ಆನಂದ ಒಡೆಯರ್ ಅವರಿಗೆ ಸತ್ಕಾರ್ ಸಮಾರಂಭ

 ಹಿಡಕಲ್ ಗ್ರಾಮದ ಶ್ರೀ ಜಡಿಸಿದ್ದೇಶ್ವರ ನಿಲಯದ ಆವರಣದಲ್ಲಿ ನೂತನವಾಗಿ ಎಸ್ ಡಿ ಎ ಪರೀಕ್ಷೆ ಉತ್ತೀರ್ಣರಾಗಿ ಮುಗಳಖೋಡದ ಸರ್ಕಾರಿ ಆಸ್ಪತ್ರೆಯಲ್ಲಿ ನೂತನವಾಗಿ ಸೇವೆ ಸಲ್ಲಿಸುತ್ತಿರುವ ಆನಂದ ಒಡೆಯರ ಅವರಿಗೆ ಸತ್ಕಾರ ಸಮಾರಂಭ ಜರುಗಿತು ಸಮಾರಂಭದ ಮುಖ್ಯ ಅತಿಥಿಗಳಾಗಿ ಯುವಕವಿ ಎಸ್.ಡಿ.ರಾಯಮಾನೆ ಅವರು ಮಾತನಾಡಿ ಸಾಧನೆ ಸಾಧಕನ ಸೊತ್ತು ಸೋಮಾರಿಯ ಸೊತ್ತಲ್ಲ ಹಗಲಿರುಳು ಅಧ್ಯಯನ ಮಾಡಿ ಎಸ್.ಡಿ.ಎ ಪರೀಕ್ಷೆಯಲ್ಲಿ ಉತ್ತಿರ್ಣನಾಗಿ ಸರ್ಕಾರದ ಕೆಲಸ ದೇವರ ಕೆಲಸ ಇದ್ದಂತೆ ಅದನ್ನು ಅಚ್ಚುಕಟ್ಟುತನದಿಂದ ನಿರ್ವಹಿಸಿಕೊಂಡು ಹೋಗಬೇಕು ಮುಗಳಖೋಡದ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆನಂದ ಒಡೆಯರ್ ಅವರ ಸೇವೆ ಶ್ಲಾಘನೀಯ ಎಂದು ಸಾಹಿತಿ ಎಸ್ ಡಿ ರಾಯಮಾನೆ ಅಭಿಮತ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅನಂದ ಒಡೆಯರ ಹಾಗೂ ಅವರ ಧರ್ಮ ಪತ್ನಿ ವಿದ್ಯಾಶ್ರೀ ಅವರನ್ನು ರಾಯಬಾಗ 

ತಾಲೂಕು ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ವತಿಯಿಂದ ಶಾಲು ಮಾಲೆ ಫಲ ಪುಷ್ಪ ಗಳನ್ನು ನೀಡಿ ಗಣ್ಯರು ಸತ್ಕರಿಸಿದರು. ವೇದಿಕೆಯ ಮೇಲೆ ರಾಯಬಾಗ ತಾಲೂಕ ಸಾಂಸ್ಕೃತಿಕ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾದ ಶರಣ ಜೀವಿ ಕಲ್ಮೇಶ ಸತ್ತಿ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು ಸಾಂಸ್ಕೃತಿಕ ಪರಿಷತ್ತಿನ ಉಪಾಧ್ಯಕ್ಷರಾದ ಬಿ ಎಲ್ ಘಂಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ವೇದಿಕೆಯ ಮೇಲೆ ಅಶೋಕ ಪೂಜಾರಿ ಪಿಜಿ ಹುಣಶ್ಯಾಳ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಲಕ್ಕಪ್ಪ ಸಿ ಪಾಟೀಲ್ ರಾಮು ವಂಟಗೂಡಿ ಅಮಿತ್ ಪೂಜಾರಿ ಯಮುನವ್ವ ಪೂಜಾರಿ ಇಂದ್ರವ್ವ ವಂಟಗೂಡಿ ಮೀನಾಕ್ಷಿ ವಂಟಗೂಡಿ ಹಾಲಸಿದ್ಧ ವಂಟಗೂಡಿ ಉಪಸ್ಥಿತರಿದ್ದರು ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ರಾಯಬಾಗ್ ತಾಲೂಕ ಘಟಕದ ಅಧ್ಯಕ್ಷ ಟಿ.ಎಸ್. ವಂಟಗೂಡಿ ಸ್ವಾಗತಿಸಿದರು ಬಸವರಾಜ ಸತ್ತಿ ನಿರೂಪಿಸಿದರು ಮಂಜುಳಾ ಗಲಗಲಿ ವಂದಿಸಿದರು.


Image Description

Post a Comment

0 Comments