*ಅಪ್ಪು ಅಭಿನಯದ 40 ಚಿತ್ರಗಳ ಹೆಸರಿನ ಮೇಲೆ ಬರೆದಂತಹ ನಾಲ್ಕು ಸಾಲಿನ ಚುಟುಕು ಕವನಗಳು*

 ಅಪ್ಪು ಅಭಿನಯದ  40 ಚಿತ್ರಗಳ  ಹೆಸರಿನ ಮೇಲೆ ಬರೆದಂತಹ  ನಾಲ್ಕು ಸಾಲಿನ ಚುಟುಕು ಕವನಗಳು 




ತಾಯಿಗೆ ತಕ್ಕ ಮಗ


ಮುಗ್ದತೆಯ ಕೂಸು ಗೊಂಬೆ

ನಿನ್ನ ಮಮಮತೆಗೆ ಸೋತೆ ಅಂಬೆ

ನನ್ನ ಜಗವೇ ನೀನಾದೆ  ಎನ್ನುವ ಮಗ

ಈ ಚಿತ್ರದಲ್ಲಿ ತಾಯಿಗೆ ಮಗ


ವಸಂತ ಗೀತಾ


ಭಾವನೆಗಳ ಸಂಗೀತ

ಅನುಬಂಧಗಳ ಸಂಕೇತ

ಪುಟ್ಟ ಮಗುವಿನ ಪಾತ್ರ ನವನೀತ

ಅದುವೇ ನಮ್ಮ ಪುನೀತ್ ಅಭಿನಯದ ವಸಂತ ಗೀತಾ



ಭೂಮಿಗೆ ಬಂದ ಭಗವಂತ


ಆಡುವ ಮಾತುಗಳು ಸಂತತ

ಮೊಗದಲ್ಲಿ ನಗುವಿರುವುದು ಸತತ

ದೇವರೇ ಮೆಚ್ಚಿದ ಪುಣ್ಯವಂತ

ಆಗಾಗಿ ದೇವರ ಪಾತ್ರದಲ್ಲಿ ಪುನೀತ

ಭೂಮಿಗೆ ಬಂದ ಭಗವಂತ



ಹೊಸಬೆಳಕು


ನಟನೆಯಲ್ಲಿ ಬಲು ಚುರುಕು

ಇನ್ನಷ್ಟು ನಟನೆ ಕಲಿಯ ಬೇಕು

ಎನ್ನುವ ದಾರಿಯಲ್ಲಿ ಕಂಡ ಬೆಳಕು

ಎಂದು ಅಭಿನಯಿಸಿದ  ಚಿತ್ರವೇ ಹೊಸ ಬೆಳಕು.



ಚಲಿಸುವ ಮೋಡಗಳು


ಕಳೆದು ಹೋಗುವುದು ವರ್ಷಗಳು

ಉರುಳಿ ಹೋಗುವುದು ದಿನಗಳು 

ನಟಿಸಿದಷ್ಟು ಕಲಿಕೆ ಅನುಭವಗಳು

ಎನ್ನುವ ಪಾತ್ರ ಗಳೇ ಚಲಿಸುವ ಮೋಡಗಳು


ಭಕ್ತ ಪ್ರಹ್ಲಾದ


ಮನದಲ್ಲಿ ಭಕ್ತಿ ಸದಾ

ನಿನ್ನ ನಾಮವೇ ಆನಂದ

ಶ್ಲೋಕಗಳ ಪಟಿಸುವುದೇ ಪರಮಾನಂದ

ಎಂದು ಪಾತ್ರ ಮಾಡಿ ಅದ ಭಕ್ತ ಪ್ರಹ್ಲಾದ



ಎರಡು ನಕ್ಷತ್ರಗಳು


ಭೂಮಿಯಲ್ಲಿ ನಾವು ಪಾತ್ರಧಾರಿಗಳು

ಒಳ್ಳೆಯ ಪಾತ್ರ ಮಾಡಿ ಸಾಗಬೇಕು ನಾವು ನೀವುಗಳು

ಇಲ್ಲಿ ಎಲ್ಲಾರದು ಎರಡು ಪಾತ್ರಗಳು

ಆಗಾಗಿ ನಾನು ಅಭಿನಯಿಸಿದೆ ಚಿತ್ರ

ಎರಡು ನಕ್ಷತ್ರಗಳು


ಯಾರಿವನು


ಕರುಳಿನ ಕೂಗು ಕೂಗುವವನು

ಅಪ್ಪುಗೆಯಲ್ಲಿ ಜೊತೆಯಾದವನು

ಅಮ್ಮನ ಪ್ರೀತಿಯಲ್ಲಿ ಸೆರೆಯಾದವನು ಎನ್ನುತ್ತಾಲೆ

ಜನ ಮನ ಗೆದ್ದವನು ಯಾರಿವನು


ಬೆಟ್ಟದ ಹೂವು


ಆಸೆ ಕನಸನ್ನು ಕಟ್ಟಿಕೊಂಡ ರಾಮು

ಕಷ್ಟದ ಜೊತೆ ಹಠದಿಂದ ಸಾದಿಸಿದ ಗೆಲುವು ಪ್ರಯತ್ನ ಪಟ್ಟರೇ ಫಲ ಖಂಡಿತ ಎಂಬ ಸ್ಫೂರ್ತಿಯ ಒಲವು

ತೋರಿಸಿದ ಚಿತ್ರವೇ ಬೆಟ್ಟದ ಹೂವು


ಶಿವ ಮೆಚ್ಚಿದ ಕಣ್ಣಪ್ಪ


ದಯೆ ಕರುಣೆ ತೋರು ನನ್ನಪ್ಪ

ನಿನ್ನನ್ನೇ ನಂಬಿರುವೆ ತಂದೆ ಶಿವಪ್ಪ

ಬೇಡೆನು ನಾನು ಎಂದು ನನ್ನಪ್ಪ

ನಿನ್ನ ಸೇವೆಗೆ ದಾರಿ ತೋರಿಸಪ್ಪ ಎನ್ನುತ್ತಾ

ಅಭಿನಯಿಸಿದ ಚಿತ್ರ ಶಿವ  ಮೆಚ್ಚಿದ ಕಣ್ಣಪ್ಪ


ಪರಶುರಾಮ

ಪ್ರೇಮ ಮಮತೆಯ ಆನಂದಧಾಮ

ತಾಗ್ಯಕ್ಕೆ ಸದಾ ಸಿದ್ದ ನಮ್ಮ ರಾಮ

ನೋವುಗಳ ಜೊತೆ ಗೆಲುವಿನ ಪ್ರೇಮ

ನಟಿಸಿದ ಚಿತ್ರವೇ ಪರಶುರಾಮ


ಅಪ್ಪು


ಚಿತ್ರ ರಂಗದ ಬೆಳ್ಳಿತೆರೆಯಲ್ಲಿ ನಾಯಕನಾಗಿ

ಅಪ್ಪುಗೆಯೊಂದಿಗೆ ಸ್ನೇಹ ಪ್ರೀತಿ ಜೊತೆಯಾಗಿ ಆತ್ಮೀಯತೆಯ ಅನುಬಂಧವಾಗಿ ನಟಿಸಿದ ಚಿತ್ರವೇ ಅಪ್ಪು


ಅಭಿ

ಅಭಿಮಾನಿಗಳನ್ನು ಪೊಜಿಸುತ್ತಾ

ಅನುರಾಗದ ಪ್ರೇಮ ಕವಿತೆ ಹಾಡುತ್ತಾ

ಅಭಿಮಾನಿಗಳ ಮೆಚ್ಚುಗೆ ಪಡೆಯುತ್ತಾ

ಅಭಿಮಾನಿಗಳಲ್ಲಿ ನಾನು ನಿಮ್ಮೆಲ್ಲರ

ಅಭಿಮಾನಿ ಎಂದರು ಅಭಿ


ವೀರ ಕನ್ನಡಿಗ


ಕರುನಾಡಿನ ಕನ್ನಡಿಗ

ಕರ್ನಾಟಕದ ಮನೆ ಮಗ

ಕಷ್ಟಗಳ ಆಲಿಸುವ ಈ ಹುಡುಗ

ನಮ್ಮೆಲ್ಲರ ನೆಚ್ಚಿನ ವೀರ ಕನ್ನಡಿಗ


 ಮೌರ್ಯ

ತನ್ನ ಶಕ್ತಿಯಲ್ಲಿ ಶೌರ್ಯ

ಯಶಸ್ಸಿನ ಕಡೆ ನಡೆಸುವ ಕಾರ್ಯ

ಸದಾ ಮುನ್ನುಗುವ ಗುಂಡಿಗೆಯಲ್ಲಿ ಧೈರ್ಯ

ಅದುವೇ ನಮ್ಮ ಮೌರ್ಯ


ಆಕಾಶ್

ಪ್ರೀತಿ ಭಾಂದವ್ಯದ ಬೆಸುಗೆಯ ಸ್ಪರ್ಶ

ಆಸೆ ಕನಸುಗಳಿಗೆ ನನಸಾಗಲು ಬೇಕು ವರುಷ

ನೋವು ನೀಡಲು ಸಾಕು ನಿಮಿಷ

ಎಲ್ಲಾರನ್ನು ಪ್ರೀತಿಸಿ ಗೌರವಿಸಿ ಎಂದರು ನಮ್ಮ ಆಕಾಶ್


ನಮ್ಮ ಬಸವ


ಅರಿತವರು ಯಾರು ನೀರಿನ ಬಣ್ಣವ

ತಿಳಿಯುವರ್ಯಾರು ನಮ್ಮ ಮನದ ನೋವ

ಯಾಕೆ ಬೇಕು ಜಗದಲಿ ಬೇಧ ಭಾವ

ನಾವೆಲ್ಲರೂ ಒಂದಾಗಿ ಬಾಳಿ ಬದುಕುವ

ಎಂದವರು ನಮ್ಮ ಬಸವ


ಅಜಯ್

ಸ್ಫೂರ್ತಿಯ ಮಾತಿನಲ್ಲಿ ಅಭಯ

ಗುರಿ ಮುಟ್ಟಲು ಬೇಕು ದೀರ್ಘ ಸಮಯ

ಕಂಡ ಕನಸ್ಸಿಗೆ ಮುಂದೊಂದು ದಿನ ಸಿಗುವುದು ಜಯ

ಪ್ರಯತ್ನ ಮಾಡುತ್ತಾ ಹೋದರೆ ಪಡೆಯುವೆ ದ್ವಿಗ್ವಿಜಯ ಎಂದರು ನಮ್ಮ ಅಜಯ್


ಅರಸು

ನೆಮ್ಮದಿ ಬದುಕಿಗೆ ಸಾಕು ದುಡಿಮೆಯ ಕಾಸು

ಕುಟುಂಬದ ಜೊತೆ ಕಳೆ ನೀ ತುಸು ತಾಸು

ಕಿರಿಯರಿಂದ ಹಿರಿಯವರೆಗೂ ಎಲ್ಲಾರನ್ನು ಗೌರವಿಸು

ಆಗುವೆ ನೀ ತಿಳಿಯದೇ ನಿನಗೆ ಬಾಸು

ಎಂದರು ನಮ್ಮ ಅರಸು


ಮಿಲನ

ಭಾವನೆಗಳ ಸಮ್ಮಿಲನ

ಮನಸುಗಳು ಸಂಚಲನ

ಕನಸುಗಳು ರೋಮಾಂಚನ

ಪ್ರೀತಿ ಪ್ರೇಮದೊಂದಿಗೆ ಮದುವೆಯ ಮಿಲನ


ಬಿಂದಾಸ್


ಬದುಕಿನಲ್ಲಿ ಸದಾ ಇರಲಿ  ಜೋಶ್

ಜೀವನದಲ್ಲಿ ದುಡಿದು ಮಾಡು ಕಾಸ್

ಒಂದಷ್ಟು ಉಳಿಸುವ ತತ್ವ ಪಾಲಿಸು

ನಾಲ್ಕು ದಿನದ ಬಾಳು ಎಂಜಾಯ್

ಮಾಡಿ ಆಗು ನೀ ಬಿಂದಾಸ್


ವಂಶಿ

ತಾಯಿಗೆ ಮಗು ನಕ್ಕರೆ ಖುಷಿ

ಮಗುವಿಗೆ ತಾಯಿ ಪ್ರೀತಿ ಕಂಡರೆ ಖುಷಿ

ತಾಯಿ ಮಗುವಿನ ನಡುವೆ ಪ್ರೀತಿಯ ಸಸಿ  ಎಲ್ಲಾವನ್ನು ಪಡೆದುಕೊಂಡವನ್ನು ನಮ್ಮ ವಂಶಿ


ರಾಜ್

ಲೈಫ್ ಲ್ಲಿ ಇರಬೇಕು ಕಾಂಪಿಟೇಷನ್ ಕ್ರೆಜ್

ಕ್ರೆಜ್ ಜೊತೆ ಗೆಲ್ಲು  ಯಶಸ್ಸಿನ ಪ್ರೈಜ್

ಆಗುವೆ ನಿನಗೆ ನೀನೆ  ರಾಜ್


ರಾಮ್

ಸಂತೋಷ ಸಡಗರ ಸಂಭ್ರಮ

ಸಂಸಾರದಲ್ಲಿ ಇರುವುದು ಸರಿಗಮ

ಸುಖ ದುಃಖಗಳು ಇರಲಿ ಸಮ ಸಮ

ಭಾಂದವ್ಯ  ರಕ್ತ ಸಂಬಂಧಗಳ

ಒಂದಾಗುವುದನ್ನು ತಿಳಿಸಿದವನು ನಮ್ಮ ರಾಮ್


ಪೃಥ್ವಿ

ಕಾಯಕವೇ ದುಡಿಮೆಯ ಶಕ್ತಿ

ನಿಷ್ಠೆ ಪ್ರಾಮಾಣಿಕತೆ ಯ ಭಾವ ಭಕ್ತಿ

ಯಶಸ್ಸಿನ ಹಾದಿಯಲ್ಲಿ ಸಾಗಿದರೆ ಜಯ ಕೀರ್ತಿ

ಎಂದರು ನಮ್ಮ ಪೃಥ್ವಿ


ಜಾಕಿ

ಮನದ ಚಿಂತೆಗಳನ್ನು ಬಿಟ್ಟಾಕಿ

ಸಮಸ್ಯೆಗಳಿಗೆ ಪರಿಹಾರ ಹುಡುಕಿ

ಜೊತೆ ಇರುವವರೊಂದಿಗೆ ಕೈ ಕುಲುಕಿ

ಲೈಫ್ ಎಂಜಾಯ್ ಮಾಡುತ್ತಾ ಬದುಕಿ

ಎಂದು ಹೇಳಿದವರು ಜಾಕಿ


ಹುಡುಗರು

ಸ್ನೇಹಕ್ಕೆ ನಾವು ಕೈ ಜೋಡಿಸುವವರು

ಕಷ್ಟಕ್ಕೆ ಸದಾ ಜೊತೆಯಾಗುವವರು

ಸಂತೋಷದಲ್ಲಿ ಸಂಭ್ರಮಿಸುವವರು

