*ಜೋಡಿಸಲಿ ಈಗ ಹೇಗೆ ನಾ...!!!

 *ಜೋಡಿಸಲಿ ಈಗ ಹೇಗೆ ನಾ...!!!*


ಒಂದೇ ರಥ ಭೀಮಾ,

ಎಳೆಯಲಿ ಈಗ ಹೇಗೆ ನಾ,

ಸಾವಿರಾರು ತುಂಡುಗಳಾಗಿವೆ,

ಜೋಡಿಸಲಿ ಈಗ ಹೇಗೆ ನಾ.!


ಗಾಯ ಮಾಡಿಹರು ಚಳುವಳಿಯ,

ನಿನ್ನದೇ ಮಕ್ಕಳು,

ಕಣ್ಣಿನ ನೀರುಗಳೇ ಬತ್ತಿವೆ,

ಅಳಲಾದರು ಈಗ ಹೇಗೆ ನಾ.!


ಜಾತಿಯ ಹೆಸರಲೀ,

ತುಂಬಾನೇ ಆಗಿದೆ ಅನ್ಯಾಯವು, 

ಜಾತೀಯ ಶೃಂಕಲೆಯ

ಒಡೆಯಲಿ ಈಗ ಹೇಗೆ ನಾ.!


ಮುಂದೊಯ್ಯಲು ತೆಗೆದುಕೊಂಡೆ ನಾ,

ನಿನ್ನದೇ ಕಾರ್ಯವನು

ನಿನ್ನ ರಥದ ಜೊತೆ

ಬಿಡಲಿ ಈಗ ಹೇಗೆ ನಾ.!


ಮಕ್ಕಳನ್ನು ಒಂದಿಲ್ಲ 

ಒಂದು ದಿನವಾದರೂ,

ವಯ್ಯುವೆನು ಅಧಿಕಾರದ ಗದ್ದುಗೆಯ ಕಡೆಗೆ,

ಮಾಡಿದ ಪ್ರತಿಜ್ಞೆಯ

ಮುರಿಯಲಿ ಈಗ ಹೇಗೆ ನಾ.!!



ನಮೋ ಬುದ್ಧಾಯ .

  ಜೈ ಭೀಮ್ .

     ಜೈ ಭಾರತ್ .

        ಜೈ ಸಂವಿಧಾನ...!

✒️✒️✒️✒️✒️

ಅರ್ಜುನ್ ನಿಡಗುಂದೆ. ಸದಲಗಾ.

6366347113.


Image Description

Post a Comment

0 Comments