*"ಗಾಂಧಿ ಗ್ರಾಮ ಪುರಸ್ಕಾರಕ್ಕೆ ಜಲಾಲಪುರ ಗ್ರಾಮ ಆಯ್ಕೆ*
*ರಾಯಬಾಗ:* ದಿನಾಂಕ 26 ರಂದು ಕರ್ನಾಟಕ ಪಂಚಾಯತ ರಾಜ್ ಆಯುಕ್ತಾಲಯದ ಮಾನ್ಯ ಆಯುಕ್ತರು 2022~23 ನೇ ಸಾಲಿನ" ಗಾಂಧೀ ಗ್ರಾಮ ಪುರಸ್ಕಾರಕ್ಕೆ" ಆಯ್ಕೆಯಾದ ರಾಜ್ಯದ ಹಲವು ಗ್ರಾಮಗಳ ಪಟ್ಟಿ ಪ್ರಕಟಿಸಿದ್ದಾರೆ. ಈ ಅಧೀಕೃತ ಪಟ್ಟಿಯಲ್ಲಿ ರಾಯಬಾಗ ತಾಲ್ಲೂಕಿನ ಜಲಾಲಪುರ ಗ್ರಾಮ ಆಯ್ಕೆಯಾಗಿದೆ. ಆಯ್ಕೆಯಾದ ಗ್ರಾಮಗಳ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ಅಕ್ಟೋಬರ 2 ರಂದು ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ.
*ವರದಿ:ಡಾ.ಜಯವೀರ ಎ.ಕೆ.*
*ಖೇಮಲಾಪುರ*
.gif)

.gif)


0 Comments