ಶೀರ್ಷಿಕೆ :* ರಾಜನಿಲ್ಲದ ರಾಜ್ಯ ನಿಮ್ಮ ನೆನಪು ಪ್ರತಿ ನಿತ್ಯ*

 ಶೀರ್ಷಿಕೆ : ರಾಜನಿಲ್ಲದ ರಾಜ್ಯ  ನಿಮ್ಮ ನೆನಪು ಪ್ರತಿ ನಿತ್ಯ




  ಅದೊಂದು ಕಾಲದಲ್ಲಿ ಆ ರಾಜ್ಯದ ಅಸ್ಥಾನದ  ಮಹಾರಾಜರು ಯುವರಾಜರು ಅವರು.  ಭವ್ಯ ಅರಮನೆಯೂಳಗೆ ಇದ್ದು ರಾಜ್ಯ  ಮತ್ತು ಪ್ರಜೆಗಳ ಶಾಂತಿ  ಕ್ಷೇಮಕ್ಕಾಗಿ ಅಭಿವೃದ್ಧಿಗಾಗಿ ಶ್ರಮವಹಿಸಿ ತಮ್ಮದೇ ಅದ ರೀತಿಯಲ್ಲಿ ದರ್ಬಾರು ನಡೆಸಿ ಹೋದವರು ನಾನಾ ಭಾಗದ ರಾಜರು.....


ಆದರೆ ಇಂದಿನ  ಈ ಕಲಿಯುಗದಲ್ಲಿ ಯಾವ ಅಸ್ಥಾನವಾಗಲಿ, ಅರಮನೆವಾಗಲಿ, ಪಟ್ಟ ಕಿರೀಟ- ಪೇಟ ತೊಡದೇ ನಮ್ಮ“ಗಂಧದ ಗುಡಿ” ಎಂಬ  ಕರ್ನಾಟಕದ ನಾಡಲ್ಲಿ “ಅರಸು”ರಾದವರು ಪುನೀತ್ ರಾಜ್ ಕುಮಾರ್.


“ಅಭಿಮಾನಿಗಳೇ ನಮ್ ಮನೆ ದೇವ್ರು "ಎಂದು ಅಭಿಮಾನಿಗಳ ಮನದಲ್ಲಿ ಉಳಿದವರು ನಮ್ಮ ವರನಟ

 ಡಾ ||ರಾಜ್ ಕುಮಾರ್ ರವರು.

ಡಾ. ರಾಜ್ ಕುಮಾರ್ ರವರು ಕರುನಾಡಿಗೆ  ರತ್ನ ವಾಗಿ ನೀಡಿದ ವರವೇ  ನಮ್ಮ  “ಯುವರತ್ನ “


ವೇದ - ಶ್ಲೋಕ  ಮಂತ್ರ ಗಳ ಪಠಿಸಿ   “ಭಕ್ತ ಪ್ರಹ್ಲಾದ" ಚಿತ್ರದಲ್ಲಿ ಬಾಲ ನಟನಾಗಿ ಅಭಿನಯಿಸಿ ಮತ್ತು ”ಬೆಟ್ಟದ ಹೂವು “  ಚಿತ್ರದ ಮುಖಾಂತರ ‘ರಾಮು’ ಪಾತ್ರದಲ್ಲಿ ಸಾಮಾನ್ಯ ಮಕ್ಕಳಂತೆ ಮುಗ್ದ ಮನಸುಗಳ ಆಸೆ ಕನಸು ಗಳ ಹೊತ್ತು  ಛಲವಿದ್ದರೆ ಗೆಲುವು ಸತ ಸಿದ್ದ ಎಂಬುದನ್ನು ನಿರೂಪಿಸಿ ಅಂತರ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾದವರು ಪುನೀತ್ ರವರು.


“ಅಪ್ಪು” ಎಂಬ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿ ತೆರೆಯ ಮೇಲೆ ಬಂದು ಅಪ್ಪುಗೆಯ ಮೆಚ್ಚುಗೆಯ ಪಡೆದು ಅಭಿಮಾನಿಗಳ ಮನದಲ್ಲಿ “ಅಭಿ”ಯಾಗಿ ಅನುಬಂಧ ಬೆಳೆಸಿದವರು .


ಇಂದಿನ ಯುವ ಪೀಳಿಗೆಯ ಯುವಕರ ಮನದಲ್ಲಿ” ಪೃಥ್ವಿ” ಯಾಗಿ ಸ್ನೇಹಕ್ಕೆ ನಾನು ಸದಾ ಸಿದ್ದನಾಗಿ ನಾವೆಲ್ಲರೂ ಒಂದೇ ಗುಂಪಿನ   "ಹುಡುಗರು” ಎಲ್ಲಾರು ನಮ್ಮವರೇ ಎನ್ನುತ್ತಾ   ಕರುನಾಡು ಎಂಬುದು   ನಮ್ಮ  ಒಂದು ಸಂಸಾರ ಕರುನಾಡಿನ ಸಂಸಾರದೊಳಗೆ ತುಂಬಲಿ ಆನಂದ ಸಾಗರ ಎನ್ನುತ್ತಾ ಸಂತೋಷ ಸಂಭ್ರಮ ಸಡಗರದಲ್ಲಿ  ಹೆಜ್ಜೆ ಹಾಕುತ್ತಾ  ನಿಮ್ಮೆಲ್ಲಾ ರ ಜೊತೆ “ರಾಮ್ “ ನಾಗಿ ಬೆರೆತು ಇರಲು ಅವಕಾಶ ನೀಡಿ ಎನ್ನುತ್ತಾ ಆದರ ಜೊತೆಯಲ್ಲಿ “ದೊಡ್ಮನೆ ಹುಡುಗ” ನಾನಲ್ಲ ಎಂಬುದು ತಿಳಿಸಿರು ನಾನು ನಿಮ್ಮ ಮನೆ ಮಗನು ಅಷ್ಟೇ. ದೊಡ್ಮನೆ ಹುಡುಗ ಎಂಬ ಅಹಂ ನಂಗೆ  ಇಲ್ಲ ಎಂದವರು.


 ತಾಯಿಗೆ ತಕ್ಕ ಮಗನಾಗಿ ಕನ್ನಡಾಂಬೆಯ ಮಣ್ಣಿನ ಮಗನಾಗಿ ಕರುಳಕುಡಿಗೆ ಮಗುವಾಗಿ “ವಂಶಿ”ಯಾಗಿ ಮನೆ ಮಗನಾಗಿ ಸದಾ ನಾನಿರುವೆ.


ಕರುನಾಡಿನ ಜನತೆಯ ಸ್ನೇಹ ಭಾಂದವ್ಯ ದ ಜೊತೆ ಜೊತೆಯಲಿ ಪ್ರೀತಿಯ ಬಂಧ ಅನುಬಂಧ ಬೆಸೆದು ಆ ಭಾಂದವ್ಯ ವು ಬಲು ಚೆಂದವೆಂದು   ಪ್ರೀತಿ ಪ್ರೇಮದ  “ಮಿಲನ"ಕ್ಕೆ ಸಾಕ್ಷಿಯಾಗಿರುವೆ.

ಸದಾ  ವಿನಯತೆ, ಸೃಜನಶೀಲತೆ, ಸಾರ್ಥಕತೆ,ಮಾನವೀಯತೆ,ಭಾಂದವ್ಯತೆ , ಸಂಸ್ಕೃತಿ ಬಗ್ಗೆ ತಿಳಿದು, ಅರಿತು,  ನೊಂದು ಬೆಂದ ಅನಾಥ  ಮಕ್ಕಳಿಗೆ,  ವೃದ್ಧರಿಗೆ,  ಆಸರೆಯಾಗಿ ಆಶ್ರಯ ನೀಡಿ,  ಒಂದು  ಉತ್ತಮ ಬದುಕು ಕಲ್ಪಿಸಿ ಕೊಡಲು ಪಣ ತೊಟ್ಟವರು ನಮ್ಮ “ವೀರ ಕನ್ನಡಿಗ "


ಆಕಾಶದವರಿಗೆ ಹೊಗಳಿ ಕೂರಿಸಬೇಡಿ ಅಷ್ಟು ಎತ್ತರಕ್ಕೆ ಬೆಳಸಬೇಡಿ ಎಂದವರು “ಆಕಾಶ್ “ ನಿಮ್ಮ ಹಾರೈಕೆ ಇಷ್ಟಿರಲಿ ಕೈಗೊಂಡ ಶುಭ ಕಾರ್ಯಗಳಿಗೆ ಕರುನಾಡಿನಲ್ಲಿ ಸೇವೆ ಮಾಡಿ ವಿಜಯ ವಾಗಲಿ   ಎಂದು ಹಾರೈಸಿ ಸಾಕು ಎಂದವರು “ಅಜಯ್ ".

 ತಮ್ಮ ನಿಸ್ವಾರ್ಥ ಸೇವೆ ಯಾರಿಗೂ ತಿಳಿಯಬಾರದು ಆದರೆ ಸೇವೆ ಯ ಫಲ ಎಲ್ಲಾರಿಗೂ ತಲುಪಬೇಕು ಎಂದು ದೇವರಿಗೆ ನಿತ್ಯ ಪ್ರಾರ್ಥನೆ ಮಾಡಿ ನಿಸ್ವಾರ್ಥ ಸೇವೆ ಯ ಸಾಧನೆಯ ಪರ್ವ ಹತ್ತಲು ಮುಂದಾದವರು ನಮ್ಮ “ಮೌರ್ಯ”.


 ಸಮಾಜದ ಒಳಗೆ ಸಾಮಾನ್ಯರಲ್ಲಿ  ಸಾಮಾನ್ಯರಾಗಿ ತಮ್ಮ ನಿಸ್ವಾರ್ಥ ಸೇವೆ ಯನ್ನು ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ರಾಯಭಾರಿ ಯಾಗಿ ಉಚಿತ ವಾಗಿ  ಸಾಮಾಜಿಕ ಜಾಗೃತಿಯ ಪ್ರಚಾರಕರಾಗಿಯೂ ಸೇವೆ ಸಲ್ಲಿಸಿದವರು ದಿ ಗ್ರೇಟ್ “ ಅಣ್ಣ ಬಾಂಡ್”. ಆಡಿಸಿಯೇ ನೋಡು ಬೀಳಿಸಿಯೇ ನೋಡು ಎಂದು ಸೋಲದು ಸೋತು ತಲೆಯ ಬಾಗದು ಎನ್ನುತ್ತಾ   ನಿಮ್ಮೆಲ್ಲರ ಮನದಲಿ ನಾನು ಮತ್ತು ನನ್ನ ನೆನಪು  ಎಂದೆಂದೂ  ಅಜರಾಮರ ನಿಮ್ಮ  ಜೊತೆ ನನ್ನ ರಾಜನಾಗಿ ಬೆಳಸಿ ” ನಟ ಸೌರ್ವಭೌಮ” ಎಂದು ಕರೆದ ಕರುನಾಡಿನ ಜನತೆಗೆ ನನ್ನ ನಮನ ಎಂದವರು ನಮ್ಮ  “ರಾಜಕುಮಾರ” ಪುನೀತ್ ಅವರ  ಮಾತು,   ನಿಸ್ವಾರ್ಥ ಸೇವೆಯು ಯುವ ಪೀಳಿಗೆಗೆ  ಸದಾ ಸ್ಫೂರ್ತಿ ತುಂಬುವ ಜೇಮ್ಸ್ ರಾದವರು ಪುನೀತ್ ರಾಜಕುಮಾರ್..



ಪುಟ್ಟ ಕವನ

ಶೀರ್ಷಿಕೆ : ಮುಗುಳುನಗೆಯ ಸಾಹುಕಾರ


ಸಿಂಗಾನಲ್ಲೂರು ರಾಜಕುಮಾರ ಗಾಜನೂರಿನ  ಮಯೂರ

ಅಣ್ಣಾವ್ರ  ಮುದ್ದು ಕಂದ ನಮ್ಮ ಪುನೀತ್ ರಾಜಕುಮಾರ

ಸಿರಿವಂತಿಕೆಯ ಸೋಪಾನದಲ್ಲಿ ಬೆಳೆದ ಪುಟ್ಟ  ಕುವರ

  ಗುಣದಲ್ಲಿ ಸ್ವಲ್ಪ ಕೂಡ  ಇಲ್ಲ ಅಹಂಕಾರದ ಆಕಾರ

ಪ್ರೀತಿ ಮಮತೆಯ ಸೆಲೆಯಲ್ಲಿ ತನ್ನ  ಅಭಿನಯದಲ್ಲಿ ಬೆರೆತ ವೀರ 

ಕಾಣದ ರೀತಿಯಲ್ಲಿ ಜನ ನಿಸ್ವಾರ್ಥ ಸೇವೆ ಮಾಡಿದ   ಕನ್ನಡಿಗ ಕುವರ 

ಎಲ್ಲಾರಿಗೂ ಸ್ಫೂರ್ತಿ ತುಂಬುವ ಮಾದರಿ ವ್ಯಕ್ತಿ ನಮ್ಮ ಮುಗುಳುನಗೆಯ ಸಾಹುಕಾರ

ಅವರೇ ನಮ್ಮ ಕರುನಾಡಿನ ಕನ್ನಡ ಕಂದ ಪುನೀತ್ ರಾಜಕುಮಾರ 🙏🏻🙏🏻🙏🏻


ಬಸವೇಶ. ಎಸ್ 

ಯುವ ಸಾಹಿತಿ  (ಯೋಗ ಶಿಕ್ಷಕರು)

ತಿ. ನರಸೀಪುರ

Image Description

Post a Comment

0 Comments