*ಡಾ.ಅಂಬೇಡ್ಕರ ಎಂದರೆ*.......
ಡಾ.ಅಂಬೇಡ್ಕರ್ ಎಂದರೆ ದಿವ್ಯ ಜ್ಞಾನ
ಡಾ.ಅಂಬೇಡ್ಕರ್ ಎಂದರೆ ಸಾಹಸ
ಡಾ.ಅಂಬೇಡ್ಕರ್ ಎಂದರೆ ಪರಿಶ್ರಮ
ಡಾ.ಅಂಬೇಡ್ಕರ್ ಎಂದರೆ ನಿತ್ಯ ಸತ್ಯ ಚೇತನ
ಡಾ.ಅಂಬೇಡ್ಕರ್ ಎಂದರೆ ಛಲ
ಡಾ.ಅಂಬೇಡ್ಕರ್ ಎಂದರೆ ದೃಢ ಸಂಕಲ್ಪ
ಡಾ.ಅಂಬೇಡ್ಕರ್ ಎಂದರೆ ಸವಾಲು
ಡಾ.ಅಂಬೇಡ್ಕರ್ ಎಂದರೆ ಸ್ಫೂರ್ತಿ
ಡಾ ಅಂಬೇಡ್ಕರ್ ಎಂದರೆ ರಕ್ಷಾ ಕವಚ
ಡಾ.ಅಂಬೇಡ್ಕರ್ ಎಂದರೆ ಪ್ರತಿಭಟನೆಯ ಕೆಚ್ಚು ಡಾ.ಅಂಬೇಡ್ಕರ್ ಎಂದರೆ ಜ್ಞಾನಸುಧೆ ಹೀರುವ ದುಂಬಿ
ಡಾ.ಅಂಬೇಡ್ಕರ್ ಎಂದರೆ ಯಶಸ್ವಿ ಹೆಜ್ಜೆ ಮೂಡಿಸಿದ ಯಶೋಗಾಥೆ
ಡಾ.ಅಂಬೇಡ್ಕರ್ ಎಂದರೆ ಧೀರೋದಾತ್ತ ಪ್ರತಿಜ್ಞೆ
ಡಾ.ಅಂಬೇಡ್ಕರ್ ಎಂದರೆ ಕ್ರಿಯಾಶೀಲತೆಯ ಕೋಲ್ಮಿಂಚು
ಡಾ.ಅಂಬೇಡ್ಕರ್ ಎಂದರೆ ಉತ್ಸಾಹದ ಚಿರಾಪುಂಜಿ
ಡಾ.ಅಂಬೇಡ್ಕರ್ ಎಂದರೆ ದೂರದೃಷ್ಟಿಗೆ ಆಕಾಶ
ಡಾ.ಅಂಬೇಡ್ಕರ್ ಎಂದರೆ ವೈಚಾರಿಕ ದೀವಿಗೆ
ಡಾ.ಅಂಬೇಡ್ಕರ್ ಎಂದರೆ ಆತ್ಮವಿಶ್ವಾಸದ ಸಲಗ
ಡಾ.ಅಂಬೇಡ್ಕರ್ ಎಂದರೆ ಶಿಸ್ತಿಗೆ ಸಾಮ್ರಾಟ
ಡಾ.ಅಂಬೇಡ್ಕರ್ ಎಂದರೆ ಸಕಲರೂ ಕರಮುಗಿದು ಶಿರಬಾಗಿ ನಮಿಸುವ ಮಹಾನಾಯಕ
*ಕವಿ: ಡಾ.ಜಯವೀರ ಎ.ಕೆ*.
*ಕನ್ನಡ ಪ್ರಾಧ್ಯಾಪಕರು*
*ಖೇಮಲಾಪುರ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments