*ನಿಲ್ಲಬೇಕು ಯುದ್ಧ*
ಮೈತ್ರಿಯ ಕೈ ಮುಂದೆ ಮಾಡಿ,
ದಯೆಯನ್ನು ತೋರಿರಿ.
ಕ್ರೋಧ ನಿಯಂತ್ರಿಸಿ,
ನಿಲ್ಲಿಸಬೇಕಾಗಿದೆ ಯುದ್ಧ.
ಪ್ರೇಮ ಶಾಂತಿ ಪಸರಿಸಿ ನೀವಾಗಿರಿ ಕರುಣೆಯ ಸಾಗರ.
ಮಾನವತೆಯಗಾಗಿ ಸಾಕಾಗಿ ಹೋಗಿದೆ ಯುದ್ಧ, ಜಗಕೆಲ್ಲ ಬೇಕಾಗಿದೆ ಬುದ್ಧ.
ರಕ್ತಪಾತ ಜೀವಹಾನಿ, ಹೇಗೆ ನಡೆಯುತ್ತಲಿದೆ ನೋಡಿ ಬಾಂಬ್ ದಾಳಿಯು,
ಸತ್ತು ಹೋದಾರೂ ಎಲ್ಲ ಮರಿ ಮಕ್ಕಳು,
ಸಿದ್ದಗೊಳಿಸಬೇಕಾಗಿದೆ ಒಡಂಬಡಿಕೆಯು ಪಂಚಶೀಲದ್ದು,
ಗೈಯಬೇಕಿದೆ ಸಮತೆಯು,
ನಿಷ್ಪಾಪದ ಜೀವಗಳ ಭವಿಷ್ಯಕ್ಕಾದರೂ ನಿಲ್ಲಿಸಬೇಕಾಗಿದೆ ಈ ಯುದ್ಧವು.
ಇರಬಾರದು ಅಪರಾಧ,ವಾದದಿಂದ ಪ್ರತಿವಾದ, ಇಮ್ಮಡಿಸುವುದು ದ್ವೇಷದಿಂದ ದ್ವೇಷವು,
ಗರ್ವದಿಂದ ಬೆಳೆಯುವುದು ಈ ರಣಸಂಗ್ರಾಮವು.
ಸಾಗಬೇಕು ಬೇಡುತ ಕ್ಷಮೆಯನು, ವಿಜಯದ ಪತಾಕೆಯನು,
ಎಲ್ಲರೂ ಆಗಿರಿ ಬುದ್ಧ,
ಇದೀಗ ನಿಲ್ಲಿಸಿ ಈ ಯುದ್ಧ. ಇದೀಗ ನಿಲ್ಲಿಸಿ ಈ ಯುದ್ಧ.
✍️✍️✍️...
ಅರ್ಜುನ್ ನಿಡಗುಂದೆ.
ಸದಲಗಾ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments