ಶಿಕ್ಷಣ ಪ್ರಸಾರಕ ಮಂಡಳದ ಹಾ ವಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಹಾರೂಗೇರಿ
54 ನೇ ರಾಷ್ಟ್ರೀಯ ಸೇವಾಯೋಜನೆ ಘಟಕದ ಸಂಸ್ಥಾಪಣಾ ದಿನಾಚರಣೆ
ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಎಸ್ ಪಿ ಎಮ್ ಮಂಡಳದ ಹಾ ವಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇಂದು ನಡೆದ 54ನೇಯ ರಾಷ್ಟ್ರಿಯ ಸೇವಾ ಯೋಜನೆಯ ಸಂಸ್ಥಾಪಣಾ ದಿನಾಚರಣೆಯನ್ನು ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಅಧ್ಯಾಪಕರಾದ ಶ್ರೀ ಎಸ್ ಕೆ ಗುರುನಾಥರವರು ಮಾತನಾಡಿ ಪಠ್ಯ -ಪಠ್ಯತರ,ಸಹ ಚಟುವಟಿಕೆ, ಸೇವಾ ಮನೋಭಾವನೆ, ಸಾಮಾನ್ಯ ಜ್ಞಾನ, ಸ್ವಚ್ಚ ಭಾರತ ಅಭಿಯಾನ ಹಾಗೂ ಏನ್ ಎಸ್ ಎಸ್ ಉದ್ದೇಶ ಮತ್ತು ಅವುಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮಾರ್ಮಿಕವಾಗಿ ತಿಳಿಸಿಕೊಟ್ಟರು. ಈ ಸುಂದರ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನುವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಎಮ್ ವ್ಹಿ ಕೋಳೆಕರ ಮಾತನಾಡಿ, ಮಹಾತ್ಮಗಾಂಧೀಜಿಯವರು ಕಂಡ ಕನಸು ರಾಮರಾಜ್ಯವಾಗಲು ಇಂತಹ ಏನ್ ಎಸ್ ಎಸ್ ಘಟಕಗಳು ಅತೀ ಮಹತ್ವದ್ದಾಗಿವೆ ಎಂದು ತಿಳಿಸಿ ಕೊಟ್ಟರು.ಏನ್ ಎಸ್ ಎಸ್ ಕಾರ್ಯಕ್ರಮದ ಅಧಿಕಾರಿಯಾದ ಡಾ. ಕೆ ಎಸ್ ಕಾಂಬಳೆಯವರು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಎಲ್ಲ ಸಿಬ್ಬಂದಿವರ್ಗದವರು ಹಾಗೂ ಏನ್ ಎಸ್ ಎಸ್ ಸ್ವಯಂ ಸೇವಕ /ಸೇವಕಿಯರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕೊನೆಯದಾಗಿ ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾರ್ಪಣೆಯನ್ನು ಅಚ್ಚು ಕಟ್ಟಕಟ್ಟಾಗಿ ಶ್ರೀ ಎಚ್ ಎಸ್ ಕುರಿಯವರು ನಡೆಸಿ ಕೊಟ್ಟರು.
ವರದಿ :ಡಾ. ವಿಲಾಸ್ ಕಾಂಬಳೆ
ಹಾರೂಗೇರಿ

.gif)

.gif)


0 Comments