*ಕಾಲುಬಾಯಿ ರೋಗ ಲಸಿಕಾ ಅಭಿಯಾನ: ಪೂರ್ವಭಾವಿ ಸಭೆ*
*ರಾಯಬಾಗ:* ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ ನಿ.ಇವರ ಸಹಯೋಗದಲ್ಲಿ ಹಮ್ಮಿಕೊಂಡ "ಕಾಲುಬಾಯಿ ರೋಗ ಲಸಿಕಾ ಅಭಿಯಾನ" ಇದೇ ತಿಂಗಳು 26 ರಿಂದ ಆರಂಭವಾಗಲಿದ್ದು, ಇದರ ಪೂರ್ವಭಾವಿ ಸಭೆ ರಾಯಬಾಗ ಪಶು ಆಸ್ಪತ್ರೆಯಲ್ಲಿ ಶುಕ್ರವಾರ ದಿನಾಂಕ 22 ರಂದು ನೆರವೇರಿತು. ರಾಯಬಾಗ ತಹಸೀಲ್ದಾರ್ ಶ್ರೀ ಸುರೇಶ ಮುಂಜೆ ಅವರು ಆಗಮಿಸಿ ರೈತರಿಗೆ ಆರ್ಥಿಕ ಸಂಕಷ್ಟ ಉಂಟು ಮಾಡುವ ಕಾಲುಬಾಯಿ ರೋಗ ಮುಕ್ತ ರಾಜ್ಯ ಮಾಡಲು ರಾಜ್ಯ ಸರಕಾರ ದೃಢ ಸಂಕಲ್ಪ ಮಾಡಿದ್ದು, ಈ ಅಭಿಯಾನದಲ್ಲಿ ತಾವೆಲ್ಲರೂ ಪ್ರಾಮಾಣಿಕವಾಗಿ ಪಾಲ್ಗೊಂಡು ನಮ್ಮ ತಾಲ್ಲೂಕಿನಲ್ಲಿ ಪ್ರಸ್ತುತ ಈ ಅಭಿಯಾನ ಅತ್ಯಂತ ಯಶಸ್ವಿಯಾಗಿ ನೆರವೇರಲು ಸಹಕರಿಸಬೇಕೆಂದರು.
ಇದೇ ಸಂದರ್ಭದಲ್ಲಿ ಆಗಮಿಸಿದ ಗಣ್ಯರು, ತಾಲ್ಲೂಕಿನ ಪಶು ವೈದ್ಯ ಅಧಿಕಾರಿಗಳು ಸರಕಾರ ಪ್ರಕಟಿಸಿದ ಕರಪತ್ರವನ್ನು ಬಿಡುಗಡೆ ಮಾಡಿದರು. ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ, ಸಿ.ಡಿ.ಪಿ.ಓ.ಸಂತೋಷ ಕಾಂಬಳೆ, ತಾಲ್ಲೂಕು ಅರೋಗ್ಯ ಶಿಕ್ಷಣ ಅಧಿಕಾರಿ ಶಂಕರ ಪಾಟೀಲ, ಸಹಾಯಕ ನಿರ್ದೇಶಕರು ಡಾ.ಸಚಿನ್ ಸೌಂದಲಗಿ, ಡಾ.ಬಿ.ಎಸ್.ಜಂಬಗಿ, ಪಶು ವೈದ್ಯಾ ಧಿಕಾರಿ ಡಾ.ಎಂ.ಬಿ.ಪಾಟೀಲ, ಡಾ.ಬುಜಬಲ ಐಗಳಿ, ಡಾ.ಮನೋಹರ ಪತ್ತಾರ, ಡಾ.ಎಚ್.ಟಿ.ನಾವಿ,ಡಾ.ಪ್ರಮೋದ ತಳವಾರ, ಡಾ.ಕರೆಪ್ಪ ಗುಡೋಡಗಿ,ಡಾ.ಪ್ರಶಾಂತ ಮಶಾಲಜಿ, ಡಾ.ಪ್ರದೀಪ ಮುಳವಾಡ, ಡಾ.ಕೆ.ಎಲ್.ನಂದಾರ, ವಸಂತ ಗಲಗಲಿ, ಶ್ರೀಕಾಂತ ಧರ್ಮಟ್ಟಿ,ಚಿದಾನಂದ ಬೆಳಕೂಡ, ಆರ್.ಎನ್.ಬಾಗೋಜಿ ಕೆ.ಆರ್.ಕಟ್ಟಿಕಾರ, ಎ.ಬಿ.ಕದಂ, ಸಂಜಯ ದುರ್ಗಣ್ಣವರ, ಸಿದ್ದು ಅಲಖನೂರೆ, ಶ್ರೀಕಾಂತ ಮಂಟೂರ್ ಸಂತೋಷ ಮನ್ನಿಕೇರಿ,ಹನಮಂತ ವರ್ಲಿ,ಹಾಗೂ ತುಕಾರಾಮ ಮಂಟೂರ ಮತ್ತಿತರರು ಉಪಸ್ಥಿತರಿದ್ದರು.
*ವರದಿ:ಡಾ.ಜಯವೀರ ಎ.ಕೆ.*
*ಖೇಮಲಾಪುರ*
.jpg)
.gif)

.gif)


0 Comments