ನಮ್ರತಾ ಕಲ್ಲೋಳಿಕರ ಅವರಿಗೆ: ಡಾಕ್ಟರೇಟ್ ಪದವಿ ಪ್ರಧಾನ


ಬೆಳಗಾವಿ :ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ, ಹೊರವಲಯದ ಯಬರಟ್ಟಿ ಗ್ರಾಮದ ನಿವಾಸಿಗಳು. ಪ್ರಸ್ತುತ ಉತ್ತರ ಕರ್ನಾಟಕದ ಶಿಕ್ಷಣದ ಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಧಾರವಾಡದ ಎಸ್ ಡಿ ಎಮ್ ಸಂಸ್ಥೆಯ ಜೆ ಎಸ್ ಎಸ್ ಪದವಿ ಮಹಾವಿದ್ಯಾಲಯದಲ್ಲಿ ಗಣಿತಶಾಸ್ತ್ರ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ನಮ್ರತಾ ಕಲ್ಲೋಳಿಕರ್ ಅವರು ಕರ್ನಾಟಕ ವಿಶ್ವವಿದ್ಯಾಲಯದ ಸಂಶೋಧನ ವಿದ್ಯಾರ್ಥಿಯಾಗಿ Mathematical Modelling of Peristaltic Flow in Biofluid Dynamics ಎಂಬ ಸಂಶೋಧನ ಪ್ರಬಂಧ ಮಂಡಿಸಿ ಪ್ರಸಕ್ತ ಸಾಲಿನಲ್ಲಿ ಇತ್ತೀಚಿಗೆ (ಪಿ. ಎಚ್. ಡಿ )ಡಾಕ್ಟ್ರೇರೇಟ್ ಪದವಿ ಪಡೆದರು.ಕರ್ನಾಟಕ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಪಕರು,ಮಾರ್ಗದರ್ಶಕರಾದ ಡಾ. (ಶ್ರೀಮತಿ )ಆಶಾ ಎಸ್. ಕೆ, ಅವರು :ನಮ್ರತಾ ಕಲ್ಲೋಳಿಕರ್ ಅವರಿಗೆ ಮಾರ್ಗದರ್ಶನ ಮಾಡಿದ್ದರು.

ವರದಿ :ಡಾ. ವಿಲಾಸ್ ಕಾಂಬಳೆ

ಹಾರೂಗೇರಿ 

Image Description

Post a Comment

0 Comments