ಗಗನ ಕುಸುಮ (ಕಾದಂಬರಿ) ಸಂಚಿಕೆ-೬೯
ಹಿಂದಿನ ಸಂಚಿಕೆಯಲ್ಲಿ
ಎಂ ಜಿ ರಸ್ತೆಯಲ್ಲಿ ಸಂಜಯನು ಗಗನಳೊಂದಿಗೆ ಹೋಗುತ್ತಿರುವುದನ್ನು ಕುಸುಮಳ ದೊಡ್ಡ ಮಗು ನೋಡಿ ಅಮ್ಮಾ ಅಪ್ಪ ಹೋಗುತ್ತಿದ್ದಾರೆಂದು ಬೇಗ ಬಾಮ್ಮಾ ಎಂದಾಗ ಕುಸುಮಳಿಗೆ ಕರುಳು ಕಿತ್ತು ಬಂದಂತಾಗಿರುತ್ತದೆ
ಕಥೆಯನ್ನು ಮುಂದುವರೆಸುತ್ತಾ
ಮಕ್ಕಳಿಗೆ ಅಪ್ಪನೆಂಬ ವಿಶ್ವಾಸವಿದ್ದರೂ ಅಪ್ಪನಿಗೆ ಮಕ್ಕಳ ಮೇಲೆ ಪ್ರೀತಿಯೇ ಇಲ್ಲದಿರುವುದು ವಿಪರ್ಯಾಸವಾಗಿದ್ದು ಮಕ್ಕಳಿಗೆ ಯಾವ ರೀತಿ ಹೇಳಬೇಕೆಂದು ತಿಳಿಯದೆ ತೊಳಲಾಡುತ್ತಾಳೆ.
ಅಮ್ಮಾ ಅಪ್ಪನ ಬಳಿ ಹೋಗೋಣ ಬೇಗ ಬಾಮ್ಮಾ ಎಂದಾಗಲಂತೂ ಕುಸುಮಳಿಗೆ ಕರುಳು ಕಿತ್ತು ಬರುವಂತಾಗಿದ್ದು ಬೇಡಾ ಪುಟ್ಟಾ ಅವರು ಅರ್ಜಂಟಾಗಿ ಯಾವುದೋ ಕೆಲಸಕ್ಕೆ ಹೋಗುತ್ತಿದ್ದಾರೆ ನಾವು ಮನೆಗೆ ಹೋಗೋಣ
ಈಗಲೇ ಮನೆಗೆ ಹೋಗುವುದು ಬೇಡಮ್ಮಾ ಅಪ್ಪನ ಮಾತನಾಡಿಸಿ ಹೋಗೋಣ ಬಾಮ್ಮಾ ಎಂದು ಕುಸುಮಳ ಕೈ ಹಿಡಿದು ಎಳೆದರೂ ಬೇಡಾ ಪುಟ್ಟಾ ಅಪ್ಪ ಬೈತಾರೆ ನಾವು ಮನೆಗೆ ಹೋಗೋಣವೆಂದು ಕುಸುಮಳು ಹೇಳಿದರೂ ಆ ಮಗು ಕೇಳದೆ ಕುಸುಮಳ ಕೈಯಿಂದ ಬಿಡಿಸಿಕೊಂಡು ಅಪ್ಪಾ ಅಪ್ಪಾ ಎಂದು ಕೂಗುತ್ತಾ ಅಪ್ಪನ ಹಿಂದೆ ಓಡಿ ಹೋಗುತ್ತಿದ್ದು
ಕುಸುಮಳಿಗೆ ಭಯವಾಗಿ ಪಾಪೂ ಹೋಗಬೇಡ ನಿಂತುಕೋ ಎಂದು ಕೂಗುತ್ತಾ ಹಿಂದೆ ಓಡಿ ಬರುತ್ತಾಳೆ
ಮಗು ಅಪ್ಪನ ಬಳಿ ಬಂದು ಅಪ್ಪಾ ಎಲ್ಲಿಗೆ ಹೋಗುತ್ತಿದ್ದೀಯಾ ಅಮ್ಮನು ಬಂದಿದ್ದಾಳೆ ಬಾಪ್ಪಾ ಎಂದು ಸಂಜಯನ ಕೈ ಹಿಡಿದು ಎಳೆದಾಗ
