*ಇದುವೇ ಜೀವನ*
ಗತಿಸಿದ ಆ ದಿನ ಕಾಲ ಗಳಿಗೆ
ಕಳೆದಷ್ಟು ಪಡೆದಷ್ಟು ಉಲ್ಬಣ
ನಿತ್ರಾಣಗೊಂಡ ಅಣುವಿನ ತೃಣ
ಕ್ಷೀಣಿಸಿ ಯಜ್ಞ ದೋಳಗೆ ಭಗ್ನಗೊಂಡಿದೆ
ಅಂಶ ಅಳಿಸಿ ಕಳಿಸಿ ಹಳಿಸಿ
ಧಾತೃಮಯವಾಗದಿರದು
ಭಾರತೀರದ ವಸ್ತುವಿಲ್ಲ
ಜಡತ್ವ ಹೋಗಿ ಗಾಳಿಯಾಗುವುದಿದೆ
ಧರಣಿಯಲಿ ಕನಸು ಹುದುಗಿ
ಎದೆಯಲದುವೆ ಹದಗೊಂಡು
ಮಿನುಚಿ ಕೊನರಿ ಕೊಸರಿದೆ
ರಸಗಳಾಗಿ ಒಲಿಸಿದೆ
ದಿಟ್ಟವಾದ ಬೆಟ್ಟವಾದ ಭಾವ
ಹುದುಗಿದೆ, ತೆರೆದಿದೆ, ಒರಗಿದೆ
ಅಂತ್ಯಕೊಂದು ಆರಂಭ
ಬದಲಾಲಣೆ ಜಗದ ನಿಯಮ
ಡಾ. ಮಹಾದೇವ ಪೋತರಾಜ್
(ಮಹಾಚಂಪೋ)

.gif)

.gif)


0 Comments