*ಬುದ್ಧತ್ವದ ವೈಭವ ನೋಡಿ ಬಾ*... !!
➖➖➖➖➖➖➖➖➖➖
ಹೇ ಭಾರತ ದೇಶದಲ್ಲಿಯ
ಸುಜನ ನಾಗರಿಕಾ
ಭಾರತದ ಹೊರಗೆ
ಎಂದಾದರೂ ಹೋಗಿ,
ಬುದ್ಧತ್ವದ ವೈಭವ ನೋಡಿ ಬಾ.
ಗಗನ ಚುಂಬಿಸುವ
ಆ ಬುದ್ಧನ
ಸ್ಮೃತಿಗೆ ಒಂದೆರಡು ಹೂ ಹಾಕಿ ಬಾ.
ಭಾರತದಲ್ಲಿಯ ಬುದ್ಧ,
ಜಗದಲ್ಲಿ ಎಷ್ಟೊಂದು ದೂರದಲ್ಲಿ ವಿಸ್ತರಣೆಯಾಗಿದ್ದಾನೆ ಎಂಬುದನ್ನು ಒಮ್ಮೆಯಾದರೂ ನೋಡಿ ಬಾ...
ಕರ್ಮಕಾಂಡ ಇಲ್ಲಿ ಇಲ್ಲ,
ಇಲ್ಲ ಚಮತ್ಕಾರ,
ಬುದ್ಧರ ತತ್ವಜ್ಞಾನ,
ಅರ್ಥಾಥ ಅವಿನಾಶಿ ವಿಜ್ಞಾನ
ಎಂದಾದರೂ ಭಾರತದ ಹೊರಗೆ ಹೋದರೆ ನೀ,
ವಿಜ್ಞಾನವಾದಿ ದೇಶ ನೋಡಿ ಬಾ.
ಸದಾಚಾರ ,ಕರುಣೆ ,ಪ್ರಜ್ಞೆ,
ಮತ್ತೆ ಜೀವನದ ಎಲ್ಲವೂ,
ಧಮ್ಮಪದ ಶೋಧಿಸಿ ತೆಗೆದುಕೋ,
ಹೀಗೆ ಜೀವನದ ಉಪದೇಶ
ಎಲ್ಲೂ ದೊರೆಯವೂ,
ಎಲ್ಲ ಧರ್ಮ ಗ್ರಂಥ ಓದಿ ಬಾ.
ಎಂದಾದರೂ ಭಾರತದ ಹೊರಗೆ ಹೋದರೆ,
ಓರ್ವ ವಿದ್ವಾನನನ್ನು ನೋಡಿ ಬಾ..
ಇನ್ನೂ,
ಓದುತ್ತಿರುತ್ತಾರೆ ಅರ್ಥಶಾಸ್ತ್ರ,
ಸಮಾಜಶಾಸ್ತ್ರ ,ಮಾನವ ಶಾಸ್ತ್ರ, ರಾಜ್ಯಶಾಸ್ತ್ರ,
ಹಾಗೆ ಅವರ ವಿವೇಕದ ಜ್ಞಾನವನು
ಇಂತಹ ಬಾಬಾಸಾಹೇಬರನ್ನು ನೋಡಿ ಬಾ
ನೂರು ವಿದ್ವಾನರಲ್ಲಿ
ಮೊದಲನೇ ಹೆಸರು ಬರುವ
ಜ್ಞಾನಿಗಳ ರಾಜನನ್ನು ನೋಡಿ ಬಾ..
ಹೇ ಭಾರತ ದೇಶದಲ್ಲಿಯ
ಸುಜನ ನಾಗರಿಕಾ
ಭಾರತದ ಹೊರಗೆ
ಎಂದಾದರೂ ಹೋಗಿ,
ಬುದ್ಧತ್ವದ ವೈಭವ ನೋಡಿ ಬಾ.
🙏🏿🙏🏿🙏🏿🙏🏿🙏🏿🙏🏿🙏🏿🙏🏿
✍️✍️✍️..
ಅರ್ಜುನ್ ನಿಡಗುಂದೆ
ಸದಲಗಾ.
〰️〰️〰️〰️〰️〰️〰️〰️

.gif)

.gif)


0 Comments