ಪಕ್ಕದಲ್ಲಿದ್ದ ಗಗನ ಏಯ್ ಯಾರೋ ನೀನು ಹೋಗೋ ಎಂದು ಮಗುವನ್ನು ನೂಕಿದಾಗ ಮಗು ಪಕ್ಕಕ್ಕೆ ಬೀಳುತ್ತದೆ
ಆ ವೇಳೆಗೆ ಗಗನ ಹತ್ತಿರ ಬಂದು ಅಯ್ಯೋ ಗಗನಾ ಇದೇನು ಮಾಡಿದೆ ಮಗುವನ್ನು ಏಕೆ ನೂಕಿದೆ ಎಂದು ಮಗುವನ್ನು ಹಿಡಿಯಲು ಹೋದಾಗ
ನಡಿ ಸಂಜಯ್ ಕೋರ್ಟ್ ಏನು ಹೇಳಿದೆಯೆಂದು ಗೊತ್ತಿಲ್ಲವಾ ಎಂದು ಹೇಳಿ ಮಗು ಕೆಳಕ್ಕೆ ಬಿದ್ದರೂ ನೋಡದೆ ಕರೆದುಕೊಂಡು ಹೋಗುತ್ತಿರುವಾಗ
ಮಗು ಬಿದ್ದಿದ್ದನ್ನು ನೋಡಿದ ಕುಸುಮ ಅಳುತ್ತಿದ್ದ ಮಗುವನ್ನು ಎತ್ತಿ ನಿಲ್ಲಿಸಿ ಸಮಾಧಾನ ಮಾಡುತ್ತಾ ಮುಂದೆ ಹೋಗುತ್ತಿದ್ದ ಗಗನ ಸಂಜಯನ ಬಳಿ ಹೋಗಿ ಏಯ್ ಗಗನಾ….. ನಿನಗೆ ಮನುಷ್ಯತ್ವ ಎಂಬುದೇ ಇಲ್ಲವಾ ಮಗು ಎನ್ನುವುದನ್ನು ನೋಡದೆ ತಳ್ಳಿದ್ದೀಯಲ್ಲಾ ಎನ್ನಲು
ಸಂಜಯ್ ನಿನ್ನ ಮಾಜಿ ಹೆಂಡತಿ ನನ್ನನ್ನು ಬೈಯ್ಯುತ್ತಿದ್ದರೂ ಸುಮ್ಮನಿದ್ದೀಯಲ್ಲಾ ಎಂದು ಕೋಪದಿಂದ ರೇಗಿದಾಗ
ಸಂಜಯನು ಇಕ್ಕಟ್ಟಿಗೆ ಸಿಲುಕಿದಂತಾಗಿ ಯಾರ ಪರವೂ ಮಾತನಾಡದೆ ಮೂಕ ಪ್ರೇಕ್ಷಕನಂತೆ ನಿಂತಿದ್ದನ್ನು ನೋಡಿ ಯಾವುದೋ ವ್ಯಾೆೋಹಕ್ಕೆ ಬಲಿಯಾದವರಿಂದ ನ್ಯಾಯವೆಲ್ಲಿ ಸಿಗುತ್ತದೆಂದುಕೊಂಡು ಕುಸುಮ ಮಕ್ಕಳನ್ನು ಕರೆದುಕೊಂಡು ಮನೆಗೆ ಬಂದು ಅವರಪ್ಪನಿಗೆ ನಡೆದ ಘಟನೆ ಹೇಳಿದಾಗ
ಇದೇನಮ್ಮಾ ಕಾಕತಾಳೀಯವೆಂಬಂತೆ ನೀನೆಲ್ಲಿ ಹೋದರೂ ಅವಳು ವಕ್ಕರಿಸುತ್ತಾಳೆ
ಅದೇನು ಗ್ರಹಚಾರವೋ ಹೋಗಪ್ಪಾ ನಾನುಎಲ್ಲಿ ಹೋದರೂ ಆ ರಾಕ್ಷಸಿ ಬರುತ್ತಾಳೆ ಅವಳಿಗೊಂದು ಗತಿ ಕಾಣಿಸುವವರೆಗೂ ಹಾಗೇ ಮೆರೆಯುತ್ತಾಳೆಂದು ಹೇಳಿ ರೂಮಿಗೆ ಹೋಗುತ್ತಾಳೆ
