*ಇಂದು ವಿಶ್ವ ಹಿರಿಯರ ದಿನ ಆ* *ನಿಮಿತ್ತ ಈ ಕವನ*
*ಇಳಿವಯಸ್ಸಿನ ವೇದನೆ*
ಹರೆಯ ಸರಿದು ಸಾಗುತ ಇಳಿವಯಸ್ಸು ಬಂದಿದೆ
ಹಲ್ಲು ಬಿದ್ದು ಹೋಗುತಿವೆ ಬೆನ್ನು ಈಗ ಬಾಗುತಿದೆ
ನರವು ಸೆಟೆದು ನಿಂತಿವೆ ಕಣ್ಣುಮಂಜಾಗುತಿವೆ
ಊರು ಹೋಗು ಎನ್ನುತಿದೆ ಕಾಡು ಬಾ ಎಂದಿದೆ
ಅಪ್ಪ ಅಂದ ಮಕ್ಕಳೀಗ ಮುದುಕ ಎನ್ನುತಿಹರು
ಬಂದ ಸೊಸೆಯರು ಸಹ ಮೋರೆ ತಿರುವುತಿಹರು
ತುತ್ತು ಕೂಳಿಗೆ ನೂರೆಂಟು ಮಾತನಾಡುವರು
ಹಂಗಿಸಿ ಅಣಕವಾಡುತ ಹಿಡಿಕೂಳ ಹಾಕುವರು
ಕೂಡಿದ ಮಡದಿಯು ಸಹ ಮಸಣ ಸೇರಿಹಳು
ನನ್ನ ಹಿತಕಾಯುವವರು ಯಾರಿಹರು ಹೇಳು
ಒಂಟಿತನ ಕಾಡುತಲಿ ಬದುಕು ಬೇಸರವೆನಿಸಿದೆ
ಮಂಟಪದಿ ಮಲಗುವ ಹೊತ್ತು ಸಮೀಪಿಸುತ್ತಿದೆ
ಹರೆಯದಲಿ ನಾನು ನನ್ನವರೆಂದು ಹೋರಾಡಿದೆ
ಅದು ಹುಂಬುತನವೆಂದು ನನಗೀಗ ತಿಳಿಯುತ್ತಿದೆ
ಎಲ್ಲ ಸಂಬಂಧಗಳು ದೂರವಾಗಿವೆ ನನ್ನೊಡೆಯ
ಈ ಭವ ಬಂಧನದಿಂದ ಮುಕ್ತಿ ಕರಣಿಸು ಹರಿಯೇ
*ಬೋರೇಗೌಡ- ಅರಸೀಕೆರೆ*
.gif)

.gif)


0 Comments