"ಅತೀ ಕಡಿಮೆ ಸಮಯದಲ್ಲಿ* ಭೀಮ ಬೆಳಕು*ಬ್ಲಾಗರ್ 50 ಸಾವಿರ ಓದುಗರನ್ನು ತಲುಪಿದ್ದು. ಈ ದಾಖಲೆಗೆ ಕಾರಣರಾದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು"

 ಇವತ್ತಿನ ಈ ಯುಗ, ಅದರಲ್ಲೂ ತಂತ್ರಜ್ಞಾನ ಯುಗ ತುಂಬಾ ಪ್ರಭಾವ ಶಾಲಿಯಾದ ಮಾಧ್ಯಮ ಅನ್ನೋದು ನಿಮಗೆಲ್ಲ ಗೊತ್ತಿರುವ ವಿಷಯ.ನಾನೇಕೆ ಈ ಭೀಮ ಬೆಳಕು ಬ್ಲಾಗರ್ ನ್ನ ಹುಟ್ಟು ಹಾಕಿದೆ ಅಂದ್ರೆ,ಬುದ್ಧ ಬಸವ, ಅಂಬೇಡ್ಕರ್ ಅವರ ವೈಚಾರಿಕ ವಿಚಾರಗಳನ್ನು ಜನತೆಗೆ ತಲುಪಿಸುವ ಉದ್ದೇಶಕ್ಕಾಗಿ ಈ ಭೀಮ ಬೆಳಕು ಬ್ಲಾಗರನ್ನು  ಹುಟ್ಟು ಹಾಕಿದೆ. ದಿನ ನಿತ್ಯದ ಸುದ್ದಿಯನ್ನು ಮುಟ್ಟಿಸುವ ಕಾತುರದಲ್ಲಿ ನಾನಿದ್ದೆ.ಅಷ್ಟೊಂದು ರೆಸ್ಪಾನ್ಸ್ ಯಾವ ಪತ್ರಿಕೆಯವರು ಕೂಡ ಮಾಡಲಿಲ್ಲ, ಅವರ ಸಂಪರ್ಕ ಮಾಡಿ ಅವರ ಜೊತೆ ಮಾತನಾಡಿದಾಗ ಸರಿಯಾದ ಮಾರ್ಗದರ್ಶನ ಮತ್ತು ಸಲಹೆ ಸಹಕಾರ ನೀಡಲಿಲ್ಲ. ದಿನ ನಿತ್ಯದ ಸುದ್ದಿಯನ್ನು ಪ್ರಸರಿಸುವ ಸಲುವಾಗಿ ಪರದಾಡುತಿದ್ದೆ, ಅಂತಹ ಸಂದರ್ಭದಲ್ಲಿ ನಂಗೆ ಪ್ರಿಂಟ ಮಾಧ್ಯಮಕ್ಕಿಂತ, ಈ ಡಿಜಿಟಲ್ ಮಾಧ್ಯಮ ಅತೀ ಮುಖ್ಯ ಮತ್ತು ಅಷ್ಟೆ ಅವಶ್ಯಕ ಕೂಡ ಎನಿಸಿತು.ಆವಾಗ ನನ್ನ ತಲೆಗೆ ಹೊಳೆದಿದ್ದೆ ಈ* ಭೀಮ ಬೆಳಕು * ಬ್ಲಾಗ.

ಈ ಭೀಮ ಬೆಳಕು ಬ್ಲಾಗ ಅತೀ ಕಿರಿಯರಿಂದ ಹಿಡಿದು ಹಿರಿಯ ತಲೆಮಾರಿನ ವ್ಯಕ್ತಿಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಪ್ರಚಲಿತ ಸುದ್ದಿ, ಕ್ರೀಡೆ,ಯೋಗ,ಮನರಂಜನೆ, ಹಾಸ್ಯ, ಕಥೆ, ಕವನ,ನಾಟಕ,ಲೇಖನ, ಇನ್ನಿತರ ವಿಷಯಗಳನ್ನು ಒಳಗೊಂಡತೆ ವೈಚಾರಿಕತೆ, ಸಂಸ್ಕೃತಿ, ಬಿಂಬಿಸುವ ನಿಟ್ಟಿನಲ್ಲಿ ಭೀಮ ಬೆಳಕು ಬ್ಲಾಗ ತನ್ನ ಕೆಲಸ ಕಾರ್ಯದಲ್ಲಿ ಪ್ರವರ್ಥವಾಗಿದೆ

ಅತೀ ಕಡಿಮೆ ಅವಧಿಯಲ್ಲಿ 50 ಸಾವಿರ ಓದುಗ ವೀಕ್ಷಕರನ್ನು ತಲುಪಿದೆ ಎಂದರೆ ಇದು ನನ್ನೊಬ್ಬನ ಪ್ರಯತ್ನವಲ್ಲ, ನೀವು ನನಗೋಸ್ಕರ ಸಮಯ ಕೊಟ್ಟಿದ್ದೀರಿ, ಅದರ ಜೊತೆಗೆ ಹೆಚ್ಚು ಹೆಚ್ಚು ಜನರಿಗೆ ತಲುಪಿಸುವ ಕಾರ್ಯಕ್ರಮನ್ನು ನೀವ್ ಮಾಡಿದ್ದೀರಿ,ಈ ಋಣ ಬಾರ ನನ್ನ ಮೇಲೆ ತುಂಬಾ ಇದೆ. ನಿಮ್ಮೆಲ್ಲರ ಸಹಾಯ, ಸಹಕಾರ,ಮಾರ್ಗದರ್ಶನ ನನ್ನ ಮೇಲಿರಲಿ.ಸದಾ ನಿಮ್ಮ ನಿರಂತರ ಸೇವೆಯಲ್ಲಿ ನಾ ನಿರತೀನಿ ತಮಗೆಲ್ಲರಿಗೂ ಶತ ಕೋಟಿ ಪ್ರಣಾಮಗಳು 🙏🙏💐💐

ಡಾ. ವಿಲಾಸ್ ಕಾಂಬಳೆ

ಭೀಮ ಬೆಳಕು

ಸಂಪಾದಕರು



Image Description

Post a Comment

1 Comments

  1. ನಮ್ಮ ಗುರುಗಳು ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ ಅವರಿಗೆ ನನ್ನ ಧನ್ಯವದಗಳು

    ReplyDelete