ಎಲ್ಲದಕ್ಕೂ ನಾವು ರೆಡಿ ಗುರು ಎನ್ನುವ ಮಾತೆ ಹುಡುಗರು


 ಪರಮಾತ್ಮ

ಪ್ರೀತಿ ಪ್ರೇಮದ ಅಂತರಾಳದ ಮರ್ಮ

ಭಾವನೆಗಳಿಗೆ ತುಂಬುವುದು ಸಂಭ್ರಮ

ಭಕ್ತಿ ಭಾವಗಳೊಂದಿಗೆ ಅಂತಾರತ್ಮ

ಒಂದಗಿಸುವನು ನಂಬಿರುವ ಪರಮಾತ್ಮ


ಅಣ್ಣಾಬಾಂಡ್

ಬದುಕು ಒಂದು ಸುಂದರ ಕಾಂಡ

ಸುಂದರ ಕನಸುಕಟ್ಟಿಕೊಂಡು ನೋಡ

ಕನಸನ್ನ ನನಸು ಮಾಡು ಕಡೆ ಹೆಜ್ಜೆ ಇಡ

ನಿನ್ನ ಜೀವನಕ್ಕೆ ನೀನೆ ಅಣ್ಣಾ ಬಾಂಡ್



ಯಾರೇ ಕೊಗಡಲಿ

ನಮ್ಮ ಜೀವನದ ಪಯಣದಲ್ಲಿ

ಕಷ್ಟದಲ್ಲಿ ಬರುವುದಿಲ್ಲ ಯಾರು ಕ್ಷಣದಲಿ

ಕಷ್ಟ ನೋವು ಎಲ್ಲಾ ಸರಿಯಲಿ

ಜೀವನ ಸುಖದ ಕಡೆ ಸಾಗುತ್ತಿರಲಿ

ಗುರಿಯ ಕಡೆ ಗಮನವಿರಲಿ

ತಲೆ ಕೆಡಿಸಿಕೊಳ್ಳಬೇಡಿ ಯಾರೇ ಕೊಗಡಲಿ


ನಿನ್ನಿಂದಲೇ

ಪ್ರೀತಿಸುವ ಆಸೆ ಈಗಿನಿಂದಲೇ

ಮನಸಿನಲ್ಲಿ  ಕನಸಿನ ಗರಿ ಚಿಗುರೆಲೇ

ಭಾವನೆಗಳ ತುಂಬಿದ ಕಡಲ ಮಳೆ

ಎಲ್ಲದಕ್ಕೂ ಕಾರಣ ನಿನ್ನ ಪ್ರೀತಿಯಿಂದಲೇ



ಶಕ್ತಿ ಮತ್ತು ಮೈತ್ರಿ

ಯೋಚನೆ ಆಲೋಚನೆಯ ಶಕ್ತಿ

ಕನಸು ನನಸಾಗಬೇಕಾದರೆ ಮಾಡಬೇಕು ಕ್ರಾಂತಿ

ಆಗಲೇ ಯಶಸ್ಸು ಸಿಕ್ಕಿ ಜೀವನದಲ್ಲಿ ಒಂದಾಗುವುದು ನೆಮ್ಮದಿ ಮತ್ತು ಶಾಂತಿ ಎಂಬ ಮೈತ್ರಿ


ರಣ ವಿಕ್ರಮ


ಬದುಕಿನಲ್ಲಿ ಸಕರಾತ್ಮಕವೇ ಸಕ್ರಮ

ನಕಾರಾತ್ಮಕವಾಗಿ ನಡೆದರೆ ಅಕ್ರಮ

ಬದುಕು ಸೋಲು ಗೆಲುವಿನ ಪರಾಕ್ರಮ

ಸಾಧಿಸು ನೀನಾಗಿ ರಣವಿಕ್ರಮ



ಚಕ್ರವ್ಯೂಹ


ಮೂಳೆ ಮಾಂಸದ ತಡಿಕೆ ಈ ದೇಹ

ಬಯಸುವುದು ಮೋಹ ವ್ಯಾಮೋಹ

ಕಷ್ಟ ನೋವು ಸೋಲು ಗೆಲುವುಗಳ ಸಮೂಹ

ಎಲ್ಲಾವನ್ನು ಭೇದಿಸುವ ಜೀವನವೇ ಚಕ್ರವ್ಯೂಹ


ದೊಡ್ಮನೆ ಹುಡ್ಗ

