437ನೇ "ಬದಕುವ ಮಾತು"ಪ್ರತಿಭಾನ್ವಿತರನ್ನು ಗೌರವಿಸೋಣ "

 ೪೩೭ನೇ 

✍️ಬದುಕುವ ಮಾತು🙏

*ಪ್ರತಿಭಾನ್ವಿತರನ್ನು ಗೌರವಿಸೋಣ* 

"""""""""""""""""""""""""""""""""""""""""""

ಅನೇಕ ಸಲ ನಮ್ಮಲೋಪ ದೋಷಗಳನ್ನು ಸಹಿಸಿಕೊಂಡು ಕೂಡ ಪ್ರತಿಭಾಸಂಪನ್ನ ವ್ಯೆಕ್ತಿ/ಗಳು ನಮ್ಮೊಡನೆ  ಅಥವಾ ನಮ್ಮ ಸಂಘ-ಸಂಸ್ಥೆ ಅಥವಾ ನಮ್ಮ ಸಮುದಾಯ,ಸಮಾಜಡೊಂದಿಗೆ ಜೊತೆಗೆ ವಿದೇಯತೆಯಿಂದ ಗೌರವ ಪೂರ್ವಕವಾಗಿ ನಡೆದುಕೊಳ್ಳುತ್ತಿದ್ದಾರೆಂದರೆ  ಅದರ ಅರ್ಥ ಅವರು ಎಲ್ಲ ಅನ್ಯಾಯವನ್ನು ಸಹಿಸಿ ಕೊಳ್ಳುತ್ತಾರೆ ಎಂದಲ್ಲ. ಬದಲಾಗಿ ನಮ್ಮಲ್ಲಿನ ಧನಾತ್ಮಕ ಬದಲಾವಣೆಗಾಗಿ, ಉತ್ತಮ ನಡವಳಿಕೆಗಾಗಿ, ಪರಿವರ್ತನೆಗಾಗಿ, ಒಳ್ಳೆಯತನದ ನಿರೀಕ್ಷೆ ಇಟ್ಟುಕೊಂಡು ಅವರು  ಕಾಯುತ್ತಿರಬಹುದು. ಆದ್ದರಿಂದ ಅವರ ಅರ್ಹತೆಗೆ ತಕ್ಕಂತೆ ಅವರನ್ನು ನಾವು ನಡೆಸಿಕೊಳ್ಳಬೇಕಾಗುತ್ತದೆ. ಅವರಿಗೆ ತಕ್ಕ ಸ್ಥಾನಮಾನ ನೀಡಬೇಕಾಗುತ್ತದೆ. ಮುಗ್ದತೆಯ ಗುಣ ಇರತಕ್ಕಂತಹ ಪ್ರತಿಭಾವಂತರು ನಮಗೆ ಸಿಗುವುದು ಅಪರೂಪ. ಹಾಗಾಗಿ ಅವರನ್ನು ತೀರಾ ಹಗುರವಾಗಿ  ತಿಳಿಯದೇ ಅವರ ಸ್ವಾಭಿಮಾನಕ್ಕೆ ದಕ್ಕೆಯಾಗದಂತೆ ನಡೆದುಕೊಳ್ಳೋಣ. ಈ ಮೂಲಕ ಸಂಪನ್ಮೂಲ ವ್ಯೆಕ್ತಿಗಳ  ವಿಶ್ವಾಸ ಉಳಿಸಿಕೊಳ್ಳೋಣ.  

                          

     **********

ಗಣಪತಿ ಗೋ ಚಲವಾದಿ (ಗಗೋಚ)

ಬಿಎಂಟಿಸಿ ನಿರ್ವಾಹಕರು

ಮಯೂರವರ್ಮ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು

Image Description

Post a Comment

0 Comments