*ಜೇನ ಹನಿಯಾಗುವಿಯಾ*
===================
ಗೆಳತಿ ಯಾರಿಗೂ ಕಾಣದಂತೆ
ಕಣ್ಣೀರ ಹನಿಯಿಂದ ಬರದೆ ನಿನ್ನ ಹೆಸರಾ
ಹೃದಯದಲ್ಲಿ ನಿನ್ನ ಬಚ್ಚಿಟ್ಟುಕೊಂಡು
ಬಾರವಾಗಿದೆ ಈ ನನ್ನ ಉಸಿರಾ.....
ಗೆಳತಿ ಬಣ್ಣದ ಕುಂಚವ ಹಿಡಿದು ಮರಳಲ್ಲಿ ನಿಂತಿರುವೆನು
ನನ್ನ ಭಾವನೆಯಲ್ಲಿ ನೀನು ಹೂವಾಗಿ ಅರಳುತಿರುವೆ
ಮೌನದ ಇರುಳಲ್ಲಿ ಮುಳಗಿರುವೇನು ನಾನು
ನಿನ್ನ ಪ್ರೀತಿಯ ಬೆಳಕಿಗಾಗಿ ಕಾಯುತ್ತಾ ಕುಳಿತಿರುವೆ.....
ಗೆಳತಿ ಕುಣಿಯುವ ನವಿಲಿನ ಕಾಲಿಗೆ ಗೆಜ್ಜೆ ಕಟ್ಟಿ
ನೃತ್ಯವ ನೋಡುತ್ತಾ ಮೈಮರೆತಿರುವೆ
ನೇಸರನ ಕಣ್ಣ ಹನಿಯು ಬೇಸರದಲ್ಲಿ ಧರೆಗಿಳಿದು
ಸುಂದರ ಇಬ್ಬನಿಯಾಗಿ ನನ್ನನ್ನು ಕರಿತಿರುವೆ.....
ಗೆಳತಿ ಅತಿಯಾಸೆಯಿಂದ ದಣಿವಾಗಿದೆ ಇಂದು ಕನಸುಗಳಿಗೆ ಆಶ್ರಯವಾಗಿ ನನ್ನ ಬದುಕಿಗೆ ದನಿಯಾಗುವಿಯಾ
ಹಗಲಿರುಳು ಕಳೆದು ಒಳ ಒಳಗೆ ನವಿದು ಸಿಹಿತಾರದ ಮುಗಿಲು ನನ್ನ ಕನಸಿಗೆ ಜೇನ ಹನಿಯಾಗುವಿಯಾ.....
*ಶ್ರೀ ಹ ಫ ನಾಯಕ*
*ಉಪನ್ಯಾಸಕರು*

.gif)

.gif)


0 Comments