ಕೆಲವು ದಿನಗಳ ಬಳಿಕ ಶನಿವಾರದ ದಿನ ಮದ್ಯಾಹ್ನ ಎರಡು ಗಂಟೆ ವೇಳೆಯಲ್ಲಿ ಮಕ್ಕಳನ್ನು ಮನೆಗೆ ಕರೆದುಕೊಂಡು ಅವರಿಗೆ ಊಟ ಮಾಡಿಸಿ ತಾನೂ ಊಟ ಮಾಡಿ ರೂಮಿಗೆ ಹೋಗುತ್ತಿರುವಾಗ
ಪೋಸ್ಟ್ ಎಂದು ಕೂಗಿದ್ದು ಕೇಳಿಸಿಕೊಂಡು ಬಾಗಿಲು ತೆಗೆದಾಗ
ಪೋಸ್ಟ್ ಮ್ಯಾನ್ ನಿಮಗೆ ರಿಜಿಸ್ಟರ್ ಪತ್ರ ಬಂದಿದೆ ಮೇಡಮ್ ಎಂದಾಗ
ಯಾರಿಂದ ಬಂದಿದೆ ಎಂದಾಗ
ಪೋಸ್ಟ್ ಮ್ಯಾನ್ ಕಳುಹಿಸಿರುವ ವಿಳಾಸ ನೋಡಿ ಮೇಡಮ್ ಕೋರ್ಟಿನಿಂದ ಬಂದಿದೆ ಎನ್ನಲು
ಕೋರ್ಟಿನಿಂದ ಪೋಸ್ಟ್ ಬಂದಿದೆ ಎಂದಿದ್ದಕ್ಕೆ ಕುಸುಮಳಿಗೆ ಸ್ವಲ್ಪ ಗಾಬರಿಯಾಗುತ್ತದೆ ಆದರೂ ಸಾವರಿಸಿಕೊಂಡು ಸಹಿ ಮಾಡಿ ಪಡೆದು ಒಳಗೆ ಹೋಗಿ ಕವರ್ ಒಡೆದು ನೋಡಿ ಓದಿ ಇದೇನಿದು ನಾನೇನು ಮಾಡಿದೆ? ನನಗೇಕೆ ಕೋರ್ಟಿಂದ ನೋಟೀಸ್ ಬರುತ್ತದೆ ಇವೆಲ್ಲವೂ ಗಗನಳ ಕಿತಾಪತಿಯಿಂದಲೇ ಆಗುತ್ತಿದೆ ಎಂದು ಈಗೇನು ಮಾಡುವುದೆಂದು ಯೋಚಿಸುತ್ತಿರುವಾಗ
ಅವರಪ್ಪ ಬಂದು ಕುಸುಮಳ ಕೈಯ್ಯಲ್ಲಿದ್ದ ಕವರ್ ನೋಡಿ ಯಾವುದೋ ಕಾಗದ ಇಟ್ಟುಕೊಂಡಿದ್ದೀಯಾ ಎನ್ನಲು
ಕುಸುಮ ಮೌನವಾಗಿ ಕವರನ್ನು ತನ್ನ ತಂದೆಗೆ ಕೊಡಲು
ಅವರಪ್ಪ ನೋಟೀಸ್ ಓದಿ ಇದೇನಮ್ಮಾ ಡೈವೋರ್ಸ್ ಕೊಟ್ಟರೂ ಪುನಃ ನಿನ್ನ ಗಂಡ ಕಿತಾಪತಿ ಮಾಡುತ್ತಿದ್ದಾನೆ
ಇದೆಲ್ಲವೂ ಗಗನಳ ಕಿತಾಪತಿ ಕಣಪ್ಪಾ ಎನ್ನುವ ವೇಳೆಗೆ
ಅವರ ಮಾವ ಬಂದು ಏನು ಬೀಗರೇ ಯಾರು ಕಿತಾಪತಿ ಮಾಡುತ್ತಿರುವುದು ನಾನಲ್ಲಾ ತಾನೇ?
ಇದೇನು ಬೀಗರೇ ನೀವು ಹೀಗೆ ಹೇಳುತ್ತಿದ್ದೀರಾ? ನಿಮ್ಮನ್ನು ಕಿತಾಪತಿ ಮಾಡಿದ್ದೀರಾ ಎಂದು ಏಕೆ ಹೇಳಲಿ ಈ ಕೋರ್ಟ್ ನೋಟೀಸ್ ನೋಡಿದರೆ ಯಾರು ಕಿತಾಪತಿ ಮಾಡಿದ್ದಾರೆಂದು ನಿಮಗೇ ತಿಳಿಯುತ್ತದೆ ಎನ್ನುತ್ತಾ ನೋಟೀಸ್ ಕೊಟ್ಟಾಗ
ಸಂಜಯನ ತಂದೆ ನೋಟೀಸ್ ಓದಿ ಇದೇನು ಬೀಗರೇ ಡೈವೋರ್ಸ್ ಆಗಿದ್ದರೂ ಕೂಡಾ ನನ್ನನ್ನು ಹಿಂಬಾಲಿಸುತ್ತಾ ಮಕ್ಕಳನ್ನು ಛೂ ಬಿಟ್ಟು ಕಿರುಕುಳ ನೀಡುತ್ತಿದ್ದಾಳೆಂದು ನನ್ನ ಮಗ ಪುನಃ ನಿಮ್ಮ ಮಗಳ ಮೇಲೆ ಕೋರ್ಟಿಗೆ ದೂರು ಕೊಟ್ಟಿದ್ದಾನೆ ನಿಮ್ಮ ಮಗಳು ಯಾವಾಗ ಮಕ್ಕಳೊಂದಿಗೆ ಅವನಿಗೆ ಕಿರುಕುಳ ಕೊಡಲು ಹೋಗಿದ್ದಳು?
ಹದಿನೈದು ದಿನದ ಹಿಂದೆ ಎಂ ಜಿ ರಸ್ತೆಗೆ ಹೋಗಿದ್ದಾಗ ನಿಮ್ಮ ಮಗ ಗಗನಳ ಜೊತೆಗೆ ಹೋಗುತಿದ್ದನಂತೆ ನಿಮ್ಮ ದೊಡ್ಡ ಮೊಮ್ಮಗ ಅಪ್ಪನನ್ನು ನೋಡಿ ಅಪ್ಪಾ ಎಂದು ಓಡಿಹೋಗಿ ಕೈ ಹಿಡೀತಂತೆ ಗಗನಳಿಗೆ ಕೋಪಬಂದು ಮಗುವನ್ನು ನೂಕಿದಾಗ ಮಗು ಕೆಳಗೆ ಬಿತ್ತಂತೆ ನನ್ನ ಮಗಳು ಗಗನಳಿಗೆ ಬೈದಿದ್ದರ ಪರಿಣಾಮವೇ ಈ ಕೋರ್ಟ್ ನೋಟೀಸ್ ರಘುರಾಂರವರೇ
ಇನ್ನೂ ಎರಡು ತಿಂಗಳಿದೆ ಲಾಯರ್ ಗೆ ನೋಟೀಸ್ ತೋರಿಸಿ ಅವರು ಏನು ಹೇಳುತ್ತಾರೋ ಅದರಂತೆ ನಡೆಯೋಣವೆಂದು ಹೇಳಿ ರೂಮಿಗೆ ಹೋಗುತ್ತಾರೆ
ಅಪ್ಪಾ ಅವಳ ಅಹಂಕಾರ ಹೇಗೆ ಇಳಿಸಬೇಕೆಂದು ತಿಳಿಯುತ್ತಿಲ್ಲಪ್ಪಾ
ಏನು ಮಾಡೋದು ಹೋಗಿ ಅವಳಿಗೆ ಹೊಡೆಯಲು ಆಗುತ್ತದಾ?
ಅವಳು ಪುನಃ ಸಿಕ್ಕಿ ಏನಾದರೂ ಕಿರಿಕ್ ಮಾಡಿದರೆ ಚೆನ್ನಾಗಿ ಹೊಡೆದು ಬರುವಷ್ಟು ಕೋಪ ಬರುತ್ತಿದೆ ಕಣಪ್ಪಾ
ಬೇಡಮ್ಮಾ ಅವಳ ಸಹವಾಸವೇ ಬೇಡಮ್ಮಾ ಕಾನೂನಿನ ಪ್ರಕಾರ ಅಪ್ಪ ಮಗಳಿಗೆ ಬುದ್ದಿ ಕಲಿಸಬೇಕಮ್ಮಾ ದೈಹಿಕವಾಗಿ ತೊಂದರೆ ಮಾಡಿ ನಿನ್ನ ಮೇಲೆ ಅಪವಾದ ಬಂದು ನೀನು ಪೋಲೀಸ್ ಸ್ಟೇಷನ್ ಕೋರ್ಟಿಗೆ ಅಲೆಯುವಂತಾದರೆ ಮಕ್ಕಳು ಒಂಟಿಯಾಗುತ್ತವೆ
ಆಯ್ತಪ್ಪಾ ಇನ್ನು ಅವಳೇನಾದರು ಕಂಡರೆ ದೂರವೇ ಉಳಿಯುತ್ತೇನೆ ಕಣಪ್ಪಾ
ಹೌದಮ್ಮಾ ಮಕ್ಕಳ ಭವಿಷ್ಯ ಮುಖ್ಯ ಕಣಮ್ಮಾ ಎಂದು ಹೇಳಿ ಹೋಗುತ್ತಾರೆ.
ತಿಂಗಳು ಕಳೆದರೂ ಗಗನ ಸಂಜಯನ ಜೊತೆ ಮದುವೆ ಮಾತಾಗಲೀ ಅಥವಾ ಪ್ರಾಜೆಕ್ಟ್ ವಿಚಾರವನ್ನು ಮಾತನಾಡುತ್ತಿಲ್ಲವೆಂದು ಬೇಸರವಾಗಿ ರಾತ್ರಿ ಹನ್ನೊಂದು ಗಂಟೆಗೆ ಫೋನ್ ಮಾಡಿದಾಗ
ಗಗನ ಫೋನ್ ರಿಸೀವ್ ಮಾಡುವುದೇ ಇಲ್ಲಾ
ಛೇ ಇವಳಿಗೇನಾಯಿತೋ ಎಂದುಕೊಂಡು ಸಂಜಯನು ಇನ್ನೂ ಹೆಚ್ಚಿಗೆ ಬೇಸರಗೊಂಡು ಮಲಗಿರುವಾಗ
ಮೊಬೈಲ್ ರಿಂಗ್ ಆಗಿದ್ದನ್ನು ನೋಡಿ ಓ ಗಗನಳೇ ಫೋನ್ ಮಾಡಿದ್ದಾಳೆಂದು ಹಲೋ ಡಿಯರ್ ಏಕೆ ಫೋನ್ ರಿಸೀವ್ ಮಾಡಲಿಲ್ಲ
ಸಾರಿ ಸಂಜಯ್ ನಾನು ಮುಂಬೈಗೆ ಬಂದಿದ್ದೇನೆ ನನಗೆ ಸ್ವಲ್ಪ ಸ್ಟ್ರೈನ್ ಆಗಿತ್ತು ಹಾಗೇ ಮಲಗಿದ್ದೆ
ಏಕೆ ನೀನು ಆಗಾಗ್ಗೆ ಮುಂಬೈಗೆ ಹೋಗುತ್ತಾ ಇರುತ್ತೀಯಾ?
ಬಿಸ್ ನೆಸ್ ಎಂದರೆ ಎಲ್ಲಾ ಕಡೆಯೂ ಹೋಗಲೇ ಬೇಕು ನಮ್ಮಪ್ಪನಿಗೆ ನಾನೊಬ್ಬಳೇ ಹೆಲ್ಪರ್ ನಿನಗೆ ಗೊತ್ತಿರುವಂತೆ ನನ್ನ ತಮ್ಮ ವಿದೇಶದಲ್ಲಿ ಓದುತ್ತಿದ್ದಾನೆ ಅವನು ಬರುವವರೆಗೂ ಇದೇ ರೀತಿ ಹೋಗುತ್ತಿರಬೇಕು
ನನ್ನ ಮದುವೆಯಾಗಿದ್ದರೆ ಇಬ್ಬರೂ ಒಟ್ಚಿಗೆ ಹೋಗಬಹುದಿತ್ತಲ್ಸವಾ? ನಿಮ್ಮಪ್ಪನಿಗೂ ಸಹಾಯವಾಗುತ್ತಿತ್ತು
ಹೌದು ಏನು ಮಾಡೋದು ನಮ್ಮಪ್ಪನ ಬಳಿ ಮದುವೆ ವಿಚಾರ ಮಾತನಾಡುವುದಕ್ಕೆ ಆಗುತ್ತಿಲ್ಲ
ನಿಮ್ಮಪ್ಪನನ್ನು ಬೇಗ ಕೇಳಿ ಮದುವೆ ನಿಶ್ಚಯವಾಗುವಂತೆ ಮಾಡು
ಓ ಕೆ ನಾನು ಊರಿಂದ ಬಂದ ತಕ್ಷಣ ವಿಚಾರ ಮಾಡುತ್ತೇನೆ
ಗಗನಾ ಗಗನಾ ಪ್ರಾಜೆಕ್ಟ್ ಬಗ್ಗೆ ಏನಾಯ್ತು?
