*ಪ್ರಜಾಪ್ರಭುತ್ವವೇ ಇರುತ್ತಿಲ್ಲವಾದರೆ?*
ಒಂದು ವೇಳೆ ದೇಶದಲ್ಲಿ ,
ಪ್ರಜಾಪ್ರಭುತ್ವವೇ ಇರುತ್ತಿಲ್ಲವಾದರೆ?
ಸ್ವಾತಂತ್ರ್ಯವೇ ಕಳೆದುಹೋಗುತ್ತಿತ್ತು.
ಕುತ್ತಿಗೆಯನ್ನು ಒತ್ತಲಾಗುತ್ತಿತ್ತು.
ಇರುತ್ತಿತ್ತು ಸೆರಗಲ್ಲಿ ಪರತಂತ್ರವು.
ಪ್ರಜಾಪ್ರಭುತ್ವವೇ ಇರುತ್ತಿಲ್ಲವಾದರೆ?
ನಮ್ಮ ನಿಮ್ಮ ಬದುಕೆ ಇದ್ದೀರುತ್ತಿರಲಿಲ್ಲ.
ಶ್ವಾಸವು ತೆಗೆದುಕೊಳ್ಳಲಾಗುತ್ತಿರಲಿಲ್ಲ.
ಯಾರದ್ದು ಕೂಡ ಅಸ್ತಿತ್ವವೇ ಇರುತ್ತಿರಲಿಲ್ಲ.
ಪ್ರಜಾಪ್ರಭುತ್ವವೇ ಇರುತ್ತಿಲ್ಲವಾದರೆ?
ಹುಕುಂ ಶಾಹಿ ಬರುತ್ತಲ್ಲಿತ್ತು.
ಗುಲಾಮಿಯ ಜೀವನ ಇರುತ್ತಲಿತ್ತು.
ಪ್ರತಿಕ್ಷಣವೂ ಸತ್ತು ಬದುಕ ಬೇಕಿತ್ತು.
ನಮ್ಮ ಕೈಯಲ್ಲಿ ಏನು ಇರದ ಪರಿಸ್ಥಿತಿ ನಿರ್ಮಾಣವಾಗುತ್ತಲಿತ್ತು.
ಪ್ರಜಾಪ್ರಭುತ್ವವೇ ಇರುತ್ತಿಲ್ಲವಾದರೆ?
ಸ್ವಾತಂತ್ರ್ಯ ,ಸಮಾನತೆ ,ಸಹೋದರತೆ,
ನ್ಯಾಯ, ಮಾನವತಾವಾದ ಇನ್ನೆಲ್ಲಿ ಹೇಳಿ.
ಕಾಯುತಿದ್ದೆವು ದಾರಿ ಪ್ರಜಾತಂತ್ರದ್ದು,
ದೊರೆಯುತ್ತಿದ್ದವು ನಮಗೆ ಕೇವಲ ಮುಳ್ಳುಗಳ ರಹದಾರಿ.
ಸಂವಿಧಾನವೇ ಇರುತ್ತಿರಲಿಲ್ಲವಾದರೆ ಹೇಗೆ ?
ಜಾತಿ, ಧರ್ಮ, ಭೇದ- ಭಾವ ಇದರಲ್ಲಿಯೇ ತೊಳದಾಡುತ್ತಿದ್ದೆವು ನಾವೂ ಮತ್ತೆ ನೀವು,
ಈಗ ಹೇಳಿ ಪ್ರಜಾಪ್ರಭುತ್ವವೇ ಇರುತ್ತಿಲ್ಲವಾದರೆ ಹೇಗಿರುತ್ತಿದ್ದೆವು ನಾವು - ನೀವು,
ಹೇಗಿರುತ್ತಿದ್ದೆವು ನಾವು ನೀವು.
🙏ಜೈ ಭೀಮ್ ಜೈ ಸಂವಿಧಾನ🙏
✍️✍️✍️....
➖➖➖➖➖➖➖
ಅರ್ಜುನ್ ನಿಡಗುಂದೆ.
ಸದಲಗಾ.
9743711213
〰️〰️〰️〰️〰️〰️〰️

.gif)

.gif)


0 Comments