*ಚಿಕ್ಕೋಡಿ: ಶಕ್ತಿಯೋಜನೆ: ಮಹಾರಾಷ್ಟ್ರ ದ 16 ಹಳ್ಳಿಗಳಿಗೂ ಉಚಿತ ಪ್ರಯಾಣಕ್ಕೆ ಅನುಕೂಲ ಕಲ್ಪಿಸಿಕೊಟ್ಟ ಶಾಸಕದ್ವಯರು: ಮಹಿಳೆಯರಿಂದ ಅಭಿನಂದನೆ*


*ರಾಯಬಾಗ:* ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಅಡಿಯಲ್ಲಿ  ರಾಜ್ಯದ ಗಡಿಯವರೆಗೆ 20 ಕಿ.ಮೀ. ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ "ವಿಕಾಸ ರತ್ನ" ವಿಧಾನ ಪರಿಷತ್ತಿನ ಸದಸ್ಯರು, ಕರ್ನಾಟಕ ರಾಜ್ಯದ ದೆಹಲಿ ಪ್ರತಿನಿಧಿಗಳಾದ ಶ್ರೀ ಪ್ರಕಾಶ ಹುಕ್ಕೇರಿ, ಹಾಗೂ ಚಿಕ್ಕೋಡಿ ಸದಲಗಾ ಕ್ಷೇತ್ರದ ಜನಪ್ರಿಯ ಶಾಸಕರು, ಅಭಿವೃದ್ಧಿಯ ಹರಿಕಾರರಾದ  ಶ್ರೀ ಗಣೇಶ ಹುಕ್ಕೇರಿ ಅವರ ವಿಶೇಷ ಮುತುವರ್ಜಿಯಿಂದ  ಈ ಸೌಲಭ್ಯ ಅನುಷ್ಠಾನಗೊಂಡಿದೆ.


  ಅಂತರಾಜ್ಯ ಸ್ಥಳ ಮಾರ್ಗಗಳ ವಿವರ ಹೀಗಿದೆ. ಹುಪರಿ,ಗಡಹಿಂಗ್ಲಜ,ಈಚಲಕರಂಜಿ, ಮೀರಜ, ಕೊಲ್ಲಾಪುರ, ನರಸಿಂಹವಾಡಿ, ಗುಡ್ಡಾಪುರ, ಮಾಕವೇ, ಸಿಂಧೂರ, ಹಲಕರಣಿ,ಸುಂಡಿ,ಕುದ್ರೆಮನೆ, ಬುಗಡಿಕಟ್ಟಿ, ಮರನಹೋಳ,ದಾಮನೆ, ತುಡಿಯ ಹೀಗೆ ಒಟ್ಟು 16 ಊರುಗಳಿಗೆ ಗಡಿಭಾಗದ ಮಹಿಳಾ ಪ್ರಯಾಣಿಕರು ಬಸ್ ಗಳಲ್ಲಿ  ಉಚಿತ ಪ್ರಯಾಣ ಮಾಡಬಹುದು. ಈ ಅನುಕೂಲ ಕಲ್ಪಿಸಿದ ಉಭಯ ಶಾಸಕದ್ವಯರಿಗೆ ಎಲ್ಲಾ ಮಹಿಳಾ ಪ್ರಯಾಣಿಕರು ತುಂಬು ಹೃದಯದಿಂದ  ಅಭಿವಂದಿಸಿದ್ದಾರೆ.


*ವರದಿ:ಡಾ.ಜಯವೀರ ಎ.ಕೆ.*

      *ಖೇಮಲಾಪುರ*

Image Description

Post a Comment

0 Comments