ಗಗನ ಕುಸುಮ (ಕಾದಂಬರಿ) ಸಂಚಿಕೆ-೬೬
ಹಿಂದಿನ ಸಂಚಿಕೆಯಲ್ಲಿ
ವಿಷದ ಬಾಟಲ್ ಮೇಲೆ ಮೂರನೇ ವ್ಯಕ್ತಿಯ ಬೆರಳುಗಳ ಗುರುತು ಇರುವುದಾಗಿ ಬೆರಳಚ್ಚು ರಿಪೋರ್ಟ್ ಬಂದಿದ್ದರಿಂದ ಇನ್ಸ್ ಪೆಕ್ಟರ್ ರವರು ಠಾಣೆಗೆ ಬರುವಂಕೆ ರಮೇಶ ದೇಸಾಯಿಯವರಿಗೆ ಹೇಳುತ್ತಾರೆ
ಕಥೆಯನ್ನು ಮುಂದುವರೆಸುತ್ತಾ
ರಮೇಶ ದೇಸಾಯಿಯು ಇನ್ಸ್ ಪೆಕ್ಟರ್ ಗೆ ಸುಮ್ಮ ಸುಮ್ಮನೆ ನನ್ನ ಮೇಲೆ ಅಪವಾದ ಹೊರೆಸಿದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ಹೇಳಿದ ನಂತರ
ಇನ್ಸ್ ಪೆಕ್ಟರ್ ರವರು ಇವನನ್ನು ಹೇಗೆ ಲಾಕ್ ಮಾಡಬೇಕೆಂದು ಯೋಚಿಸುತ್ತಿರುವಾಗ
ದಫೇದಾರರು ಬಂದು ಸಾರ್ ರಮೇಶ ದೇಸಾಯಿಗೆ ಫೋನ್ ಮಾಡಿದ್ರಾ ಎಂದು ಪ್ರಶ್ನಿಸಲು
ಇನ್ಸ್ ಪೆಕ್ಟರ್ ಸಂಭಾಷಣೆಯ ವಿವರವನ್ನು ಹೇಳಿದ್ದಕ್ಕೆ
ಹೌದು ಸಾರ್ ಅವನು ಎಲ್ಲದರಲ್ಲಿಯೂ ಕಾನೂನಿನಿಂದ ತಪ್ಪಿಸಿಕೊಳ್ಳುತ್ತಿದ್ದಾನೆ ಏನಾದರೂ ಮಾಡಿ ಅವನಿಗೆ ಕಾನೂನಿನ ಕುಣಿಕೆ ಬಿಗಿಗೊಳಿಸಬೇಕು ಎನ್ನುತ್ತಾರೆ
ನೀವು ಅದನ್ನೇ ಹೇಳುತ್ತೀರಿ ಆದರೆ ಬೆಕ್ಕಿಗೆ ಗಂಟೆ ಕಟ್ಟುವವರಾರು ಎನ್ನುವಂತಾಗಿದೆ ಅವನ ಬೆರಳಚ್ಚು ಹೇಗೆ ಪಡೆಯಬೇಕೆಂದು ಗೊತ್ತಾಗುತ್ತಿಲ್ಲ ಎನ್ನುತ್ತಿರುವಂತೆ ಇನ್ಸ್ ಪೆಕ್ಟರ್ ರವರಿಗೆ ಸೂಪರಿಂಟೆಂಡೆಂಟ್ ರವರಿಂದ ಫೋನ್ ಬಂದಿರುವುದನ್ನು ನೋಡಿ ನಮಸ್ಕಾರ ಸಾರ್ ಎನ್ನಲು
ರೀ ಇನ್ಸ್ ಪೆಕ್ಟರ್ ನಾಳೆ ಟೌನ್ ಹಾಲ್ ನಲ್ಲಿ ಇಂಡಸ್ಟ್ರಿಯಲಿಸ್ಟ್ ಸಭೆ ಇದೆ ಅದಕ್ಕೆ ವಿವಿಐಪಿಗಳು ಬರುವವರಿದ್ದಾರೆ ಸೆಕ್ಯೂರಿಟಿಯನ್ನು ಏರ್ಪಡಿಸಬೇಕು ನಾನೂ ಬರುತ್ತೇನೆ ನೀವೂ ಅಲ್ಲಿಗೆ ಬನ್ನಿರಿ ಎನ್ನಲು
ಯಸ್ ಐ ಆಮ್ ರಡಿ ಸಾರ್ ಎಂದು ಹೇಳಿ ದಫೇದಾರ್ ಗೆ ತಿಳಿಸಿ ನಾಳೆ ಬೆಳಿಗ್ಗೆ ಏಳು ಗಂಟೆಯಿಂದ ನಿಮ್ಮ ಜೊತೆ ಸಿಬ್ಬಂದಿಯವರೊಡನೆ ಅಲ್ಲಿಗೆ ಹೋಗಿರಿ ಅಲ್ಲಿಗೆ ಸೆಂಟ್ರಲ್ ವಿಭಾಗದ ಇನ್ಸ್ ಪೆಕ್ಟರ್ ಬಂದಿರುತ್ತಾರೆ ನಾನು ಸ್ಟೇಷನ್ ಗೆ ವಿಸಿಟ್ ಮಾಡಿ ಬರುತ್ತೇನೆಂದು ಹೇಳುತ್ತಾರೆ
ಮಾರನೇ ದಿನ ಏಳು ಗಂಟೆಗೆ ದಫೇದಾರ್ ರವರು ಇತರೆ ಸಿಬ್ಬಂದಿಗಳೊಂದಿಗೆ ಟೌನ್ ಹಾಲ್ ಗೆ ಬಂದಿದ್ದು
ಇವರು ಬಂದ ನಂತರ ಸೆಂಟ್ರಲ್ ವಿಭಾಗದ ಇನ್ಸ್ ಪೆಕ್ಟರ್ ಜೊತೆ ಸೂಪರಿಂಟೆಂಡೆಂಟ್ ಬಂದಿರುತ್ತಾರೆ
ಹತ್ತು ಗಂಟೆಯಾಗುತ್ತಿದ್ದಂತೆ ಇಂಡಸ್ಟ್ರಿಯಲಿಸ್ಟ್ ಗಳು
ಒಬ್ಬೊಬ್ಬರಾಗಿ ಬರುತ್ತಿದ್ದು ಅಲ್ಲಿದ್ದವರು ಬಂದವರನ್ನು ಖಾಲಿ ಇರುವ ಸೀಟುಗಳಲ್ಲಿ ಕೂಡಿಸುತ್ತಿದ್ದು ಸ್ವಲ್ಪ ಸಮಯದ ನಂತರ
ಇನ್ಸ್ ಪೆಕ್ಟರ್ ಬಂದು ಸೂಪರಿಟೆಂಡೆಂಟ್ ರವರಿಗೆ ಸೆಲ್ಯೂಟ್ ಹೊಡೆದು ಮಾತನಾಡುತ್ತಿರುವಾಗ
ರಮೇಶದೇಸಾಯಿ ಬರುತ್ತಿರುವುದನ್ನು ದೂರದಿಂದಲೇ ದೆಪೇದಾರರು ನೋಡಿ ತಕ್ಷಣ ಇನ್ಸ್ ಪೆಕ್ಟರ್ ಗೆ ತಿಳಿಸಿದಾಗ. ಅವನು ಇಲ್ಲೂ ಬರುತ್ತಿದ್ದಾನಾ ಎನ್ನುತ್ತಾ ದೆಫೇದಾರ್ ಕಿವಿಯಲ್ಲಿ ಏನೋ ಹೇಳಿ ಅವನ ಬಳಿಯೇ ಇದ್ದು ಅವನಿಗೆ ಅನುಮಾನ ಬರದಂತೆ ನಡೆದುಕೊಂಡು ನಾನು ಹೇಳಿದಂತೆ ಮಾಡಿ ಎನ್ನಲು
ಓ ಕೆ ಸಾರ್ ಎಂದು ಹೇಳಿ ಟೌನ್ ಹಾಲ್ ಒಳಗೆ ಹೋಗುತ್ತಾರೆ
ರಮೇಶ ದೇಸಾಯಿ ಹತ್ತಿರ ಬಂದು ಸೂಪರಿಟೆಂಡೆಂಟ್ ರವರಿಗೆ ನಮಸ್ಕಾರ ಸಾರ್ ಎಂದು ಹಸ್ತಲಾಘವ ಮಾಡಿದಾಗ
ಹೇಗಿದ್ದೀರಿ ದೇಸಾಯ್ ಎನ್ನಲು
ಆಮ್ ಫೈನ್ ಎಂದು ಹೇಳಿ ಇನ್ಸ್ ಪೆಕ್ಟರ್ ರವರನ್ನು ನೋಡಿ ಓ ಇನ್ಸ್ ಪೆಕ್ಟರ್ ನಮಸ್ಕಾರ ಎನ್ನಲು
ಇನ್ಸ್ ಪೆಕ್ಟರ್ ಪ್ರತಿ ನಮಸ್ಕಾರ ಹೇಳುವ ವೇಳೆಗೆ ಅಲ್ಲಿ ಬಂದಿದ್ದ ಇತರೆ ಇಂಡಸ್ಟ್ರಿಯಲಿಸ್ಟ್ ಗಳು ರಮೇಶ ದೇಸಾಯಿಯನ್ನು ನೋಡಿ ಮಾತನಾಡಿಸಲು ಬಂದಿದ್ದು ರಮೇಶದೇಸಾಯಿಯು ಅವರೊಡನೆ ಮಾತನಾಡುತ್ತಾ ಟೌನ್ ಹಾಲ್ ಒಳಗೆ ಹೋಗಿ ಸ್ಟೇಜ್ ಮೇಲೆ ಮುಖ್ಯ ಅತಿಥಿಗೆ ಕಾದಿರಿಸಿದ್ದ ಸೀಟಿನಲ್ಲಿ ಕುಳಿತುಕೊಂಡಾಗ
ದಫೇದಾರರು ಅಯ್ಯೋ ಈಗೇನು ಮಾಡಲಿ ಇನ್ಸ್ ಪೆಕ್ಟರ್ ಹೇಳಿದಂತೆ ಮಾಡಲು ನಾನು ಅಥವಾ ನಮ್ಮ ಸಿಬ್ಬಂದಿ ಅವನ ಹಿಂದೆ ಇರಬೇಕು ಸ್ಟೇಜ್ ಮೇಲೆ ಹೋಗಲು ಸಾಧ್ಯವಾಗುವುದಿಲ್ಲವಲ್ಲಾ ಏನು ಮಾಡುವುದೆಂದು ಯೋಚಿಸುತ್ತಿರುವಾಗ
ಇನ್ಸ್ ಪೆಕ್ಟರ್ ಬಂದು ಏನು ಯೋಚಿಸುತ್ತಿದ್ದೀರಿ ಎನ್ನಲು
ಅಲ್ಲಿ ನೋಡಿ ಸಾರ್ ಅವನೇ ಚೀಫ್ ಗೆಸ್ಟ್ ಆಗಿದ್ದಾನೆ ನಾವು ಅವನ ಹಿಂದೆ ಹೋಗಲು ಆಗುವುದಿಲ್ಲ ಈಗೇನು ಮಾಡೋಣ?
ಓ ಹೌದಲ್ಲಾ ಎನ್ನುತ್ತಾ ಸೀದಾ ಸೂಪರಿಂಟೆಂಡೆಂಟ್ ಬಳಿ ಹೋಗಿ ವಿಷಯ ತಿಳಿಸಿದಾಗ
ಯಾರಾದರೂ ಒಬ್ಬರು ನನ್ನ ಜೊತೆ ಇರಲು ಹೇಳಿ ಮುಂದೆ ಹೋದಾಗ
ಒಬ್ಬರು ಸಿಬ್ಬಂದಿ ಅವರನ್ನು ಹಿಂಬಾಲಿಸುತ್ತಾ ಹೋಗಿ ಸೂಪರಿಟೆಂಡೆಂಟ್ ರವರು ಸ್ಟೇಜ್ ಮೇಲೆ ಕುಳಿತ ನಂತರ ಸಿಬ್ಬಂದಿಯೂ ಅವರ ಹಿಂದೆ ನಿಲ್ಲುತ್ತಾರೆ
ಕಾರ್ಯಕ್ರಮ ಮುಗಿದು ಎಲ್ಲರೂ ಊಟಕ್ಕೆ ಹೋದಾಗ
ಸೂಪರಿಂಟೆಂಡೆಂಟ್ ರವರು ರಮೇಶ ದೇಸಾಯಿಯ ಪಕ್ಕದಲ್ಲೇ ಊಟಕ್ಕೆ ಕುಳಿತು ಸಿಬ್ಬಂದಿಗೂ ಪಕ್ಕದಲ್ಲಿ ಕುಳಿತುಕೊಳ್ಳಲು ಹೇಳುತ್ತಾರೆ
ಊಟದ ನಂತರ ರಮೇಶ ದೇಸಾಯಿ ನೀರಿನ ಬಾಟಲಿನಿಂದ ನೀರು ಕುಡಿದು ಅಲ್ಲೇ ಇಟ್ಟು ಕೈ ತೊಳೆಯಲು ಹೋದಾಗ
ಸೂಪರಿಂಟೆಂಡೆಂಟ್ ರವರು ತಮ್ಮ ಕರ್ಚೀಪಿನಿಂದ ರಮೇಶ ದೇಸಾಯಿ ನೀರು ಕುಡಿದ ಬಾಟಲನ್ನು ತೆಗೆದುಕೊಂಡು ಸಿಬ್ಬಂದಿಗೆ ನೀಡಿ ಬೇಗ ಹೋಗಿ ಎಂದ ತಕ್ಷಣ
ಸಿಬ್ಬಂದಿಯು ಕರ್ಚೀಪಿನ ಸಮೇತ ಬಾಟಲನ್ನು ತೆಗೆದುಕೊಂಡು ಹೋಗಿ ವಾಹನದಲ್ಲಿಡುತ್ತಾರೆ
ಕಾರ್ಯಕ್ರಮ ಮುಗಿದ ಮೇಲೆ ವಾಹನ ಸೀದಾ ಠಾಣೆಯ ಮುಂದೆ ನಿಲ್ಲಲು
ದೆಫೇದಾರರು ಜೋಪಾನವಾಗಿ ಬಾಟಲನ್ನು ತೆಗೆದುಕೊಂಡು ಹೋಗಿ ಇನ್ಸ್ ಪೆಕ್ಟರ್ ಸಲಹೆಯಂತೆ ಲ್ಯಾಬೋರೇಟರಿಗೆ ಕೊಟ್ಟು ಬರುತ್ತಾರೆ.
ಎರಡು ದಿನಗಳ ವಂತರ ಲ್ಯಾಬ್ ನಿಂದ ರಮೇಶ ದೇಸಾಯಿಯ ಬೆರಳಚ್ಚಿನ ಫಲಿತಾಂಶ ಬಂದಿದ್ದು ಅದರಲ್ಲಿ ವಿಷದ ಬಾಟಲ್ ಮೇಲಿನ ಬೆರಳಚ್ಚು ಗುರ್ತು ರಮೇಶ ದೇಸಾಯಿ ಬೆರಳಚ್ಚಿಗೆ ತಾಳೆ ಇಲ್ಲವೆಂದಿರುವುದನ್ನು ಇನ್ಸ್ ಪೆಕ್ಟರ್ ನೋಡಿ ಆ ರೌಡಿ ಹೆಂಡತಿ ತುಂಬಾ ಚಾಲಾಕಿದ್ದಾಳೆ. ರಮೇಶ ದೇಸಾಯಿಯ ಹೆಸರು ಹೇಳಿದರೆ ಅವರನ್ನು ವಿಚಾರಿಸುವುದಿಲ್ಲವೆಂದು ನನ್ನ ಗಂಡ ಸತ್ತ ದಿನ ರಮೇಶ ದೇಸಾಯಿ ಬಂದಿದ್ದನೆಂದು ಸುಳ್ಳು ಹೇಳಿದ್ದಾಳೆಂದು ಕೋಪಬಂದು
ರೀ ದೆಫೇದಾರರೇ ಸತ್ತು ಹೋದ ರೌಡಿ ಮನೆಗೆ ಹೋಗೋಣ ಅವನ ಹೆಂಡತಿ ಸುಳ್ಳು ಬೊಗಳಿದ್ದಾಳೆ. ಸರಿಯಾದ ಮಾಹಿತಿ ತಿಳಿದುಕೊಂಡು ಬರೋಣವೆಂದು ಹೇಳಿ ವಾಹನದಲ್ಲಿ ಕುಳಿತಾಗ
ದೆಫೇದಾರರು ಕೆಲವು ಸಿಬ್ಬಂದಿಯ ಜೊತೆಗೆ ಮಹಿಳಾ ಸಿಬ್ಬಂದಿ ಕುಳಿತ ನಂತರ ವಾಹನವು ಸೀದಾ ರೌಡಿಯ ಮನೆಯ ಮುಂದೆ ನಿಂತ ತಕ್ಷಣ
ಇನ್ಸ್ ಪೆಕ್ಟರ್ ರವರು ಇಳಿದು ಬಾಗಿಲನ್ನು ಲಾಠಿಯಿಂದ ಬಡಿದಾಗ
ಗುರಿರಾಜನ ಹೆಂಡತಿ ಬಂದು ಬಾಗಿಲು ತೆಗೆದು ಇನ್ಸ್ ಪೆಕ್ಚರ್ ರವರನ್ನು ನೋಡಿ ಭಯಗೊಂಡರೂ ತೋರಿಸಿಕೊಳ್ಳದೆ ಏನ್ ಸಾರ್ ದೇಸಾಯಿಯೇ ನನ್ನ ಗಂಡನನ್ನು ಕೊಲೆ ಮಾಡಿದ್ದು ಖಾತ್ರಿ ಆಯ್ತಾ ಸಾರ್
ಹ್ಞೂಂ ಆಯ್ತು ಆದರೆ ಇನ್ನೊಬ್ಬನು ತಪ್ಪಿಸಿಕೊಂಡಿದ್ದಾನೆ ಅವನನ್ನು ಹುಡುಕಿಕೊಂಡು ಬಂದಿದ್ದೇವೆ
ಯಾರ್ ಸಾರ್ ಅವನು?
ನಿನ್ನ ಗಂಡ ಸತ್ತ ದಿನ ನಿನ್ನ ಮನೆಗೆ ಬೇರೆ ಯಾರು ಬಂದಿದ್ದರೆಂದು ನಿಜ ಹೇಳು ಇಲ್ಲದಿದ್ದರೆ ಗೊತ್ತಲ್ಲಾ?
ಸಾರ್ ಅವರನ್ನು ಬಿಟ್ಟು ಬೇರೆ ಯಾರೂ ಬಂದಿರಲಿಲ್ಲಾ ಸಾರ್ ಎಂದು ಪುನಃ ಅದನ್ನೇ ಹೇಳಿದಾಗ
ಪಕ್ಕದಲ್ಲಿದ್ದ ಮಹಿಳಾ ಸಿಬ್ಬಂದಿ ಅವಳ ಜುಟ್ಟು ಹಿಡಿದು ಸುಳ್ಳು ಬೊಗಳುತ್ತೀಯಾ ಎಂದಾಗ
ಇಲ್ಲಾ ಮೇಡಮ್ ನಾನು ನಿಜ ಹೇಳುತ್ತಿದ್ದೇನೆ ಎನ್ನಲು
ನಿಜ ಹೇಳುತ್ತೀಯೋ ಇಲ್ಲ ನಮ್ಮ ಟ್ರೀಟ್ ಮೆಂಟ್ ಕೊಡಬೇಕೋ ಎಂದು ಮಹಿಳಾ ಸಿಬ್ಬಂದಿ ಕಪಾಳಕ್ಕೆ ಹೊಡೆದಾಗ
ಹೊಡಯಬೇಡಿರಿ ಮೇಡಮ್ ಎಲ್ಲಾ ಹೇಳುತ್ತೇನೆ ಎನ್ನುತ್ತಾ ಅವತ್ತು ನನ್ನ ಗಂಡನ ಸ್ನೇಹಿತ ಮರಿಯಪ್ಪ ಎಂಬುವವನು ಬಂದಿದ್ದ.