ಹ್ಞಾಂ. ….. ಅದೂ ….ಪ್ರಾಜೆಕ್ಟ್ ಮಾಡುವ ಜಾಗ ಡಿಸ್ ಪ್ಯೂಟಾಗಿ ಕೋರ್ಟಲ್ಲಿ ನಡೆಯುತ್ತಿದೆ ಎಂದು ಅವತ್ತೇ ಹೇಳಿದ್ದೆನಲ್ಲಾ?
ಅದು ಎಂದಿಗೆ ಮುಗಿಯತ್ತೇ ? ಎಂದಿಗೆ ಪ್ರಾಜೆಕ್ಟ್ ನನಗಾಗುತ್ತದೆ
ಅದನ್ನು ನಮ್ಮಪ್ಪನನ್ನು ಕೇಳಬೇಕು
ನೀನೇ ಕೇಳಿ ಹೇಳಬಾರದಾ ಗಗನಾ?
ಒಂದು ಕೆಲಸ ಮಾಡು ಸಂಜಯ್
ಏನು ಹೇಳು ಗಗನಾ
ನೀನೇ ನಮ್ಮಪ್ಪನನ್ನು ವಿಚಾರಿಸಿ ನೋಡು ಏನು ಹೇಳುತ್ತಾರೆ ಕೇಳು
ಅ…..ಅ… ಅದೂ ನಾ……ನಾ….ಃನಾನು ನಿಮ್ಮಪ್ಪನನ್ನು ಕೇಳುವುದಾ?
ಯಾಕೆ ಕೇಳಬಾರದು? ನೀನು ನಾಳೆ ಅವರ ಅಳಿಯನಾಗುವವನು ನಿನಗೆ ಹೇಳೇ ಹೇಳುತ್ತಾರೆ
ಆದರೂ …. ಗಗನಾ ನಿಮ್ಮಪ್ಪನನ್ನು ಕೇಳುವುದಕ್ಕೆ ಯಾಕೋ ಭಯವಾಗುತ್ತದೆ
ಈ ಮಾತಿಗೆ ಗಗನಾ ನಗುತ್ತಾ ವ್ಯವಹಾರದ ವಿಚಾರವನ್ನೇ ಕೇಳಲು ಭಯವಿದ್ದವನಿಗೆ ನಾಳೆ ನಿಮ್ಮ ಮಗಳನ್ನು ಮದುವೆಯಾಗುತ್ತೇನೆಂದು ಹೇಳಲು ಧೈರ್ಯ ಇರುತ್ತದಾ?
ಆಗ ನೀನು ಇರುತ್ತೀಯಲ್ಲಾ
ಈಗಲೂ ನಾನಿಲ್ಲವೇ ? ವ್ಯವಹಾರ ಮಾತಾಡುವುದರಲ್ಲಿ ತಪ್ಪೇನಿದೆ ನನಗೂ ಆ ವಿಚಾರ ಸರಿಯಾಗಿ ಹೇಳಿಲ್ಲ
ನೀನು ಕೇಳಿದರೆ ಒಳ್ಳೆಯದು ಸಂಜಯ್ ಎನ್ನಲು
ಆಗಲಿ ಗಗನಾ ಪ್ರಯತ್ನಿಸುತ್ತೇನೆಂದು ಫೋನ್ ಕಟ್ ಮಾಡುತ್ತಾನೆ
ಮುಂದುವರೆಯುತ್ತದೆ
ಡಾ. ಎನ್ ಮುರಳೀಧರ್
ವಕೀಲರು ಹಾಗೂ ಸಾಹಿತಿ
ನೆಲಮಂಗಲ

.gif)

.gif)


0 Comments