೪೪೦ನೇ.
✍️ಬದುಕುವ ಮಾತು✍️ *ಅಜರಾಮರವಾಗೋಣ*
""""""""""""""""""""""""""""""""""
ನಾವೆಲ್ಲರೂ ಒಂದು ದಿನ ಹುಟ್ಟಿದ್ದೇವೆ. ಮುಂದೆ ಒಂದು ದಿನ ಸಾಯುತ್ತೇವೆ. ಇದು ವಾಸ್ತವ ಮತ್ತೂ ಇದನ್ನು ತಪ್ಪಿಸಲಿಕ್ಕೆ ಯಾರಿಂದ ಸಾಧ್ಯವಿಲ್ಲ, ಸತ್ತಾಗ ನಮ್ಮ ಜೊತೆ ಬರೋದು ಪಾಪ ಮತ್ತೂ ಪುಣ್ಯ. ಅಂದ್ರೆ ಒಳ್ಳೆಯದು ಕೆಟ್ಟದ್ದು. ನಾವು ಬದುಕಿದಾಗ ಸ್ವಾರ್ಥ ಜೀವನ ನಡೆಸುತ್ತಾ, ಮೋಸ ವಂಚನೆ, ದ್ರೋಹ, ದೌರ್ಜನ್ಯ ಮಾಡುತ್ತ ಇತರರನ್ನು ಕೇವಲವಾಗಿ ಕಾಣುತ್ತಾ ಪಾಪದ ಜೀವನ ನಡೆಸುತ್ತೇವೆ. ಇಂತದ್ದನ್ನೆಲ್ಲ ಮಾಡಿ ಸತ್ತಾಗ ನಮ್ಮನ್ನು ಈ ಪ್ರಪಂಚವೇ ಅಳಿಯುತ್ತದೆ ಮರೆತು ಬಿಡುತ್ತದೆ. ಇನ್ನೂ ಯಾವ ಒಂದು ಸಣ್ಣ ಜೀವಿಗೂ ಕೆಟ್ಟದ್ದನ್ನು ಬಯಸದೆ ಎಲ್ಲರನ್ನು ಪ್ರೀತಿಯಿಂದ ಕಾಣುತ್ತ ಒಳ್ಳೆಯ ರೀತಿಯಲ್ಲಿ ಬದುಕುತ್ತಾ ಈ ನಾಡು ನುಡಿ ಸಮಾಜ ಸೇವೆ ಮಾಡುತ್ತ ಈ ಜಗತ್ತು ಮರೆಯದಂತೆ ಪುಣ್ಯದ ಕೆಲಸ ಮಾಡುತ್ತೇವೆ. ಆದ್ದರಿಂದ ಪಾಪದ ಕೆಲಸಗಳಿಂದ ದೂರವಿದ್ದು ಪುಣ್ಯದ ಕೆಲಸ ಮಾಡುತ್ತ ಸಾಗೋಣ. ನಾಡು ನುಡಿ ನೆನಪಿನಲ್ಲಿ ಇಟ್ಟುಕೊಳ್ಳುವಂತ ಕೆಲಸ ಮಾಡುತ್ತ ಸಾಗೋಣ.
*************
ಗಣಪತಿ ಗೋ ಚಲವಾದಿ( ಗಗೋಚ)
ಬಿಎಂಟಿಸಿ ನಿರ್ವಾಹಕರು
ಕಸಾಪ ಮಯೂರವರ್ಮ ಸಾಹಿತ್ಯ
ಪ್ರಶಸ್ತಿ ಪುರಸ್ಕೃತರು
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments