ರಾಯಬಾಗ :ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ನಿಮಿತ್ಯವಾಗಿ ಶಾಹು ಪುನರ್ ಪ್ರತಿಷ್ಠಾನ ವೇದಿಕೆ ಮತ್ತು ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಕರ್ನಾಟಕ ಘನ ಸರಕಾರ ಘೋಷಿಸಿರುವಂತೆ ಸಂವಿಧಾನ ಪ್ರಸ್ತಾವನೆಯನ್ನು ಓದುವ ಮೂಲಕ ಮತ್ತು ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ರಾಜರ್ಷಿ ಛತ್ರಪತಿ ಶಾಹು ಮಹಾರಾಜರ ಎರಡನೇ ರಾಜಧಾನಿಯಾಗಿದ್ದ ರಾಯಬಾಗ ಪಟ್ಟಣದಲ್ಲಿ ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ವಿಠ್ಠಲ ಚಂದರಗಿ ಮಾನ್ಯ ಸಹಾಯಕ ಜಂಟಿ ನಿರ್ದೇಶಕರು( ಗ್ರೆಡ್ I ) ಸಮಾಜ ಕಲ್ಯಾಣ ಇಲಾಖೆ ರಾಯಬಾಗ, ಕಾರ್ಯಕ್ರಮದ ಅಧ್ಯಕ್ಷರಾಗಿ ಉಮೇಶ ಶಿಂಗೆ ಛತ್ರಪತಿ ಶಾಹು ಪುನರ್ ಪ್ರತಿಷ್ಠಾನ ವೇದಿಕೆಯ ಸಂಸ್ಥಾಪಕ ಅದ್ಯಕ್ಷರು ರಾಯಬಾಗ, ಮುಖ್ಯ ಅತಿಥಿಗಳಾಗಿ ಆಗಮಿಸಿ ಉಪನ್ಯಾಸ ಮಾಡಿದ ಸದಾಶಿವ ಕಾಂಬಳೆ ಉಪನ್ಯಾಸಕರು, ಯುವ ಚಿಂತಕರು ಹಾಗೂ ಇನ್ನೊರ್ವ ಅತಿಥಿಯಾಗಿ ವಿವೇಕ ಕರ್ಪೆ ವಿದ್ಯಾರ್ಥಿ ಮುಖಂಡರು ಬೆಳಗಾವಿ ಹಾಗೂ ನಿಲಯ ಪಾಲಕರಾದ ಶಂಕರ ನವಣಿ ಮತ್ತು ಸಂಘಟಕರಾದ ಶರಣ ಕಾಂಬಳೆ ಸದಾಶಿವ ಕಾಂಬಳೆ ಹಾಗೂ ವಿದ್ಯಾರ್ಥಿಗಳು ಮತ್ತು ಇನ್ನಿತರರು ಉಪಸ್ಥಿತರಿದ್ದರು.
ವರದಿ :ಡಾ. ವಿಲಾಸ್ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments