಡಾ ಖಂಡಿತವಾಗಿ ಇನ್ಸ್ ಪೆಕ್ಟರ್ ಹೇಳಿದಾಗ
ಬಂದಿದ್ದವರಿಗೆ ಕೋಪಬಂದು ಇನ್ಸ್ ಪೆಕ್ಟರ್ ಗೂ ಅವರಿಗೂ ಜೋರಾಗಿ ಮಾತಿನ ಚಕಮಕಿ ನಡೆಯುತ್ತಿರುತ್ತದೆ ಯಾರೂ ಮಾತು ನಿಲ್ಲಿಸುವ ಲಕ್ಷಣ ಕಾಣುವುದಿಲ್ಲ.
ಆಗ ಸುಮಾರು ಹತ್ತು ಜನರಿದ್ದ ಅಪರಿಚಿತ ಗುಂಪೊಂದು ಏಕಾ ಏಕಿ ಠಾಣೆಗೆ ನುಗ್ಗಿ ಅಲ್ಲಿದ್ದ ನಾಲ್ಕೈದು ಸಿಬ್ಬಂದಿಗಳಿಗೆ ಥಳಿಸಿ ಎದುರಿಗೆ ಬಂದ ಇನ್ಸ್ ಪೆಕ್ಟರಿಗೂ ಥಳಿಸಿ ಅವರನ್ನು ಕೆಳಕ್ಕೆ ಬೀಳಿಸಿ ಅವರಲ್ಲಿದ್ದ ಮೊಬೈಲ್ ಫೋನನ್ನು ದೋಚಿಕೊಂಡು ಇಬ್ಬರು ಯುವಕರನ್ನು ಬಿಡಿಸಿಕೊಂಡು ಸೀಸ್ ಮಾಡಿದ್ದ ಡ್ರಗ್ಸ್ ನೊಂದಿಗೆ ಓಡಿ ಹೋಗುತ್ತಾರೆ
ಅಪರಿಚಿತರ ಅನಿರೀಕ್ಷಿತ ದಾಳಿಯಿಂದ ಕೆಳಕ್ಕೆ ಬಿದ್ದ ಇನ್ಸ್ ಪೆಕ್ಟರ್ ರವರು ಮೇಲೆದ್ದು ಕಂಗಾಲಾಗಿ ಮೈ ಕೈ ಕೊಡವಿಕೊಂಡು ಎಲ್ಲಿದ್ದೀರಾ ಎಲ್ಲರೂ ? ಹಿಡಿಯಿರಿ ಅವರನ್ನು ಎಂದು ಕೂಗಿದರೂ ಯಾರೂ ಕೂಡಾ ಎದ್ದು ಬರುವ ಸ್ಥಿತಿಯಲ್ಲಿರುವುದಿಲ್ಲ ತಕ್ಷಣ ಮೇಲಧಿಕಾರಿಗಳಿಗೆ ಫೋನ್ ಮಾಡೋಣವೆಂದು ಮೊಬೈಲ್ ಹುಡುಕಿದಾಗ ಮೊಬೈಲ್ ಇರುವುದೇ ಇಲ್ಲ ಛೇ ಮೊಬೈಲ್ ದೋಚಿಕೊಂಡು ಹೋಗಿದ್ದಾರೆ ರಾಸ್ಕಲ್ಸ್ ಗಳೆಂದು ನಿಂದಿಸುತ್ತಾ ದಫೇದಾರ್ ಫೋನ್ ಪಡೆದು ತಮ್ಮ ಮೊೂೈಲ್ ನಂಬರನ್ನು ಬ್ಲಾಕ್ ಮಾಡಿಸಿ ಅದೇ ಫೋನಿನಿಂದ ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ ತಕ್ಷಣ
ಮೇಲಧಿಕಾರಿಗಳ ತಂಡ ಆಗಮಿಸುವ ವೇಳೆಗೆ ಮಾದ್ಯಮದವರೆಲ್ಲರೂ ಹಾಜರಾಗಿದ್ದು