ಅವನೇಕೆ ನಿನ್ನ ಗಂಡನಿಗೆ ವಿಷ ಕುಡಿಸಿ ಸಾಯಿಸಿದ?
ಅದೂ ಅದೂ ಹ್ಞೂಂ ಬೊಗಳು ಎನ್ನಲು
ಏನಿಲ್ಲಾ ಸಾರ್ ಅವನು ನನ್ನ ಗಂಡನ ಸ್ನೇಹಿತ ಅಷ್ಟೇಯಾ
ಬರೀ ಸ್ನೇಹಿತಾನಾ ಅಥವಾ ನಿನಗೂ ಅವನಿಗೂ ಸಂಬಂಧ ಇದೆಯೋ?
ಏನಿಲ್ಲಾ ಸಾರ್ ಆ ದಿನ ಅವನು ನಮ್ಮ ಮನೆಗೆ ಬಂದಾಗ ನನ್ನ ಗಂಡ ಕುಡಿದು ಬಂದು ನನಗೆ ಹೊಡೆಯುತ್ತಿದ್ದ ಅದನ್ನು ನೋಡಿ ನನಗೆ ಹೊಡೆಯುವುದನ್ನು ಬಿಡಿಸಿದಾಗ ನೀನ್ಯಾರೋ ನನ್ನ ಮನೆಗೆ ಬಂದು ನನ್ನ ಹೆಂಡತಿ ಪರವಾಗಿ ಮಾತನಾಡುತ್ತಿದ್ದೀಯಲ್ಲಾ ಎಂದು ನನ್ನ ಗಂಡ ಅವನಿಗೆ ಹೊಡೆದ
ನನ್ನ ಗಂಡನ ಸ್ನೇಹಿತ ಏಟು ತಿಂದರೂ ಕೋಪ ಮಾಡಿಕೊಳ್ಳದೆ ಹೊರಗೆ ಹೋಗಿ ಒಂದು ಬಾಟಲ್ ಹೆಂಡ ತಂದು ನನ್ನ ಗಂಡನಿಗೆ ಕುಡಿಯಲು ಕೊಟ್ಟ ಕುಡಿದು ಮಲಗಿದ ನನ್ನ ಗಂಡ ಬೆಳಿಗ್ಗೆ ಮೇಲೇಳಲೇ ಇಲ್ಲಾ ಸಾರ್ ಅವನು ಹೆಂಡಕ್ಕೆ ವಿಷ ಬೆರೆಸಿ ಕೊಟ್ಟಿದ್ದು ನನಗೆ ಗೊತ್ತಿಲ್ಲಾ ಸಾರ್ ಎನ್ನಲು
ಎಲ್ಲಿದ್ದಾನೆ ಅವನು ಎನ್ನುವ ವೇಳೆಗೆ
ಮರಿಯಪ್ಪನೇ ಇವಳ ಮನೆಯ ಹತ್ತಿರ ಬಂದು ಇನ್ಸ್ ಪೆಕ್ಟರ್ ಇರುವುದನ್ನು ನೋಡಿ ಓಡಿ ಹೋಗಲು ಯತ್ನಿಸಿದಾಗ
ಇಬ್ಬರು ಸಿಬ್ಬಂದಿಗಳು ಅಟ್ಟಿಸಿಕೊಂಡು ಹೋಗಿ ಹಿಡಿದು ತರುತ್ತಾರೆ
ಏಕೋ ಗುರಿರಾಜನಿಗೆ ವಿಷ ಹಾಕಿ ಸಾಯಿಸಿದೆ ಎಂದು ಇನ್ಸ್ ಪೆಕ್ಟರ್ ಗದರಿದಾಗ
ಸಾರ್ ನಾನು ಏನೂ ಮಾಡಿಲ್ಲಾ ಸಾರ್ ಎನ್ನುತ್ತಾನೆ
ಬದ್ಮಾಶ್ ಸುಳ್ಳು ಬೊಗಳುತ್ತೀಯಾ ಎನ್ನುತ್ತಾ ಲಾಠಿಯಿಂದ ಕಾಲಿಗೆ ಹೊಡೆದಾಗ
ಸಾರ್ ಸಾರ್ ಹೇಳ್ತೇನೆ ಹೊಡಯಬೇಡ್ರೀ ಸಾರ್ ಎಂದು ಅಂಗಲಾಚುತ್ತಾನೆ
ಬೇಗ ಬೊಗಳು ಎಂದು ಪುನಃ ಲಾಠಿಯಿಂದ ಹೊಡೆಯಲು ಹೋದಾಗ
ಸಾರ್ ಇವಳ ಗಂಡ ತನಗೆ ವಿಪರೀತ ಹೊಡೆಯುತ್ತಾನೆ ಅವನಿಗೆ ಮುಕ್ತಿ ಕಾಣಿಸಬೇಕೆಂದು ಹೇಳಿದ್ಲು
ಅದಕ್ಕೆ ವಿಷ ಹಾಕಿ ಸಾಯಿಸಿಬಿಟ್ರಾ?
ನಿನಗೂ ಇವಳಿಗೂ ಏನು ಸಂಬಂಧ?
ನನ್ನ ಮದುವೆಯಾಗುತ್ತೇನೆಂದಳು
ಛೀ ಪಾಪಿಗಳಾ ನಿಮ್ಮ ಅಕ್ರಮ ಸಂಬಂಧಕ್ಕೆ ಒಂದು ಜೀವವನ್ನೇ ಬಲಿ ತೊಗೊಂಡ್ರಾ ಎನ್ನುತ್ತಾ ಇವರಿಬ್ಬರನ್ನು ಎಳೆದುಕೊಂಡು ಹೋಗಿ ವಾಹನದಲ್ಲಿ ಕೂಡಿಸ್ರೀ ಎಫ್ ಐ ಆರ್ ಹಾಕಿ ಕೋರ್ಟಿಗೆ ಹಾಜರುಪಡಿಸೋಣವೆಂದು ವಾಹನದಲ್ಲಿ ಕುಳಿತಾಗ
ಸಿಬ್ಬಂದಿಯವರು ಇಬ್ಬರನ್ನೂ ವಾಹನದಲ್ಲಿ ಕೂಡಿಸಿದ ತಕ್ಷಣ ವಾಹನವು ಠಾಣೆಯ ಮುಂದೆ ನಿಂತಾಗ
ಇನ್ಸ್ ಪೆಕ್ಟರ್ ಇಳಿದು ಒಳಗೆ ಹೋಗುತ್ತಿದ್ದು
ಸಿಬ್ಬಂದಿಯು ಇಬ್ಬರನ್ನು ಠಾಣೆಯ ಒಳಗೆ ಕರೆದುಕೊಂಡು ಬಂದು ಎಫ್ ಐ ಆರ್ ಹಾಕಿ ಕೋರ್ಟಿಗೆ ಹಾಜರುಪಡಿಸಿದಾಗ
ಕೋರ್ಟು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತದೆ
ಮುಂದುವರೆಯುತ್ತದೆ
ಡಾ. ಎನ್ ಮುರಳೀಧರ್
ವಕೀಲರು ಹಾಗೂ ಸಾಹಿತಿ
ನೆಲಮಂಗಲ

.gif)

.gif)


0 Comments