*ವಿಶ್ವ ಓಜೋನ್ ದಿನ* ನಿಮಿತ್ಯ ಸಾಲುಮರದ ತಿಮ್ಮಕ್ಕನ ಬಗ್ಗೆ ಒಂದು ಕಿರು ಲೇಖನ.
*"ಸಾಲು ಮರದ ತಿಮ್ಮಕ್ಕ"*
*"ಹಸಿರೇ ಉಸಿರು*
*ಆ ಉಸಿರಲ್ಲಿ ಬೆರೆತಿದೆ*
*ನಿನ್ನ ಹೆಸರು"*
ಸಾಲುಮರದ ತಿಮ್ಮಕ್ಕ ಎಂದರೆ ಎಲ್ಲರಿಗೂ ಚಿರಪರಿಚಿತಳು
ಆದರೂ ಪರಿಚಿತರ ಕುರಿತು ಪರಿ ಪರಿಯಾಗಿ ಬಿಡಿಸಿ ಬರೆಯುವ ಈ ಸಾಲುಗಳಲ್ಲಿ ಅವರ ಜೀವನದ ಮಹತ್ತರವಾದ ವಿಷಯಗಳನ್ನು ಹಾಗೂ ಸಾಧನೆ, ಪುರಸ್ಕಾರಗಳನ್ನು ತಮ್ಮ ಮುಂದೆ ಪ್ರಸ್ತುತಪಡಿಸುವೇನು.
ಬಡತನದ ಜೀವನದಲ್ಲಿ ಬೆಂದುಹೋದ ಬಡ ಕುಟುಂಬದಲ್ಲಿ ಜನಿಸಿದ ಇವಳು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚಿಕ್ಕರಂಗಯ್ಯ ಮತ್ತು ವಿಜಯಮ್ಮ ದಂಪತಿಗಳಿಗೆ ಮಗಳಾಗಿ ಹುಟ್ಟಿರುವಳು.
ತಂದೆ ತಾಯಿಗೆ ಕಲಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇದ್ದಾಗ ಶಿಕ್ಷಣವನ್ನು ತೊರೆದು ಕೂಲಿ ಕೆಲಸಕ್ಕೆ ಹೊರಟಳು ಈ ತಿಮ್ಮಕ್ಕ.
ಹೀಗೆ ಬೆಳೆದು ದೊಡ್ಡವಳಾದ ಮೇಲೆ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಚಿಕ್ಕಯ್ಯ ಎಂಬ ದನ ಕಾಯುವ ವ್ಯಕ್ತಿಯೊಡನೆ ಮದುವೆ ಮಾಡುತ್ತಾರೆ.
ತಿಮ್ಮಕ್ಕ ಬಹಳ ಮೃದು ಸ್ವಭಾವವನ್ನು ಹೊಂದಿದ್ದು *"ಪತಿಯೇ ದೈವ"* ಎಂದು ತಿಳಿದು ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿರುತ್ತಾಳೆ.
"ವಿಧಿಯ ಬರಹದ ಮುಂದೆ ಯಾರು ಏನು ಮಾಡಲು ಸಾಧ್ಯ." ಯನಗೆ ಮಕ್ಕಳ ಭಾಗ್ಯವಿಲ್ಲದೆ *ಬರಡು ಭೂಮಿಯಂತಾಯಿತು* ನನ್ನ ಜೀವನ ಎಂದು ಬೇಸರವನ್ನು ಪಡುತ್ತಾ ನೋವಿನ ದಿನಗಳನ್ನು ಕಳೆಯುತ ಬದುಕುತ್ತಿರುತ್ತಾಳೆ.
ಅಮ್ಮ ತಿಮ್ಮಕ್ಕನ ಮನದಲ್ಲಿ ಹಲವಾರು ವಿಚಾರಗಳು ಸುಳಿಯುತ್ತಿರುತ್ತವೆ ಆದರೂ ತಾಯಿ ಎದೆಗುಂದದೆ;
*"ಬಂಜೆಯಾದರೇನು*
*ಬಂಜರವಾದ*
*ಭೂಮಿಯಲ್ಲಿ*
*ಬೀಜ ಬಿತ್ತಿ*
*ಬೆಳೆಯನ್ನು(ಮರ)* *ಬೆಳೆಸುವೆ* ಎನ್ನುವ ಮೂಲಕ
ಮರಗಳನ್ನು ತನ್ನ ಮಕ್ಕಳೆಂದು ತಿಳಿದು ಬೆಳೆಸಲು ಪ್ರಾರಂಭಿಸಿದಳು.
ದಂಪತಿಗಳಿಬ್ಬರು ದಿನಾಲು ದನ ಕಾಯುತ್ತಾ ದಾರಿಯುದ್ದಕ್ಕೂ ಹೋಗುವಾಗ ಬಿಸಿಲಿಗೆ ಬೇಸತ್ತು ನೆರಳಿಲ್ಲದೆ, ಮಳೆಗಾಳಿಗೆ ಆಸರೆ ಇಲ್ಲದೆ ಕಷ್ಟದ ದಿನಗಳನ್ನು ಕಳೆಯುತ್ತಿರುವಾಗ ಇವರ ಗಮನಕ್ಕೆ ಬಂದಿರುವುದೇ ದಾರಿಯುದ್ದಕ್ಕೂ ಮರಗಳನ್ನು ಬೆಳೆಸುವುದು.
ಹೀಗೆ ತಮ್ಮ ಆದಾಯದಲ್ಲಿನ ಸ್ವಲ್ಪ ಹಣವನ್ನು ಖರ್ಚು ಮಾಡುತ್ತ *"ಕುದೂರಿನಿಂದ ಹುಲಿಕಲ್* ವರೆಗಿನ ರಾಜ್ಯ ಹೆದ್ದಾರಿ ಪಕ್ಕ ೧೯೮೪ ರಲ್ಲಿ ಆಲದ ಮರಗಳನ್ನು ನೆಟ್ಟರು. ಬಿಂದಿಗೆಯಲ್ಲಿ ನೀರನ್ನು ತೆಗೆದುಕೊಂಡು ದಿನಾಲೂ ನಾಲ್ಕೈದು ಕಿ.ಮಿ.ನಷ್ಟು ನಡೆದುಕೊಂಡು ಆ ಮರಗಳಿಗೆ ನೀರುಣಿಸಿ ಬರುತ್ತಿದ್ದರು.
ಹೀಗೆ ಕಷ್ಟದಿ ಬೆಳೆಸಿದ ಆ ಮರಗಳು ವರ್ಷದಿಂದ ವರ್ಷಕ್ಕೆ ಬೆಳವಣಿಗೆಯ ಪ್ರಮಾಣದಲ್ಲಿ ಹೆಚ್ಚಾಗಿ ಎಲ್ಲಿ ನೋಡಿದಲ್ಲೆಲ್ಲ ಹಚ್ಚು ಹಸಿರಾಗಿ ಕಂಗೊಳಿಸತೊಡಗಿದವು, ಸುಂದರವಾದ ಪ್ರಕೃತಿಯ ಸೊಬಗು ಉತ್ಸಾಹ ನೀಡತೋಡಗಿತು.
ಪರಿಸರವನ್ನು ಬೆಳೆಸಿದ ಮಹಾತಾಯಿಯು ನಮ್ಮೆಲ್ಲರ ಬದುಕಿಗೆ ಹುಸಿರಾಗಿ ನಿಂತಿರುವಳು.
ಹಾಗೇಯೇ ಇಂತಹ ಉತ್ತಮವಾದ ಪರಿಸರವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿರುವಳು ಅಮ್ಮ ತಿಮ್ಮಕ್ಕ.
ಇವರ ಈ ಸಾಧನೆಯನ್ನು ಗುರುತಿಸಿ ಹಲವಾರು ಪ್ರಶಸ್ತಿ, ಪಾರಿತೋಷಕಗಳು ಸಾಲು ಸಾಲಾಗಿ ಇವರನ್ನು ಹುಡುಕುತ್ತ ಬಂದವು. ಅವುಗಳಲ್ಲಿ ಪ್ರಮುಖವಾದವುಗಳು *"ರಾಷ್ಟ್ರೀಯ ಪೌರ ಪ್ರಶಸ್ತಿ"*, *"ಇಂದಿರಾ ಪ್ರಿಯದರ್ಶಿನಿ ವೃಕ್ಷ ಪ್ರಶಸ್ತಿ"*, *"ರಾಜ್ಯೋತ್ಸವ ಪ್ರಶಸ್ತಿ"*, *"ನಾಡೋಜ ಪ್ರಶಸ್ತಿ"*, *"ಕರ್ನಾಟಕ ಪರಿಸರ ಪ್ರಶಸ್ತಿ"* ಹಾಗೆ ೨೦೧೯ ರಲ್ಲಿ ಗಣರಾಜ್ಯೋತ್ಸವದ ದಿನದಂದು ರಾಜ್ಯಪಾಲರು *"ಪದ್ಮಶ್ರೀ ಪ್ರಶಸ್ತಿ"* ನೀಡಿ ಪುರಸ್ಕಾರ ಮಾಡಿದರು.
ಇಂತಹ ಪ್ರಶಸ್ತಿಗಳನ್ನು ಪಡೆದುಕೊಂಡರು ಕೂಡ ಅಮ್ಮ ಇನ್ನೂ ಸಮಾಜ ಸೇವೆಗಾಗಿ ತಮ್ಮ ಬದುಕನ್ನು ಸಾಗಿಸುತ್ತಿರುವ ಇವರು ತಮ್ಮ ಊರಿನಲ್ಲಿ ಆಸ್ಪತ್ರೆಯೊಂದನ್ನು ನಿರ್ಮಿಸಿ ಜನರ ಸೇವೆಗೆ ಸದಾ ಸಿದ್ಧಳು ಎನ್ನುವಂತೆ ಉತ್ತಮವಾದ ಯೋಜನೆಯನ್ನು ರೂಪಿಸಿಕೊಂಡಿರುವ ಮಹಾನ ತ್ಯಾಗಿ ಅಮ್ಮ ಸಾಲುಮರದ ತಿಮ್ಮಕ್ಕ. *"ಇವರ ಹೆಜ್ಜೆಯ ಗುರುತಿನಲ್ಲಿ ನಡೆಯುತ್ತ ಮರಗಳನ್ನು ಬೆಳೆಸುತ್ತಾ ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ"*
*"೨೦೧೩ರಲ್ಲಿ ವಿಜಯಪುರದಲ್ಲಿ ನಡೆದ ೭೯ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ"*
ಅಮ್ಮನ ಕೈಯನ್ನು ಹಿಡಿದು ಆ ಭವ್ಯವಾದ ವೇದಿಕೆಯ ಮೇಲೆ ಕರೆದುಕೊಂಡು ಹೋಗುವ ಸೌಭಾಗ್ಯವು ನನಗೆ ದೊರೆತಿದ್ದು ನನ್ನ ಭಾಗ್ಯ ಎನ್ನಬಹುದು.
ಹೀಗೆ *"ನಿಸರ್ಗದ ಮಡಿಲಲ್ಲಿ ಬೆಳೆಯುವ ನಾವು ಅಮ್ಮ ತಿಮ್ಮಕ್ಕನ ಮಡಿಲಲ್ಲಿ ಬೆಳೆದಂತೆ ಭಾಸವಾಗುತ್ತದೆ"*
"ಅಮ್ಮನ ಕುರಿತು ವರ್ಣನೆ ಮಾಡಲು ಪದಗಳು ಸಿಗದು
ಪರಿಸರವನ್ನು ನೋಡಲು ಎರಡು ಕಣ್ಣು ಸಾಲದು"
*"ಸಾಲು ಮರದ ತಿಮ್ಮಕ್ಕ*
*ಬೆಳೆಸಿದಳು ನನ್ನನು*
*ಬೀದಿ ಬಸಮ್ಮ*
*ಕಡಿಸಿದಳು ನನ್ನನ್ನು*
*ಆಗ ಬಿತ್ತು ಬರಗಾಲ*
*ಅದಕ್ಕೆ ಹೆದರಿ ಮತ್ತೆ*
*ನನ್ನನ್ನು ನೆಟ್ಟರು*
*ನನ್ನನ್ನು ಬೆಳೆಸಿ*
*ನಿಮ್ಮನ್ನು ಉಳಿಸಿಕೊಳ್ಳಿ"*
*"ಮನೆಗೊಂದು ಮರವಿರಲಿ*
*ಊರಿಗೊಂದು ವನವಿರಲಿ"*
ಧನ್ಯವಾದಗಳೊಂದಿಗೆ.....
*"ರಚನೆ"*
*"ಮಹಾಂತೇಶ ಹೊಸಮನಿ"*
ರಾಜ್ಯ ಮಟ್ಟದ *ಕವಿಶ್ರೀ* ಹಾಗು *ರಾಷ್ಟ್ರೀಯ ಶಿಕ್ಷಕರತ್ನ* ಪ್ರಶಸ್ತಿ ಪುರಸ್ಕೃತ, *ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರು.*
ಮು;ಪೊ: ಶಿರಗಾಂವ
ತಾ: ಹುಕ್ಕೇರಿ
ಜಿ: ಬೆಳಗಾವಿ
ಪಿ: ೫೯೧೩೦೯
ಮೊ.ನಂ: ೭೦೨೬೨೭೯೧೨೩
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments