ಉಪನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ, ಚಿಕ್ಕೋಡಿ ಹಾಗೂ ಬೆಳಗಾವಿ ಜಿಲ್ಲಾ ಮಾಧ್ಯಮಿಕ ಶಾಲಾ ಮುಖ್ಯ್ಯೊಪಾಧ್ಯಾಯರ ಸಂಘ, ಬೆಂಗಳೂರು ಜಿಲ್ಲಾ ಘಟಕ, ಚಿಕ್ಕೋಡಿಯವರು ಕೊಡಮಾಡಿದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಲಕ್ಕಪ್ಪ ಸಿದ್ದಗೌಡ ಪಾಟೀಲ ದೈಹಿಕ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಹುಣಶ್ಯಾಳ ಪಿ. ಜಿ ಇವರಿಗೆ ಅಖಿಲ ಕರ್ನಾಟಕ ಸಂಸ್ಕೃತಿಕ ಪರಿಷತ್ ತಾಲೂಕ ಘಟಕ ರಾಯಬಾಗವತಿಯಿಂದ ಕ್ರೀಡಾ ರಂಗದಲ್ಲಿ ಸಾಧನೆ ಮಾಡಿ ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಲಕ್ಕಪ್ಪ ಸಿ. ಪಾಟೀಲ ಅವರ ಮಹಾಮನೆಯ ಸಭಾಂಗಣದಲ್ಲಿ ಶಾಲು ಫಲ ಪುಷ್ಪಗಳು ಮತ್ತು ವಚನ ಪುಸ್ತಕವನ್ನು ನೀಡಿ ಸತ್ಕಾರಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಹಾಗೂ ಸಾಹಿತಿ ಟಿ ಎಸ್ ವಂಟಗೂಡಿ ಮಾತನಾಡಿ ದೈಹಿಕ ಶಿಕ್ಷಕರಾಗಿ ಹಲವಾರು ವಿದ್ಯಾರ್ಥಿಗಳಿಗೆ ದೈಹಿಕ ಹಾಗೂ ಮಾನಸಿಕವಾಗಿ ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕಾಗಿ ಪರಿಶ್ರಮಿಸಿ ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ದೈಹಿಕ ಶಿಕ್ಷಕ ಲಕ್ಕಪ್ಪ ಸಿ. ಪಾಟೀಲ ಅವರ ಸೇವೆ ಶ್ಲಾಘನಿಯ ಎಂದು ಸಾಹಿತಿ ಟಿ. ಎಸ್. ವಂಟಗೂಡಿ ಅಭಿಮತ ವ್ಯಕಪಡಿಸಿದರು. ಸಾಂಸ್ಕೃತಿಕ ಪರಿಷತಿನ ಉಪಾಧ್ಯಕ್ಷ ಬಿ. ಎಲ್. ಘಂಟಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಸಮಾರಂಭದ ದಿವ್ಯ ಸಾನಿಧ್ಯವನ್ನು ಹಿಡಕಲ್ಲದ ಬಬಲಾದಿ ಶಾಖಾಮಠದ ಪ. ಪೂ. ಸದಾಶಿವ ಮುತ್ತ್ಯಾ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಪ್ರಕಾಶ್ ಪಾಟೀಲ ಹೊನ್ನವ್ವ ಪಾಟೀಲ ಸುನಂದಾ ಪಾಟೀಲ ಕಾರ್ತಿಕ್ ಪಾಟೀಲ ವಿನಯ ತಡಸಲೂರ ವಿಶಾಲ ಪಾಟೀಲ ಶ್ರೀಧರ್ ಪಾಟೀಲ ಪ್ರವೀಣ ಪಾಟೀಲ ಪೂಜಾ ಪಾಟೀಲ ಉಪಸ್ಥಿತರಿದ್ದರು. ಕವಿರತ್ನ ಕಳಿದಾಸ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಬೀರಪ್ಪ ಎಸ್. ತಡಸಲೂರ ನಿರೂಪಿಸಿ ಸ್ವಾಗತಿಸಿದರು. ಸಾಂಸ್ಕೃತಿಕ ಪರಿಷತ್ ಕಾರ್ಯದರ್ಶಿ ಮಂಜುಳಾ ಗಲಗಲಿ ವಂದಿಸಿದರು
ವರದಿ :ಡಾ. ವಿಲಾಸ್ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments