ಹೈಕುಗಳು

 ಹೈಕುಗಳು.

ನನಗರಿವು

ಬಂದಾಗ ಹಿಡಿಸಿದ್ದು

ನಿನ್ನ ಪ್ರೀತಿಯೆ.


ಏನಾದರೇನು

ನನಗೆ ನಿನ್ನತನ

ಗೆಲ್ಲುವ ಹುಚ್ಚು.


ಬಿಟ್ಟೂ ಬಿಡದೆ

ನನ್ನ ಕಾಡುತ್ತಲಿದೆ

ರಾತ್ರಿ ಹಗಲೂ.


ಹರೆ ಎಂದರೆ

ಬೀಜ ಅಂಕುರಿಸುವ

ಸವಿ ಸಮಯ.


ಹರೆಯ ದಾಟಿ

ಮುಪ್ಪು ಬಂತೆಂದರೆ

ಸೊಗಸು ಮಾಯ.


ಶಿರೂರ ಶ್ರೀಶೈಲ...


Image Description

Post a Comment

0 Comments