*ಮನುಜನಿಂದ ಬುದ್ಧನಾಗಲಿ*....!!!
ಕಳೆಯಲಿ ಎಲ್ಲ ಕಡೆಯ ಇರುಳು,
ಹೊಳೆಯುತ್ತಿರಲಿ ಆಕಾಶ ತಾರೆಗಳು,
ಕೆಂದುಳಿಯ ಮುಂಜಾವಿನಲಿ
ಬೀಸಲಿ ಇಲ್ಲಿ ಗಾಳಿಯು.....
ಎಚ್ಚರಿಕೆ ಬರಲಿ ಸೃಷ್ಟಿಗೆ ಅಥವಾ
ಆಗಲಿ ಮನುಷ್ಯನು ಎಚ್ಚರ,
ಭ್ರಷ್ಟ ಎಲ್ಲವೂ ನಷ್ಟವಾಗಲಿ,
ಗಟ್ಟಿಯಾಗಲಿ ಪ್ರೇಮದ ದಾರ....
ಎಲ್ಲ ಮಾರ್ಗಗಳು ಸ್ವಚ್ಛವಾಗಲಿ,
ಹಾಗೆ ಸ್ವಚ್ಛವಾಗಲಿ ಮನುಜರ ಮನವು,
ಮುಕ್ತ ಶ್ವಾಸದಿ ಬರುವುದು,
ಜನ್ಮ ಪಡೆಯಬೇಕು ಜೀವ ಸೃಷ್ಟಿಯು....
ಸ್ಪಂದನೆಯ ಅರ್ಥ ಇಲ್ಲಿ
ಒಬ್ಬರಿಗೆ ಒಬ್ಬರಲ್ಲಿ ಅರಿಕೆಯಾಗಲಿ,
ಈ ಮುಂಜಾವು ದಿನವು ಬರಲಿ,
ಮನುಜನಿಂದ ಬುದ್ಧನಾಗಲಿ....
💐🌹🌷ನಮೋ ಬುದ್ಧಾಯ 🌹🌷💐
💐🌷💐🌷ಜೈ ಭೀಮ್🌷🌹💐
🌷🌹💐ಜೈ ಭಾರತ💐🌷🌹
@✍️✍️✍️
ಶ್ರೀ ಅರ್ಜುನ ನಿಡಗುಂದೆ. ಕನ್ನಡ ಉಪನ್ಯಾಸಕರು,
ಸದಲಗಾ
ತಾಲೂಕ : - ಚಿಕ್ಕೋಡಿ
ಜಿಲ್ಲಾ : - ಬೆಳಗಾವಿ.
-------------------------------------

.gif)

.gif)


0 Comments