"ಜಗತ ಪ್ರಸಿದ್ಧ ತಿರುಪತಿಯಲ್ಲೊಂದು ಸನ್ಮಾನ, ಆತಿಥ್ಯ, ಕಾವ್ಯ ಪುರಸ್ಕಾರ -ಇದು ಅಕ್ಷರಲೋಕ ಹಾಗೂ ಅಕ್ಷರ ಬಂಧುಗಳು ಅನುಗ್ರಹಿಸಿದ ಅತ್ಯಪೂರ್ವಅವಿಸ್ಮರಣೀಯ ಸೌಭಾಗ್ಯ..!

 "ಜಗತ್ಪ್ರಸಿದ್ಧ ತಿರುಪತಿಯಲ್ಲೊಂದು ಸನ್ಮಾನ, ಆತಿಥ್ಯ, ಕಾವ್ಯಪುರಸ್ಕಾರ - ಇದು ಅಕ್ಷರಲೋಕ ಹಾಗೂ ಅಕ್ಷರಬಂಧುಗಳು ಅನುಗ್ರಹಿಸಿದ ಅತ್ಯಪೂರ್ವ ಅವಿಸ್ಮರಣೀಯ ಸೌಭಾಗ್ಯ..!"



ಮೊನ್ನೆ ಮತ್ತು ಆಚೆಮೊನ್ನೆ ಅಂದರೆ ದಿ.30.09.23 ಮತ್ತು 01.10.23 ರಂದು  ಜಗದ್ವಿಖ್ಯಾತ ಪುಣ್ಯಕ್ಷೇತ್ರ ತಿರುಪತಿಯ ಇತಿಹಾಸ ಪ್ರಸಿದ್ಧ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ, ತೆಲುಗು ಸಾಹಿತ್ಯ ವೇದಿಕೆ ಹಾಗೂ ಸಂಸ್ಕೃತ ವಿಶ್ವವಿದ್ಯಾಲಯದವರು ಜಂಟಿಯಾಗಿ‌ ಆಯೋಜಿಸಿದ್ದ ಅಖಿಲಭಾರತ ಬಹುಭಾಷಾ ಕವಿಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಾವ್ಯವಾಚಿಸಿ, "ಸನಾತನ ಧರ್ಮ ಪ್ರವರ್ತಕ" ಎಂಬ ಪ್ರಶಸ್ತಿ ಪುರಸ್ಕೃತನಾಗಿ ಸನ್ಮಾನಿತಗೊಂಡ‌ ಅಮೃತಘಳಿಗೆಯ, ಜೀವಿತದ ಅತ್ಯಂತ ಧನ್ಯ ಕ್ಷಣಗಳ ಅವಿಸ್ಮರಣೀಯ ದೃಶ್ಯಾವಳಿಗಳಿವು.


ಆಂದ್ರ, ಹರಿಯಾಣ, ದೆಹಲಿ, ಜಾರ್ಖಂಡ್ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮ್ಮುಖದಲ್ಲಿ, ರಾಷ್ಟ್ರದ ಶ್ರೇಷ್ಠ ವಿದ್ವಾಂಸರ ಸಾನಿಧ್ಯದಲ್ಲಿ, ಗಣ್ಯಾತಿಗಣ್ಯರ ಎದುರು ನಾಲ್ಕು ನುಡಿಗಳನ್ನಾಡಿ, ಕವಿತೆ ವಾಚಿಸಿ, ಸನ್ಮಾನಿತನಾಗಿ, ಅವರೆಲ್ಲರಿಂದ ಪ್ರಶಂಸಿತನಾಗಿದ್ದು ಬದುಕಿನ ಸುವರ್ಣ ಸಮಯ, ಅವರ್ಣನೀಯ ಅನುಭವ. ಸಂಸ್ಕೃತ, ತೆಲುಗು, ತಮಿಳು, ಮಲೆಯಾಳಂ, ಬೆಂಗಾಲಿ,‌ ಒಡಿಯಾ, ಹಿಂದಿ, ಹೀಗೆ ರಾಷ್ಟ್ರದ  ಸಕಲ ಭಾಷೆಯ ಕವಿ ಹೃದಯಗಳೊಂದಿಗೆ,‌ ವಿದ್ವತ್ಪೂರ್ಣ ಸಾಹಿತ್ಯಾಸಕ್ತರೊಂದಿಗೆ ಎರಡು ದಿನ ಕಳೆದದ್ದೇ ತಿಳಿಯಲಿಲ್ಲ. ನಾಡಿನ ಖ್ಯಾತ ಪ್ರಕಾಶಕರಾದ 'ಅಭಿನವ'ದ ರವಿಕುಮಾರ್ ಅವರೊಂದಿಗೆ ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು ಮತ್ತೊಂದು ಅಪೂರ್ವ ಅನುಭವ ಮತ್ತು ಹೆಮ್ಮೆಯ ಸಂಗತಿ.


ಇಂತಹ ಅತ್ಯದ್ಭುತ ಅವಕಾಶಕ್ಕೆ ಕಾರಣರಾದ ತೆಲುಗು ಭಾಷಾ ಸಾಹಿತ್ಯ ಅಕಾಡೆಮಿ ಮತ್ತು ತೆಲುಗು ಜನಪದ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರು,‌ ಆರ್ಟ ಫೌಂಡೇಶನ್ನಿನ ಸಂಸ್ಥಾಪಕ‌ ಅಧ್ಯಕ್ಷರಾದ‌ ಡಾ.ಪೋಟ್ಲೂರಿ ಹರಿಕೃಷ್ಣ ಅವರಿಗೆ ನಾನು ಚಿರ ಋಣಿ. ಅಕ್ಕರೆಯ ಆತಿಥ್ಯದೊಂದಿಗೆ,‌ ಈ ಸೌಭಾಗ್ಯ ಕಲ್ಪಿಸಿದ ತೆಲುಗು ಸಾಹಿತ್ಯ ವೇದಿಕೆಯ ಡಾ.ಸುಮನಾ ಕೋಡೂರು ಅವರಿಗೆ ನಾನು ಅಭಾರಿ. ತಿರುಪತಿ  ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕೃಷ್ಣಮೂರ್ತಿ ಅವರ ಪ್ರೋತ್ಸಾಹ, ಪ್ರಶಂಸೆ, ಸಹೃದಯತೆಗೆ,‌ ಉಪಚರಿಸಿದ ರೀತಿಗೆ ನಾನು ಮೂಕವಿಸ್ಮಿತ. ಅಂತಹ ಮಹಾನ್ ವ್ಯಕ್ತಿಗೆ ಅಂತರಾಳದ ಅನಂತ ನಮನಗಳು.


ಈ ಸಂಭ್ರಮ, ಸಂತಸ, ಸೌಭಾಗ್ಯಗಳಿಗೆ  ಅಕ್ಷರಬಂಧುಗಳಾದ ನೀವೇ ನಿಜ ಕಾರಣ. ನಿತ್ಯ ಓದಿ, ಮೆಚ್ಚಿ, ಆಶೀರ್ವದಿಸುತ್ತಿರುವ ನಿಮ್ಮ ಪ್ರೀತಿಯೇ ಅಡಿಗಡಿಗು ಪ್ರೇರಣ. ಹಾಗಾಗಿ‌ ಈ ನನ್ನೆಲ್ಲ ಅಕ್ಷರಲೋಕದ ಸಡಗರಗಳು ನಿಮಗೇ ಅರ್ಪಣ. ಸಮಾರಂಭದ ದೃಶ್ಯಾವಳಿಗಳನ್ನು ನಿಮ್ಮ ಅವಗಾಹನೆಗಾಗಿ ಸಮರ್ಪಿಸುತ್ತಿದ್ದೇನೆ. ಒಪ್ಪಿಸಿಕೊಳ್ಳಿ. " - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.


Image Description

Post a Comment

0 Comments