*ಮಾಧ್ಯಮ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ "ಭೀಮ ಬೆಳಕು" ಬ್ಲಾಗ್*
*ರಾಯಬಾಗ:* ಡಾ.ವಿಲಾಸ ಕಾಂಬಳೆ ವೃತ್ತಿಯಿಂದ ಹಾರೂಗೇರಿ ಪಟ್ಟಣದ ಪ್ರತಿಷ್ಠಿತ ಎಸ್.ಪಿ.ಎಂ. ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರು. ಪ್ರವೃತ್ತಿಯಲ್ಲಿ ಓರ್ವ ರಂಗಭೂಮಿ ಕಲಾವಿದರು. ಹವ್ಯಾಸಿ ಬರಹಗಾರರಾಗಿ ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡಿರುವ ಡಾ.ವಿಲಾಸ ಕಾಂಬಳೆ ಕನ್ನಡ ಚಲನ ಚಿತ್ರಗಳಲ್ಲಿ ಅಭಿನಯ ಹಾಗೂ ಕಲೆಯ ಗೀಳು ಹಚ್ಚಿಕೊಂಡವರು. ಒಟ್ಟು 5 ಕನ್ನಡ ಚಿತ್ರಗಳಲ್ಲಿ ಭಾವಪೂರ್ಣವಾಗಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದು ತಾವೂ ಕೂಡ ಓರ್ವ ಒಳ್ಳೆಯ ಕಲಾವಿದ ಎಂದು ದೃಢೀಕರಿಸಿದ್ದಾರೆ.
ವಿಭಿನ್ನ ಚಿಂತನೆಗಳಿಂದ ಸಮಾಜ ಸೇವೆಯೇ ತಮ್ಮ ಅತ್ಯುತ್ತಮ ಪೂಜೆ ಎಂದು ಭಾವಿಸಿದ ಕ್ರಿಯಾಶೀಲ ಮನದ ಡಾ.ವಿಲಾಸ ಅವರು ಸಕಲರ ಲೇಸನ್ನೇ ಬಯಸಿದವರು. ಬುದ್ಧ ಬಸವ ಅಂಬೇಡ್ಕರ್ ತತ್ವಗಳಲ್ಲಿ ವಿಪರೀತ ವಿಶ್ವಾಸ ಹಾಗೂ ನಂಬಿಕೆ ಇರಿಸಿಕೊಂಡು ಈ ತ್ರಿವಳಿ ವೈಚಾರಿಕ ಸೂರ್ಯರು ಹಾಕಿಕೊಟ್ಟ ಆದರ್ಶದಲ್ಲಿ ನಡೆಯಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವ ಡಾ.ವಿಲಾಸ ಕಾಂಬಳೆ ಅವರು ಇತ್ತೀಚೆಗೆ ಹುಟ್ಟು ಹಾಕಿದ "ಭೀಮ ಬೆಳಕು" ಬ್ಲಾಗ್ ಮಾಧ್ಯಮ ಲೋಕದಲ್ಲಿ ವಾಚಕರ ಗಮನ ಸೆಳೆದಿದೆ. ಸಾಧ್ಯವಾದಷ್ಟು ಬುದ್ಧ ಬಸವ ಅಂಬೇಡ್ಕರ್ ತತ್ವಗಳನ್ನು ಜನಮನಕ್ಕೆ ಮುಟ್ಟಿಸುವ ಮಹೋನ್ನತ ಉದ್ದೇಶ ಇರಿಸಿಕೊಂಡು ಈ ಡಿಜಿಟಲ್ ಯುಗದಲ್ಲಿ ಭೀಮ ಬೆಳಕು ಬ್ಲಾಗ್ ಮೂಲಕ ಶೋಷಿತರ, ಕಡು ಬಡವರ, ಸಮಾಜದ ಕಟ್ಟ ಕಡೆಯ ಮನುಷ್ಯನು ಈ ಸಮಾಜದಲ್ಲಿ ತಲೆ ಎತ್ತಿ ಬಾಳಿ ಬದುಕಬೇಕು ಎಂಬ ತೀವ್ರ ಕಳಕಳಿ ಹೊಂದಿರುವ ಈ ಭೀಮ ಬೆಳಕು ಅಜ್ಞಾನದ ಕತ್ತಲೆಯ ಕೂಪದಲ್ಲಿ ಇನ್ನುವರೆಗೂ ಬದುಕು ನಡೆಸುವ ಜನರಿಗೆ ಜ್ಞಾನ ಹಾಗೂ ಜಾಗೃತಿಯ ದೀವಟಿಗೆ ಹಿಡಿದು ಸಮಾನತೆಯ, ಆರೋಗ್ಯಕರ ಸಮಾಜ ನಿರ್ಮಿಸುವ ದೀಕ್ಷೆ ತೊಟ್ಟಿರುವ ಡಾ.ವಿಲಾಸ ಕಾಂಬಳೆ ಅವರ ಪ್ರಸ್ತುತ "ಭೀಮ ಬೆಳಕು" ಬ್ಲಾಗ್ ಕೇವಲ ಒಂದೇ ತಿಂಗಳಲ್ಲಿ 50 ಸಾವಿರ ಓದುಗರು ವೀಕ್ಷಣೆ ಮಾಡಿದ್ದು ಮಾಧ್ಯಮ ಲೋಕದಲ್ಲಿ ತೀವ್ರ ಸಂಚಲನ ಸೃಷ್ಟಿಸಿ ಬೆರಗು ಮೂಡಿಸಿದ್ದು ಗಮನಾರ್ಹ.
ಮುದ್ರಣ ಮಾಧ್ಯಮಕ್ಕಿಂತ ಡಿಜಿಟಲ್ ಮಾಧ್ಯಮವೇ ಶ್ರೇಷ್ಠ ಎಂದು ಅರುಹಿರುವ ಡಾ.ವಿಲಾಸ ಕಾಂಬಳೆ,ಈ ಅಪೂರ್ವ, ಅದ್ವಿತೀಯ ಸಾಧನೆಗೆ ಪೂಜ್ಯನೀಯ ಓದುಗ ವೀಕ್ಷಕ ಅಭಿಮಾನಿಗಳು ತೋರಿದ ಪ್ರೀತಿ, ಪ್ರೋತ್ಸಾಹ, ಅನುಗ್ರಹ ನಾನೆಂದಿಗೂ ಮರೆಯಲಾರೆ. ಈ ಸಾಧನೆ ಸಕಲ ಕನ್ನಡ ವೀಕ್ಷಕ ಮನಸ್ಸುಗಳಿಗೆ ಸಮರ್ಪಿಸುತ್ತೇನೆ ಎಂದು ಡಾ.ವಿಲಾಸ ಕಾಂಬಳೆ ಅಭಿಮಾನದಿಂದ ತಮ್ಮ ಸಂತಸ ಹಂಚಿಕೊಳ್ಳುತ್ತಾರೆ.
ಪ್ರಚಲಿತ ಸುದ್ದಿ ಸ್ವಾರಸ್ಯ, ಕ್ರೀಡೆ,ಯೋಗ,ಮನರಂಜನೆ, ಹಾಸ್ಯ ಕತೆ, ಕವನ,ನಾಟಕ ಪ್ರಬುದ್ಧ ವೈಚಾರಿಕ ಸೃಜನಶೀಲ ಲೇಖನ ಪುಸ್ತಕ ವಿಮರ್ಶೆ ಸಾಂಸ್ಕೃತಿಕ ವೈವಿಧ್ಯಮಯ ಚಿತ್ತಾಕರ್ಷಕ ಸುದ್ಧಿಗಳನ್ನು ನಿತ್ಯ ಸತ್ಯ ಸೊಗಸಾಗಿ ಅನಾವರಣಗೊಳಿಸುವ "ಭೀಮ ಬೆಳಕು" ಬ್ಲಾಗ್ ವಾಚಕರ ಮನದ ಮಂಟಪದಲ್ಲಿ ಚಿರಕಾಲ ಬೆಳಗಲಿ ಎಂದು ಅಭಿಮಾನದಿಂದ ಆಶಿಸುತ್ತೇನೆ.
*ಲೇಖನ:ಡಾ.ಜಯವೀರ ಎ.ಕೆ.*
【ಕನ್ನಡ ಪ್ರಾಧ್ಯಾಪಕರು】
ಕೆ.ಎಲ್.ಇ. ಪದವಿ ಮಹಾವಿದ್ಯಾಲಯ. ಶಿರಗುಪ್ಪಿ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments