*ಮುಕ್ತ ಮನಸ್ಸಿನವರು...*

 *ಮುಕ್ತ ಮನಸ್ಸಿನವರು...*



✍✍✍...

ಯಾವ ವ್ಯಕ್ತಿಗಳು ಮುಕ್ತ ಮನಸ್ಸಿನಿಂದ ಮಾತನಾಡುತ್ತಾರಯೋ, ಮುಕ್ತ ಮನಸ್ಸಿನಿಂದ ಇರಲು ಬಯಸುತ್ತಾರೆಯೋ, ಇಂತಹ ವ್ಯಕ್ತಿಗಳಿಗೆ ಹಲವು ಜನ ಮೋಸವನ್ನೇ ಹೆಚ್ಚಾಗಿ ಮಾಡುತ್ತಾರೆ. ಆದರೆ ಮುಕ್ತ ಮನಸ್ಸಿನ ಸ್ವಭಾವವಿರುವ ವ್ಯಕ್ತಿಗಳು ಈ ಜಗತ್ತಿನಲ್ಲಿ ಇರುವುದು ಕ್ವಚ್ಚಿತ್ತಾಗಿ ಕಂಡು ಬರುತ್ತದೆ.

ಏಕೆಂದರೆ ಇಂತಹ ವ್ಯಕ್ತಿಗಳ ಮನದಲ್ಲಿ ಏನೂ ಕಲ್ಮಶವೇ ಇರುವುದಿಲ್ಲ. ಅದಕ್ಕಾಗಿ ಅವರು ಪ್ರತಿಯೊಬ್ಬರ ಜೊತೆಗೂ ಕೂಡ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ, ಪ್ರೀತಿಯಿಂದ ಮಾತನಾಡುತ್ತಾರೆ., ಇಂತಹ ವ್ಯಕ್ತಿಗಳಿಗೆ ಜೀವನದಲ್ಲಿ ಬಹಳಷ್ಟು ಜನ ಕೆಟ್ಟದಾಗಿ ವರ್ತಿಸುತ್ತಾರೆ, ಬಹಳಷ್ಟು ಜನ ಇಂಥವರ ಜೀವನದಲ್ಲಿ ಬರುತ್ತಾರೆ ಅವರಿಗೆ ದೊಡ್ಡ ಪ್ರಮಾಣದಲ್ಲಿ ಮೋಸವನ್ನು ಕೂಡ ಮಾಡುತ್ತಾರೆ. ಆದರೂ ಕೂಡ ಎಲ್ಲರನ್ನೂ ಮುಕ್ತ ಸ್ವಭಾವ ಉಳ್ಳ ವ್ಯಕ್ತಿಗಳು ಯೋಗ್ಯ ರೀತಿಯಲ್ಲಿ ತಿಳಿದುಕೊಳ್ಳುತ್ತಾರೆ. ನಿರ್ಣಯವನ್ನು ಕೂಡ ವಿಚಾರಪೂರ್ವಕವಾಗಿ ತೆಗೆದುಕೊಳ್ಳುತ್ತಾರೆ. ಇಂತಹ ವ್ಯಕ್ತಿಗಳು ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಬರುತ್ತಾರೆ. ಅಂಥವರನ್ನು ತಿಳಿದುಕೊಂಡು ಮುಂದೆ ಸಾಗಿ, ಏಕೆಂದರೆ ಇಂತಹ ವ್ಯಕ್ತಿಗಳು ಪುನಃ ನನ್ನ ಜೀವನದಲ್ಲಿ ಎಂದಿಗೂ ಕೂಡ ದೊರೆಯಲಾರರು. 

ಯಾವುದು ಇದೆಯೋ ಅದನ್ನು ರಕ್ಷಿಸಿ/ ಕಾಪಾಡಿ.....

*@ಅರ್ಜುನ್ ನಿಡಗುಂದೆ*

ಸದಲಗಾ.

*6366347113.*

ತಾಲೂಕ :-ಚಿಕ್ಕೋಡಿ .

ಜಿಲ್ಲಾ :-ಬೆಳಗಾವಿ.

Image Description

Post a Comment

0 Comments