ಇನ್ಸ್ ಪೆಕ್ಟರ್ ರವರಿಗೆ ಘಟನೆ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಪಡೆಯುತ್ತಿರುವುದು ಟಿವಿ ಮಾದ್ಯಮಗಳಲ್ಲಿ ಲೈವ್ ಟೆಲಿಕಾಸ್ಟ್ ಆಗುತ್ತಿರುತ್ತದೆ
ಇದನ್ನು ವೀಕ್ಷಿಸಿದ ಜನತೆಯ ಅಭಿಪ್ರಾಯ ಒಬ್ಬೊಬ್ಬರು ಒಂದೊಂದು ರೀತಿ ಇರುತ್ತದೆ . ಸಾಕಷ್ಟು ಜನ ಸಿಬ್ಬಂದಿಯನ್ನು ನೇಮಿಸುವುದಕ್ಕೇನಾಗಿದೆಯೆಂದು ನಿಂದಿಸುತ್ತಿದ್ದರೆ ಸರಿಯಾದ ಇನ್ಸ್ ಪೆಕ್ಟರ್ ರವರನ್ನು ನೇಮಿಸಬೇಕೆಂದು ಇನ್ನೂ ಕೆಲವರ ಅಭಿಪ್ರಾಯವಾಗಿರುತ್ತದೆ
ವಿರೋಧ ಪಕ್ಷದವರಂತೂ ಸರ್ಕಾರದ ವೈಫಲ್ಯವೆಂದು ಖಂಡಿಸುತ್ತಿರುವುದು ಸಾಮಾನ್ಯವಾಗಿದ್ದು
ಇನ್ನುಮುಂದೆ ಈ ರೀತಿ ಘಟನೆಗಳು ಮರುಕಳಿಸದಂತೆ ತಡೆಯಲು ಸರ್ಕಾರವು ಆ ಠಾಣೆಗೆ ಒಳ್ಳೆಯ ಇನ್ಸ್ ಪೆಕ್ಟರನ್ನು ನೇಮಕ ಮಾಡಿರುತ್ತದೆ
ಮಾರನೇ ದಿನವೇ ದಕ್ಷ ಪೋಲೀಸ್ ಅಧಿಕಾರಿಯೆಂದು ಹೆಸರು ಮಾಡಿದ್ದ ಚಂದ್ರಮೋಹನ್ ಎಂಬ ಇನ್ಸ್ ಪೆಕ್ಟರ್ ಠಾಣೆಗೆ ಹಾಜರಾಗಿ ಇನ್ನೇನು ಅಧಿಕಾರ ಸ್ವೀಕರಿಸಬೇಕು ಎನ್ನುವಷ್ಟರಲ್ಲಿ
ಕೆಲವು ಮುಖಂಡರುಗಳು ಸ್ಥಳೀಯರೊಂದಿಗೆ ಠಾಣೆಗೆ ಬಂದು ಈ ನಿಷ್ಠಾವಂತ ಇನ್ಸ್ ಪೆಕ್ಟರ್ ವರ್ಗಾವಣೆಯನ್ನು ನಾವುಗಳು ಖಂಡಿಸುತ್ತೇವೆ ಯಾವುದೇ ಕಾರಣಕ್ಕೂ ಇವರನ್ನು ಈ ಠಾಣೆಯಿಂದ ವರ್ಗಾವಣೆ ಮಾಡಲು ಒಪ್ಪುವುದಿಲ್ಲವೆನ್ನುತ್ತಾರೆ
ಹೊಸದಾಗಿ ಬಂದಿದ್ದ ಇನ್ಲ್ ಪೆಕ್ಟರ್ ಮಾತನಾಡಿ ಸರ್ಕಾರವೇ ನನ್ನನ್ನು ಈ ಠಾಣೆಗೆ ವರ್ಗಾವಣೆ ಮಾಡಿದೆ ನಿಮ್ಮದೇನ್ರೀ ತಕರಾರು ಎಂದು ಏರು ಧ್ವನಿಯಲ್ಲಿ ಹೇಳಿದಾಗ
ಸ್ವಾಮೀ ಇದರಲ್ಲಿ ನಿಮ್ಮದೇನೂ ತಪ್ಪಿಲ್ಲ ದಯವಿಟ್ಟು ನೀವು ಹಿಂದಿರುಗಿ ಹೋಗಿ ನಮಗೆ ಹಳೆಯ ಇನ್ಸ್ ಪೆಕ್ಟರ್ ರವರೇ ಇರಲಿ ಎನ್ನಲು
ಇದು ಮೇಲಧಿಕಾರಿಗಳ ಆದೇಶ ಅವರ ಆದೇಶದಂತೆ ನಾನಿಲ್ಲಿಗೆ ಬಂದಿದ್ದೇನೆ . ನಾನೇನೂ ಮಾಡುವುದಕ್ಕೆ ಆಗುವುದಿಲ್ಲ ಎನ್ನಲು
ನಮ್ಮ ಪ್ರತಿಭಟನೆಯನ್ನು ನಿಮ್ಮ ಮೇಲಧಿಕಾರಿಗಳಿಗೆ ಹೇಳಿರಿ ಅವರೇ ಬಂದು ನೋಡಿ ನಿಮ್ಮನ್ನು ವಾಪಸ್ ಕರೆಸಿಕೊಳ್ಳಲಿ ಎಂದು ಮುಖಂಡರುಗಳು ಹೇಳಿದ ಮಾತನ್ನು
ಹೊಸ ಇನ್ಸ್ ಪೆಕ್ಟರ್ ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ ತಕ್ಷಣ
ಮೇಲಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದು ಪ್ರತಿಭಟನಾಕಾರರನ್ನು ಸಮಾಧಾನ ಮಾಡಲು ಎಷ್ಟೇ ಯತ್ನಿಸಿದರೂ
ಯಾರೂ ಬಡಪೆಟ್ಟಿಗೂ ಇನ್ಸ್ ಪೆಕ್ಟರ್ ವರ್ಗಾವಣೆಯನ್ನು ಒಪ್ಪುವುದಿಲ್ಲ .
ಘಟನೆ ನಡೆದ ತಕ್ಷಣ ಒಬ್ಬ ಇನ್ಸ್ ಪೆಕ್ಟರನ್ನು ವರ್ಗಾವಣೆ ಮಾಡಿ ಬೇರೆ ಇನ್ಸ್ ಪೆಕ್ಟರನ್ನು ನೇಮಿಸಿ ಅವರನ್ನು ಹೀರೋ ಎಂಬಂತೆ ಬಿಂಬಿಸಿ ನಿಷ್ಠಾವಂತ ಅಧಿಕಾರಿಯನ್ನು ತೇಜೋವಧೆ ಮಾಡುವುದಕ್ಕೆ ಇದು ಸಿನಿಮಾ ಅಲ್ಲ ನಿಜ ಜೀವನ ಸ್ವಾಮೀ ಹೊಸಬ ಅಧಿಕಾರಿಯು ಸಿನಿಮಾದಲ್ಲಿನ ಹೀರೋನಂತೆ ಹತ್ತು ಜನರು ಬಂದರೂ ಹೊಡೆಯುವುದಕ್ಕೆ ಆಗುವುದಿಲ್ಲ . ಈ ಠಾಣೆಗೆ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿ ಆಗ ಹಾಲಿ ಇನ್ಸ್ ಪೆಕ್ಟರ್ ಗೆ ಬಲ ಬರುತ್ತದೆ ತಕ್ಷಣ ವರ್ಗಾವಣೆ ಆದೇಶವನ್ನು ವಾಪಸ್ ಪಡೆಯಿರೆಂದು ಆಗ್ರಹಿಸುತ್ತಾರೆ
ಬಂದ ಅಧಿಕಾರಿಗಳು ವಾಪಸ್ ಹೋಗಿ ಸರ್ಕಾರಕ್ಕೆ ಜನಗಳ ಅಭಿಪ್ರಾಯವನ್ನು ತಿಳಿಸಿದಾಗ
ಸರ್ಕಾರವು ಇನ್ಸ್ ಪೆಕ್ಟರ್ ವರ್ಗಾವಣೆಯನ್ನು ರದ್ದುಗೊಳಿಸಿ ಹಳೇ ಇನ್ಸ್ ಪೆಕ್ಟರನ್ನು ಅಲ್ಲೇ ಉಳಿಸಿ ಆ ಠಾಣೆಗೆ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿರುತ್ತದೆ
ಇದರಿಂದ ಹಳೇ ಇನ್ಸ್ ಪೆಕ್ಟರ್ ಅಲ್ಲೇ ಉಳಿಯುವಂತಾಗಿದ್ದು ಹೆಚ್ಚಿನ ಸಿಬ್ಬಂದಿ ಜೊತೆಗೆ ಸ್ಥಳೀಯರ ಬೆಂಬಲ ಸಿಕ್ಕಿದ್ದರಿಂದ ಶತ್ರುಗಳನ್ನು ಸದೆಬಡಿಯಲು ಮೈ ಕೊಡವಿ ನಿಂತು ಮಾದಕ ವಸ್ತುಗಳ ಹಿಂದಿರುವ ಕಿಂಗ್ ಪಿನ್ ಯಾರಿರಬಹುದು? ಅವರನ್ನು ಹಿಡಿಯಲೇಬೇಕೆಂದು ಪಣತೊಡುತ್ತಾರೆ
ನಮ್ಮ ಠಾಣೆಯ ಹದ್ದು ಬಸ್ತಿನಲ್ಲಿ ಅಲ್ಲದೆ ಎಲ್ಲಾ ಕಡೆ ಇವರ ಜಾಲ ಹರಡಿದೆ . ನಮಗೆ ಸಿಕ್ಕಿದ್ದ ಆ ಯುವಕರನ್ನು ಏನಾದರೂ ಮಾಡಿ ಪುನಃ ಹಿಡಿಯಲೇಬೇಕೆಂದು ಛಲತೊಟ್ಟು ಈ ವಿಚಾರವಾಗಿ ದಫೇದಾರ್ ಜೊತೆ ಚರ್ಚಿಸುತ್ತಿರುವಾಗ
ಠಾಣೆಯ ಸ್ಥಿರ ದೂರವಾಣಿ ರಿಂಗ್ ಆಗಿದ್ದನ್ನು ನೋಡಿ
ಯಾರದ್ದು ಫೋನ್ ನೋಡ್ರಿ ಎಂದು ತನ್ನ ಸಿಬ್ಬಂದಿಗೆ ಹೇಳಲು
ಠಾಣೆಯ ಸಿಬ್ಬಂದಿಯು ರಿಸೀವ್ ಮಾಡಿ ಹಲೋ ಎನ್ನುವ ಮೊದಲೇ
ಆ ಕಡೆಯಿಂದ ಒಬ್ಬ ವ್ಯಕ್ತಿಯು ಗಾಬರಿಯಿಂದ ನಡುಗುತ್ತಾ ಮಾತವಾಡಿ ಸಾರ್ ಸಾರ್ ಇಲ್ಲಿ ಇಬ್ಬರದ್ದು ಕೊಲೆಯಾಗಿದೆ ಬೇಗ ಬನ್ನಿ ಸಾರ್ ಎನ್ನುತ್ತಾನೆ
ಎಲ್ಲಿ ಯಾರದ್ದು ಕೊಲೆಯಾಗಿದೆ? ಹೇಳ್ರೀ ಎಂದು ಸಿಬ್ಬಂದಿ ಮರು ಪ್ರಶ್ನಿಸಿದಾಗ
ಆ ವ್ಯಕ್ತಿ ಕೊಲೆ ನಡೆದ ಸ್ಥಳವನ್ನು ಹೇಳಿ ಫೋನ್ ಕಟ್ ಮಾಡುತ್ತಾನೆ
ಸಾರ್ ಸಾರ್ ಎರಡು ಕೊಲೆಯಾಗಿದೆಯಂತೆ