ರಾಜರು ಯುದ್ಧಕ್ಕೆ ಬಳಸುವ ಗಡ್ಗ

ಸ್ನೇಹಿತರ ಜೊತೆ ಒಂದಾಗುವ ಬೇಗ

ಈಗಿನ ಕಾಲವೇ ಒಂದು ಕಲಿ  ಯುಗ 

ಕಲಿಯುಗದ  ರಾಜನಿವನು  ನಮ್ಮ ಮನೆ ದೊಡ್ಮನೆ ಹುಡ್ಗ


 ರಾಜಕುಮಾರ

ಚಿತ್ರರಂಗದ ರಾಜ ಕುಮಾರ

ಕರುನಾಡ ನಾಡಿನ ಕುವರ

ಸಮಾಜಕ್ಕೆ ನಿಸ್ವಾರ್ಥ ಸೇವೆಯ ಮಾಡಿದ ಈ ವರ ಅವರೇ ನಮ್ಮ ಪುನೀತ್ ರಾಜಕುಮಾರ



ಅಂಜನಿಪುತ್ರ

ಭಾಂದವ್ಯ ಬೆಸೆಯುವ ಮಿತ್ರ

ಸ್ನೇಹ ಪ್ರೀತಿ ನೀಡುವ ಮನಸು ಪವಿತ್ರ

ದುಷ್ಟರು ಯಾರಿಲ್ಲ ಇವರ ಹತ್ರ

ಯಾಕೆಂದರೆ ಇವರು ಅಂಜನೀಪುತ್ರ


: ನಟಸೌರ್ವಭಾಮ

ನಟನಯಲ್ಲಿ ಸೌರ್ವಭಾಮ

ವಿಶ್ವಾಸದಲ್ಲಿ ನೀಡುವ ಪ್ರೇಮ

ಮಾತು ಸ್ವರ ಸಂಗೀತ ಸಮಾಗಮ

ಕರುನಾಡು ಕಂಡ ನಟಸೌರ್ವಭಾಮ



ಯುವರತ್ನ


ಕರ್ನಾಟಕದ ಮುತ್ತು ಚಿನ್ನ

ಕನಸಲ್ಲೂ ಕನವರಿಸುವರು ನಿಮ್ಮನ್ನ

ಕಾಣದ ಮರೆಯಲ್ಲಿ ಸಮಾಜ ಸೇವೆ

ಮಾಡಿದ ನಿಮ್ಮ ಅತ್ಯದ್ಭುತ ಗುಣ

ಅದಕ್ಕಾಗಿ ಈ ಕರುನಾಡಲ್ಲಿ ನೀವು ಅದಿರಿ ಯುವರತ್ನ


ಜೇಮ್ಸ್

ಲೈಫ್ ನಲ್ಲಿ ಆಗಾಗ ಆಗುವುದು ಟರ್ನಿಂಗ್ ಪಾಯಿಂಟ್ಸ್

ಧನಾತ್ಮಕ ಋಣಾತ್ಮಕ ಭಾವನೆಗಳಿಗೆ ಮನಸು ಬೆಸ್ಟ್ ಪ್ಲೇಸ್

ಏನೇ ಆದರೂ ಲೈಫ್ನಲ್ಲಿ ಇರಲಿ ಜೋಶ್

ಎಂದವರು ನಮ್ಮ ಜೇಮ್ಸ್


ಗಂಧದ ಗುಡಿ


ಯಾರಿಲ್ಲ ನಿಮಗೆ ಇಂದು ಸರಿಸಾಟಿ

ಒಂದೊಂದು ಚಿತ್ರಗಳು ಹೇಳುವ ಅರ್ಥಗಳ ದಾಟಿ

ಕಟ್ಟಿರುವಿರಿ ನಿಮ್ಮದೇ ಅನುಭವಗಳಲ್ಲಿ ಗಂಧದ ಗುಡಿ

ನಿಮಗೆ ಹೃದಯ ಪೂರ್ವಕ ನಮನ ಕೋಟಿ 


ಬಸವೇಶ. ಎಸ್(ಶಿಕ್ಷಕರು )

ಯುವ ಸಾಹಿತಿ

ತಿ. ನರಸೀಪುರ

Image Description

Post a Comment

0 Comments