"ರಾಷ್ಟಪಿತ ಮಹಾತ್ಮ ಗಾಂಧೀಜಿಯವರ 154ನೇ ಮತ್ತು ಲಾಲಬಹಾದ್ದೂರ ಶಾಸ್ತ್ರೀಜಿಯವರ 119ನೇ ಜಯಂತಿ ಹಾಗೂ ಅಂತಾರಾಷ್ಟ್ರೀಯ ಅಹಿಂಸಾ ದಿನಾಚರಣೆ"

 "ರಾಷ್ಟಪಿತ ಮಹಾತ್ಮ ಗಾಂಧೀಜಿಯವರ 154ನೇ ಮತ್ತು ಲಾಲಬಹಾದ್ದೂರ ಶಾಸ್ತ್ರೀಜಿಯವರ 119ನೇ ಜಯಂತಿ ಹಾಗೂ ಅಂತಾರಾಷ್ಟ್ರೀಯ ಅಹಿಂಸಾ ದಿನಾಚರಣೆ"


ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಎಸ್ ಪಿ ಎಮ್ ಮಂಡಳದ ಹಾ ವಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇಂದು ನಡೆದ ಮಹಾತ್ಮಗಾಂಧೀಜಿ ಜಯಂತಿಯನ್ನು ರಾಷ್ಟ್ರಿಯ ಸೇವಾ ಯೋಜನೆ ಘಟಕದ ಅಡಿಯಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಶ್ರೀ ಡಿ ಪಿ ಕಾಪಸೆ ಉಪ ಪ್ರಾಚಾರ್ಯರು ಹಾಗೂ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶ್ರೀ ಎಂ ವ್ಹಿ ಕೋಳೆಕರ ವಹಿಸಿದ್ದರು. ಈ ಸಂದರ್ಭದಲ್ಲಿ ಸ್ವಾಗತ ಹಾಗೂ ಪ್ರಸ್ತಾವಿಕವಾಗಿ ಶ್ರೀ ಎಸ್ ಕೆ ಗುರುನಾಥ ಮಾತನಾಡಿ ಮಹಾತ್ಮಗಾಂಧೀಜಿಯವರ ಸತ್ಯ ಅಹಿಂಸಾ ಮಾರ್ಗ ಮತ್ತು ದೇಶ ಸ್ವಾತಂತ್ಯ ಪಡೆಯಲು ಶಾಂತಿ ಮಾರ್ಗ ಮುಖ್ಯ ಹಾಗೂ ಜನರಲ್ಲಿ ಒಗ್ಗಟ್ಟು ಮಾಡಲು ಸಿಪಾಯಿ ದಂಗೆಯಲ್ಲಿ ಭಾಗವಹಿಸಿದರು, ಅವರ ಇಡೀ ಬದಕನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ಮಹಾತ್ಮಗಾಂಧಿಯವರು ಅಹಿಂಸಾತ್ಮಕ ತತ್ವದ ಮೂಲಕ ಹೋರಾಡಿ ಹಾಗೂ ಉಪವಾಸ ಸತ್ಯಾಗ್ರಹದ ಮೂಲಕ ಇಡೀ ಜಗತ್ತಿನಲ್ಲಿಯೇ ಮೊದಲ ಬಾರಿಗೆ ಶಾಂತಿ ಮಂತ್ರದ ಮೂಲಕ ಪರಕೀಯರಿಂದ ನಮ್ಮ ದೇಶವನ್ನು ಸ್ವತಂತ್ರಗೊಳಿಸಿದ ಮಹಾನ್ ದೇಶ ಭಕ್ತ ಎಂದು ಹೇಳಿದರು.


ಜೈ ಜವಾನ ಜೈ ಕಿಸಾನ್ ಎಂಬ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮವನ್ನು ನೀಡಿದ ಮಹಾನ ಚೇತನ ಸರಳ ಜೀವಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಕೊಟ್ಟರು. ಈ ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಯಾದ ಡಾ.ಕೆ. ಎಸ್ ಕಾಂಬಳೆ ಹಾಗೂ ಎಲ್ಲ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು.ತದನಂತರ 

 ಶ್ರೀ ಕೆ ಎಸ್ ಭಜಂತ್ರಿಯವರು ರಘುಪತಿ ರಾಘವ ರಾಜರಾಮ ಎಂಬ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.ಕೊನೆಯದಾಗಿ ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾರ್ಪಣೆಯನ್ನು ಶ್ರೀ ಹೆಚ್ ಎಸ್ ಕುರಿಯವರ ನಿರ್ವಹಿದರು


ವರದಿ :ಡಾ. ವಿಲಾಸ್ ಕಾಂಬಳೆ

ಹಾರೂಗೇರಿ

Image Description

Post a Comment

0 Comments