ಎಂದು ಕೊಲೆ ನಡೆದಿರುವ ಸ್ಥಳದ ಗುರುತನ್ನು ಇನ್ಸ್ ಪೆಕ್ಟರ್ ಗೆ ಹೇಳಲು
ತಕ್ಷಣ ಇನ್ಸ್ ಪೆಕ್ಟರ್ ತನ್ನ ಸಿಬ್ಬಂದಿಯೊಂದಿಗೆ ಕೊಲೆ ನಡೆದಿರುವ ಸ್ಥಳಕ್ಕೆ ಬರುವ ವೇಳೆಗೆ ಸಾಕಷ್ಟು ಜನರು ಅಲ್ಲಿ ನೆರೆದಿದ್ದು ಎಲ್ಲರಲ್ಲಿಯೂ ಕೊಲೆ ಮಾಡಿರುವುದನ್ನು ಕಂಡು ಭೀತಿಯುಂಟಾಗಿರುತ್ತದೆ
ಇನ್ಸ್ ಪೆಕ್ಟರ್ ಬಂದ ತಕ್ಷಣ ಅವರಿಗೆ ದಾರಿ ಬಿಟ್ಟು ಅಕ್ಕಪಕ್ಕ ನಿಲ್ಲುತ್ತಾರೆ
ಇನ್ಲ್ ಪೆಕ್ಟರ್ ರವರು ರಕ್ತದ ಮಡುವಿನಲ್ಲಿ ಬಿದ್ದಿದ್ದವರ ಬಳಿ ಬಂದು ಚೆಕ್ ಮಾಡಿದಾಗ ಒಬ್ಬರ ಜೀವ ಹೋಗಿದ್ದು ಇನ್ನೊಬ್ಬ ಯುವತಿಯ ಬಳಿ ಬಂದು ಮೂಗಿನ ಬಳಿ ಬೆರಳನ್ನು ಹಿಡಿದಾಗ
ಉಸಿರಾಡುತ್ತಿರುವುದನ್ನು ಕಂಡು ತಕ್ಷಣ ಆಂಬುಲೆನ್ಸ್ ಗೆ ಫೋನ್ ಮಾಡಿ ಆ ಯುವತಿಯನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿಸಿ
ಮೃತದೇಹವನ್ನು ಪೋಸ್ಚ್ ಮಾರ್ಟಮ್ ಗೆ ಕಳುಹಿಸಿರೆಂದಾಗ
ಅಲ್ಲಿನ ಸಿಬ್ಬಂದಿ ಮೃತ ದೇಹವನ್ನು ಇನ್ನೊಂದು ಆಂಬುಲೆನ್ಸ್ ನಲ್ಲಿರಿಸಿ ಶವಾಗಾರಕ್ಕೆ ಸಾಗಿಸಲು ವ್ಯವಸ್ಥೆ ಮಾಡುತ್ತಾರೆ
ಅಲ್ಲಿದ್ದವರಿಗೆ ಕೊಲೆ ಮಾಡಿರುವುದನ್ನು ಯಾರು ಮೊದಲು ನೋಡಿದ್ದು ? ನಮಗೆ ಯಾರು ಫೋನ್ ಮಾಡಿದ್ದೆಂದು ಪ್ರಶ್ನಿಸಿದಾಗ
ಪಕ್ಕದಲ್ಲೇ ನಿಂತಿದ್ದ ಒಬ್ಬ ಯುವಕ ನಾನು ನೋಡಿ ಫೋನ್ ಮಾಡಿದೆ ಸಾರ್ ಎನ್ನುತ್ತಾನೆ
ಮುಂದುವರೆಯುತ್ತದೆ
ಡಾ. ಎನ್ ಮುರಳೀಧರ್
ವಕೀಲರು ಹಾಗೂ ಸಾಹಿತಿ
ನೆಲಮಂಗಲ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments