ಗಗನ ಕುಸುಮ (ಕಾದಂಬರಿ )ಸಂಚಿಕೆ -65

 ಗಗನ ಕುಸುಮ (ಕಾದಂಬರಿ) ಸಂಚಿಕೆ-೬೫


ಹಿಂದಿನ ಸಂಚಿಕೆಯಲ್ಲಿ


 ಸಂಜಯನು ಕುಸುಮಳ ಮನೆಗೆ ಬಂದು ಕೋರ್ಟಿನಲ್ಲಿ ಡೈವೋರ್ಸ್ ಗೆ ಒಪ್ಪಿಗೆ ಕೊಡು ಇಲ್ಲದಿದ್ದರೆ ವಿಷ ಕುಡಿಯುವುದಾಗಿ ಹೆದರಿಸಿ ಹೋಗುತ್ತಾನೆ


ಕಥೆಯನ್ನು ಮುಂದುವರೆಸುತ್ತಾ


ಸಂಜಯನು ಹೋದ ಮೇಲೆ 

ಸಂಜಯನ ತಂದೆ ಮಾತನಾಡಿ ನನ್ನ ಮಗನಿಗೆ ಈ ಜನ್ಮದಲ್ಲಿ ಬುದ್ದಿ ಬರುವುದಿಲ್ಲ  ಬೀಗರೇ …..ಎನ್ನಲು

ಏನೂ ಮಾಡುವುದಕ್ಕೆ ಆಗುವುದಿಲ್ಲ ಬಂದಿದ್ದನ್ನು ಅನುಭವಿಸಲೇಬೇಕು  ರಘುರಾಂ ರವರೇ 

ಏನು ಜನಗಳೋ ಅವರಿಂದ ಬೇರೆಯವರೂ ಸಮಾಧಾನದಿಂದ ಇರುವಂತಿಲ್ಲವಾಗಿದೆ ಕೆಟ್ಟ ಮೇಲೆ. ಬುದ್ದಿ ಬರುತ್ತದೆ ಅಷ್ಟೇ ಬೀಗರೆ ಎನ್ನಲು 

ಹೌದೌದು ಯಾರ ಮಾತೂ ಕೇಳುವುದಿಲ್ಲ ಕೆಟ್ಟ ಮೇಲೆ ಬುದ್ದಿ ಬರುವ ವೇಳೆಗೆ ಕಾಲವೇ ಮಿಂಚಿ ಹೋಗಿರುತ್ತದೆಂದು ಮಾತನಾಡುತ್ತಿರುವಾಗ


ತಂದೆಯಿಂದ ದೂಡಲ್ಪಟ್ಟು ಅಳುತ್ತಿದ್ದ  ಮಕ್ಕಳನ್ನು ಕುಸುಮ ಸಮಾಧಾನ ಮಾಡುತ್ತಾ …..ಅಪ್ಪಾ ಅವರ ಸಹವಾಸವೇ ಬೇಡಪ್ಪಾ ನಾನು ಡೈವೋರ್ಸ್ ಕೊಡಲು ತೀರ್ಮಾನಿಸಿದ್ದೇನೆ ಇರುವರೆಗಾದರೂ ನೆಮ್ಮದಿಯಿಂದ ಇರೋಣ 

ಅವರಪ್ಪ ಚೆನ್ನಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಮ್ಮ ಎಂದಾಗ

ನಾನು ಚೆನ್ನಾಗಿಯೇ ಯೋಚಿಸಿ ನಿರ್ಧಾರಕ್ಕೆ ಬಂದಿದ್ದೇನಪ್ಪಾ ಅವರಿಗೆ ನಾನೂ ಬೇಡಾ ಮಕ್ಕಳೂ ಬೇಡವಾಗಿದೆ .

ಸಂಜಯನ ತಂದೆ ಮಾತನಾಡಿ ನನ್ನ ಮಗ  ಇಂದಲ್ಲಾ ನಾಳೆ ಸರಿಹೋಗುತ್ತಾನೆಂದು  ಭರವಸೆ ನೀಡಲಾರೆ ಕಣಮ್ಮಾ ಇರುವ ತನಕ ತಲೆಕುಕ್ಕಲು ಇದ್ದೇ ಇರುತ್ತದೆ ನೀನು ನನ್ನ ಮಗನಿಗೆ ಡೈವೋರ್ಸ್ ಕೊಡುವುದು ಬೇಡವೆಂದು ಹೇಳುವುದಿಲ್ಲ ಮುಂದೆ ಏನಾಗುತ್ತದೋ ಆಗಲಿ ಎನ್ನುತ್ತಾರೆ

ಎಲ್ಲರೂ ಡಿಸೈಡ್ ಮಾಡಿದ ಮೇಲೆ ನನ್ನದೇನೂ ಅಭ್ಯಂತರವಿಲ್ಲ ಒಟ್ಟಿನಲ್ಲಿ ಎಲ್ಲರಿಗೂ ಮನಸ್ಸಿಗೆ ನೆಮ್ಮದಿ ಬೇಕಷ್ಟೇ ಎಂದು ಕುಸುಮಳ ಅತ್ತೆ ಧ್ವನಿಗೂಡಿಸುತ್ತಾರೆ

ಕುಸುಮಳ ಅಪ್ಪ ಮಾತನಾಡಿ ನಾಡಿದ್ದೇ ಕೋರ್ಟಿದೆ ಅವತ್ತು  ನನ್ನ ಮಗಳು ಡೈವೋರ್ಸ್ ಗೆ ಹೇಳಿಕೆ ಕೊಟ್ಟ ತಕ್ಷಣ ನೀವು ದಯವಿಟ್ಟು ನಮ್ಮ ಮನೆಯನ್ನು ಬಿಟ್ಟು ಹೋಗಬಾರದು ರಘುರಾಂರವರೇ ಎಂದು ಕುಸುಮಳ ಅಪ್ಪ ಹೇಳಲು

ನನ್ನ ಮಗ ಡೈವೋರ್ಸ್ ಪಡೆದು ಗಗನಳನ್ನು ಮದುವೆಯಾದರೆ ನಾವಂತೂ ಆ ಮನೆಯಲ್ಲಿ ಇರುವುದಿಲ್ಲಾ ಬೀಗರೇ 

ಹಾಗಿದ್ದರೆ ಇಲ್ಲೇ ಇದ್ದುಬಿಡಿ ಅಷ್ಟೇ  ಎನ್ನಲು

ಎಲ್ಲಿಯವರೆಗೆ ಬರುತ್ತದೆ ನೋಡೋಣವೆಂದು ಹೇಳಿ ಇತರೆ ವಿಷಯ ಮಾತನಾಡಲು ಶುರು ಮಾಡುತ್ತಾರೆ


ಎರಡು ದಿನ ಕಳೆದ ನಂತರ ಕೋರ್ಟಿನಲ್ಲಿ ಕುಸುಮ ಸಂಜಯನ ಡೈವೋರ್ಸ್ ಕೇಸ್ ಬಂದಿದ್ಜು

ಏನಮ್ಮಾ ಎರಡು ತಿಂಗಳಿದ್ದ ಕೇಸನ್ನು ಎರಡು ದಿನಕ್ಕೆ ಹಾಕಿಸಿಕೊಂಡಿದ್ಜೀರಾ ನಿಮ್ಮ ಅಭಿಪ್ರಾಯವೇನೆಂದು ನ್ಯಾಯಾಧೀಶರು ಪ್ರಶ್ನಿಸಲು 

ಕುಸುಮ ಡೈವೋರ್ಸ್ ನೀಡಲು ತನಗೆ ಒಪ್ಪಿಗೆ ಇದೆಯೆಂದು ಡೈವೋರ್ಸ್ ಆಗಬಹುದೆಂದು ಹೇಳಿದ ತಕ್ಷಣ ಅಳು ತಡೆಯಲು ಆಗುವುದಿಲ್ಲ ಅತ್ತರೆ ನ್ಯಾಯಾಧೀಶರು ಅನುಮಾನ ಪಟ್ಟು ಪುನಃ ಕೇಸನ್ನು ಮುಂದಕ್ಕೆ ಹಾಕಿ ಸಮಯ ನೀಡಿದರೆ ತನ್ನ ಗಂಡ ಇನ್ನೆಲ್ಲಿ ವಿಷ ಕುಡಿಯುತ್ತಾನೋ ಎಂಬ ಹೆದರಿಕೆಯಿಂದ ಕಷ್ಟಪಟ್ಟು ದುಃಖವನ್ನು ಅದುಮಿಹಿಡಿದಿದ್ದು ಕೋರ್ಟಿನಿಂದ ಹೊರ ಬಂದ ತಕ್ಷಣ ಬಿಕ್ಕಿ ಬಿಕ್ಕಿ ಅಳುತ್ತಿರುವಾಗ 

ಅವರಮ್ಮನು ಕುಸುಮಳ ತಲೆ ಸವರುತ್ತಾ ಸಮಾಧಾನ ಮಾಡಿಕೊಳ್ಳಮ್ಮಾ ಎಷ್ಟು ಋಣವೋ ಅಷ್ಟೇ ಮಗಳೇ ನೀನಿನ್ನು ಅಳಬೇಡಾ ಮಕ್ಕಳ ಭವಿಷ್ಯದ ಕಡೆ ನೋಡು ಎಂದು ಹೇಳಿ ಮನೆಗೆ ಬರುತ್ತಾರೆ


ಸಂಜಯನು ತನ್ನ ಪ್ಲಾನ್ ವರ್ಕ್ ಔಟ್ ಆಯಿತೆಂದು ಬಹಳ ಖುಷಿಯಾಗಿದ್ದು ಕುಸುಮಳನ್ನು ಮಾತನಾಡಿಸಲೂ ಹೋಗುವುದಿಲ್ಲ ತಕ್ಷಣ ಗಗನಳಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ಕಂಗ್ರಾಟ್ಸ್ ಸಂಜಯ್ ಈಗ ನಾನು ಸ್ವಲ್ಪ ಬ್ಯುಸಿ ಇದ್ದೇನೆ ಆದಷ್ಟೂ ಬೇಗ ಮೀಟ್ ಮಾಡೋಣವೆನ್ನುತ್ತಾಳೆ

ಇದೇನು ಗಗನ ಮೀಟ್ ಮಾಡೋಣವೆನ್ನುತ್ತಿದ್ದೀಯಾ ಮದುವೆಯಾಗೋಣವೆಂದು ಹೇಳಲೇ ಇಲ್ಲಾ

ನಾವಿಬ್ಬರೂ ಮೀಟ್ ಮಾಡಿ ಮಾತಾಡೋಣ ಎಲ್ಲವನ್ನೂ ಫೋನಿನಲ್ಲಿ ಹೇಳುವುದಕ್ಕೆ ಆಗುವುದಿಲ್ಲ 

ಓಕೆ ಡಿಯರ್ ಎಂದು ಫೋನ್ ಕಟ್ ಮಾಡುತ್ತಾನೆ


ಮಗನ ವರ್ತನೆಯಿಂದ ಸಂಜಯನ ತಂದೆಯ ಮನಸ್ಸಿಗೆ ವಿಪರೀತ ಬೇಸರವಾಗಿದ್ದು ಮನೆಗೆ ಬರದೆ ಕುಸುಮಳ ಮನೆಯಲ್ಲೇ ಇರುತ್ತಾರೆ

ರಾತ್ರಿ ಹತ್ತು ಗಂಟೆಯ ಸಮಯದಲ್ಲಿ ಟಿವಿ ನೋಡುತ್ತಿರುವಾಗ ಬ್ರೇಕಿಂಗ್ ನ್ಯೂಸ್ ನಲ್ಲಿ ನಗರದ ಕುಖ್ಯಾತ ರೌಡಿ ಗುರಿರಾಜನು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪ್ರಸಾರವಾಗುತ್ತಿರುವುದನ್ನು ನೋಡಿದ ಸಂಜಯನ ತಂದೆ ಗಾಬರಿಯಿಂದ ಬೀಗರೇ ಬೇಗ ಬನ್ನಿ ಇಲ್ಲಿ ಎಂದು ಕರೆದು ಕುಸುಮಾ ಬೇಗ ಬಂದು ನ್ಯೂಸ್ ನೋಡು ನನಗೆ ಹೊಡೆದಿದ್ದ ರೌಡಿ ವಿಷ ಕುಡಿದು ಸತ್ತು ಹೋಗಿದ್ದಾನಂತೆ ಎನ್ನಲು ಎಲ್ಲರೂ ಗಾಬರಿಯಿಂದ ಇವನಿಗೇನಾಯಿತು ಎಂದುಕೊಂಡರೂ

ಸಂಜಯನ ತಂದೆ ಇದು ಆತ್ಮಹತ್ಯೆಯಲ್ಲಾ ಕೊಲೆ ಎನ್ನುತ್ತಾರೆ

ಅದು ಹೇಗೆ ಹೇಳುತ್ತೀರಾ ರಘುರಾಂರವರೇ ಎಂದು ಕುಸುಮಳ ಅಪ್ಪ ಪ್ರಶ್ನಿಸಲು 

ಇದೆಲ್ಲವೂ ರಮೇಶ ದೇಸಾಯಿಯ ಕೆಲಸ ನನಗೆ ಹೊಡೆಯಲು ಆ ರೌಡಿಗೆ ಸುಪಾರಿ ಕೊಟ್ಟಿದ್ದನ್ನು ಆ ರೌಡಿ ಪೋಲೀಸ್ ರವರ ಬಳಿ ಬಾಯಿ ಬಿಟ್ಚಿದ್ದಾನೆ ಪೋಲೀಸ್ ರವರು ತನ್ನನ್ನು ಅರೆಸ್ಟ್ ಮಾಡುತ್ತಾರೆಂದು ಅವನನ್ನೇ ಮುಗಿಸಿಬಿಟ್ಟಿದ್ದಾನೆ ನರ ರಾಕ್ಷಸ ಎನ್ನುವ ವೇಳೆಗೆ

ರೌಡಿ ಗುರಿರಾಜನು ಆತ್ಮಹತ್ಯೆ ಮಾಡಿಕೊಂಡಿಲ್ಲ ಯಾರೋ ಕೊಲೆ ಮಾಡಿದ್ದಾರೆಂಬ ಮೇಲ್ನೋಟಕ್ಕೆ  ಶಂಕೆಯಾಗಿದೆ ತನಿಖೆ ಪೂರ್ಣಗೊಂಡ ನಂತರ ನಿಜಾಂಶ ತಿಳಿಯುತ್ತದೆಂದು ಪುನಃ ಟಿವಿಯಲ್ಲಿ ಬರುತ್ತಿರುವುದನ್ನು ಕಂಡ ಸಂಜಯನ ತಂದೆ ನೋಡಿದ್ರಾ ನಾನು ಹೇಳಲಿಲ್ಲವಾ ಎನ್ನುತ್ತಾರೆ.

ನಿಮ್ಮ ಮಾತು ನಿಜ ಬೀಗರೇ ಎಂದು ಮಾತು ಮುಂದುವರೆಸುತ್ತಾರೆ.


ಮಾರನೇ ದಿನ ಸಂಜೆ ಐದು ಗಂಟೆ ಸಮಯದಲ್ಲಿ ಪೋಲೀಸ್ ಇನ್ಸ್ ಪೆಕ್ಟರ್ ರವರು ದೆಫೇದಾರರನ್ನು  ಕರೆದು ಆತ್ಮಹತ್ಯೆ ಮಾಡಿಕೊಂಡ ರೌಡಿ ಮನೆಗೆ ಹೋಗೋಣವೆಂದು ಹೇಳಿ ಇನ್ಸ್ ಪೆಕ್ಟರ್ ರವರು ವಾಹನದಲ್ಲಿ ಕುಳಿತುಕೊಳ್ಳುತ್ತಾರೆ

ದೆಫೇದಾರರು ರೌಡಿಯ ಕಡತವನ್ನು ಹುಡುಕಿ ಕೈಯ್ಯಲ್ಲಿ ಹಿಡಿದು ವಾಹನದಲ್ಲಿ ಕುಳಿತುಕೊಂಡ ನಂತರ 

ರೌಡಿ ಗುರಿರಾಜನ ಮನೆಗೆ ನಡೆಯಪ್ಪಾ ಎಂದು ಚಾಲಕನಿಗೆ ಹೇಳಲು 

ಚಾಲಕನು ವಾಹನವನ್ನು ಸೀದಾ ಮೃತನಾದ ರೌಡಿಯ ಮನೆಯ ಮುಂದೆ ನಿಲ್ಲಿಸಿದಾಗ

ಇನ್ಲ್ ಪೆಕ್ಟರ್ ವಾಹನದಿಂದ ಇಳಿದು

ರೌಡಿಯ ಮನೆಯ ಬಾಗಿಲನ್ನು ಲಾಠಿಯಿಂದ ಬಡಿದಾಗ

ರೌಡಿಯ ಹೆಂಡತಿ ಬಾಗಿಲು ತೆಗೆದು ಇನ್ಸ್ ಪೆಕ್ಟರ್ ನಿಂತಿರುವುದನ್ನು ನೋಡಿ ಗಾಬರಿಯಾಗಿ ಇದೇನ್ ಸಾರ್ ನನ್ನ ಗಂಡ ಸತ್ತಮೇಲೂ ಹುಡುಕಿಕೊಂಡು ಬಂದಿದ್ದೀರಿ ನನ್ನ ಗಂಡ ಸತ್ತು ದೆವ್ವವಾಗಿ ಏನಾದರೂ ಕೊಲೆ ಕಳ್ಳತನ ಮಾಡಿದ್ದಾನಾ?

ನಿನ್ನ ಗಂಡನದ್ದು ಆತ್ಮಹತ್ಯೆಯಲ್ಲಾ ಕೊಲೆ ಎಂದು ಮಾಹಿತಿ ಬಂದಿದೆ 

ಹೌದಾ ಸಾರ್ ಯಾರ್ ಸಾರ್ ನನ್ನ ಗಂಡನನ್ನು ಕೊಂದಿದ್ದು?

ಏಯ್ ನಾಟಕವಾಡಬೇಡಾ ನಿನ್ಮ ಗಂಡನು ಕುಡಿಯುವ ಹೆಂಡಕ್ಕೆ ವಿಷ ಬೆರೆಸಿ ಕುಡಿಸಿ ಅವನನ್ನು ಕೊಂದು ಈಗ ಏನೂ ಗೊತ್ತಿಲ್ಲದಂತೆ ನಟಿಸುತ್ತಿದ್ದೀಯಾ?

ಇಲ್ಲಾ ಸಾರ್ ನನಗೇನೂ ಗೊತ್ತಿಲ್ಲಾ ಸಾರ್ ನಾನೇಕೆ ನನ್ನ ಗಂಡನನ್ನು ಕೊಲ್ಲಲಿ?

ದಿನವೂ ಅವನು ಕುಡಿದುಬಂದು ತೊಂದರೆ ಕೊಡುತ್ತಿದ್ದ ಅವನಿಂದ ನಿನಗೆ ನೆಮ್ಮದಿ ಇರಲಿಲ್ಲ ಅದಕ್ಕೆ ಅವನನ್ನು ಮುಗಿಸಿದೆ ಅಲ್ಲವಾ?

ಇಲ್ಲಾ ಸಾರ್ ನನ್ನ ಮಕ್ಕಳಾಣೆಗೂ ನಾನು ನನ್ನ ಗಂಡನನ್ನು ಕೊಂದಿಲ್ಲಾ ಸಾರ್ ಎಂದು ಗೋಗರೆಯುತ್ತಾಳೆ

ಛೀ ಪಾಪೀ ಬಾಯಿಮುಚ್ಚು ಮಕ್ಕಳ ಮೇಲೇಕೆ ಪ್ರಮಾಣ ಮಾಡುತ್ತೀಯಾ?ನಿನ್ನ ಮಕ್ಕಳು ಚೆನ್ನಾಗಿರಬಾರದಾ?

ನೀನು ಆಣೆ ಪ್ರಮಾಣ ಮಾಡಿದರೆ ನಾನು ನಂಬುವುದಿಲ್ಲ ನಿಜ ಹೇಳು ಎಂದು ಗದರಿದಾಗ

ನಾನು ನಿಜಾನೇ ಹೇಳುತ್ತಿದ್ದೇನೆ ಸಾರ್ ರಮೇಶ ದೇಸಾಯಿಯಿಂದ ಜೈಲಿಗೆ ಹೋಗುವಂತಾಯಿತೆಂದು ದಿನವೂ ಗೋಳಾಡುತ್ತಿದ್ದ ಸಾರ್ ಕಡೆಗೆ ಬೇಸರವಾಗಿ ತಾನು ಕುಡಿಯುತ್ತಿದ್ದ ಹೆಂಡಕ್ಕೆ ವಿಷ ಬೆರೆಸಿಕೊಂಡು ಸತ್ತುಹೋದ ಸಾರ್  ಎಂದು ಹೇಳುತ್ತಾಳೆ 

ರೀ ದೆಫೇದಾರರೇ ಇವಳ ಮನೆ ಸರ್ಚ್ ಮಾಡ್ರೀ ಏನಾದರೂ ಕ್ಲೂ ಸಿಗಬಹುದು ಎನ್ನಲು 

ದಫೇದಾರರು ಸಿಬ್ಬಂದಿಯೊಡನೆ ಸರ್ಚ್ ಮಾಡಿದಾಗ ಮಂಚದ ಕೆಳಗೆ ವಿಷದ ಬಾಟಲ್ ಇರುವುದನ್ನು ನೋಡಿ ಆದನ್ನು ಕರ್ಚೀಪಿನಿಂದ ಹಿಡಿದು ಇನ್ಸ್ ಪೆಕ್ಟರ್ ಗೆ ತೋರಿಸಲು ಅದರ ಮೇಲಿನ ಫಿಂಗರ್ ಪ್ರಿಂಟ್ ಕಂಡು ಹಿಡಿಯಲು ಲ್ಯಾಬೋರೇಟರಿಗೆ ಕಳುಹಿಸಿ ಎಂದು ಹೇಳಿ ಒಂದು ಲೋಟ ನೀರು ಕೊಡಮ್ಮಾ ಬಾಯಾರಿಕೆಯಾಗುತ್ತಿದೆ ಎನ್ನಲು 

ರೌಡಿ ಪತ್ನಿ ನೀರು ತಂದುಕೊಟ್ಟಾಗ

ಅಲ್ಲೇ ಇದ್ದ ಸ್ಟೂಲ್ ಮೇಲಿಡು ಎಂದು ಹೇಳಿ ಆ ಲೋಟವನ್ನು ಕರ್ಚೀಪಿನಿಂದ ತೆಗೆದುಕೊಂಡು ನೀರನ್ನು ಹೊರಚೆಲ್ಲಿ ಲೋಟ ಮಾತ್ರ ತೆಗೆದುಕೊಂಡು  

ನಿನ್ನ ಗಂಡ ಸತ್ತ ದಿನ ನಿನ್ನ ಮನೆಗೆ ಯಾರ್ಯಾರು ಬಂದಿದ್ದರು?

ಆ ದಿನ ದೊಡ್ಡ ಮನುಷ್ಯರು ಬಂದಿದ್ದರು

ದೊಡ್ಡ ಮನುಷ್ಯರೆಂದರೆ ಯಾರು?

ಅದೇಯಾ ಅದೆಲ್ಲೋ ಚಿಕ್ಕಬಳ್ಳಾಪುರದ ಕಡೆ ದೊಡ್ಡ ನೂರಾರು ಎಕರೆ ಜಮೀನು ಇದೆಯಲ್ಲಾ ಅವರೇ ರಾತ್ರಿ ಒಂಬತ್ತು ಗಂಟೆಗೆ ಬಂದು ಅರ್ಧ ಗಂಟೆ ನನ್ನ ಗಂಡನ ಜೊತೆ ರೂಮಿನಲ್ಲಿ ಮಾತಾಡುತ್ತಿದ್ದು ನಂತರ ಹೋದರು ಆಗಲೇ ನನ್ನ ಗಂಡ ಹೆಂಡ ಕುಡಿದಿದ್ದ ಅವರೇ ನನ್ನ ಗಂಡನಿಗೆ ವಿಷ ಬೆರೆಸಿ ಹೆಂಡ ಕುಡಿಸಿದ್ದಾರೆ ಎನ್ನಲು

ಅವರ ಹೆಸರೇನು?

ಅದೇನೋ ದೇಸಾಯಿ ಅಂತೆ ಸಾರ್

ಆಗ ದೆಫೇದಾರರು ಸಾರ್ ಆ ದೇಸಾಯಿ ಬೇರಾರೂ ಅಲ್ಲ ದೊಡ್ಡ ಎಸ್ಟೇಟ್ ಓನರ್ ರಮೇಶ ದೇಸಾಯಿ

ಹೌದು ಸ್ವಾಮಿ ರಮೇಶ್ ದೇಸಾಯಿ 

ರೀ ಅವನು ಕೋಟ್ಯಾಧೀಶ ಇವನ ಮನೆಗೆ ಬಂದು ವಿಷ ಕುಡಿಸುತ್ತಾನೆಂದರೆ ನಂಬುವುದಕ್ಕೆ ಆಗುತ್ತೇನ್ರೀ?

ಸಾರ್ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಏನು ಬೇಕಾದರೂ ಮಾಡಬಹುದಲ್ಲಾ ಸಾರ್

ಅವನನ್ನು ವಿಚಾರಿಸೋಣವೆಂದು ಠಾಣೆಗೆ ವಾಪಸ್ ಬರುತ್ತಾರೆ.

ಒಂದೆರಡು ದಿನ ಕಳೆದ ನಂತರ ದೆಫೇದಾರರು ಇನ್ಸ್ ಪೆೆಕ್ಟರ್ ಬಳಿ ಬಂದು ಫ್ಲೋರೆನ್ಸಿಕ್   ರಿಪೋರ್ಟ್ ಬಂದಿದೆ  ಸಾರ್ ಅದರಲ್ಲಿ ಮೂರನೇ ವ್ಯಕ್ತಿಯ ಕೈ ಬೆರಳುಗಳ ಗುರುತಿದೆ ಎನ್ನಲು

ಯಾರವನು ಮೂರನೇ ವ್ಯಕ್ತಿ ಅದನ್ನು ಕಂಡು ಹಿಡಿಯಬೇಕು ನೀವು ಆ ಮನೆಯ ಮೇಲೆ ಕಣ್ಣಿಟ್ಟಿರಿ ಎಂದು ಹೇಳುತ್ತಾರೆ


ಮಾರನೇ ದಿನ ಸಂಜೆ ನಾಲ್ಕು ಗಂಟೆ ಸಮಯದಲ್ಲಿ ಗಗನಳ ಅಪ್ಪ ಕಛೇರಿಯಲ್ಲಿದ್ದಾಗ 

ಪೋಲೀಸ್ ಇನ್ಸ್ ಪೆಕ್ಟರ್ ಫೋನ್ ಮಾಡಿ ನಿಮ್ಮನ್ನು ವಿಚಾರಣೆ ಮಾಡಬೇಕು ಎನ್ನಲು

ಯಾವ ವಿಚಾರವಾಗಿ ನನ್ನನ್ನು ಪ್ರಶ್ನಿಸಬೇಕಾಗಿದೆ?

ಗುರಿರಾಜ ರೌಡಿದೂ ಆತ್ಮಹತ್ಯೆಯಲ್ಲಾ   ಕೊಲೆಯಾಗಿದ್ದಾನೆಂದು ಅನುಮಾನ ಬಂದಿದೆ 

ನಿಮಗೆ ಅನುಮಾನ ಬಂದರೆ ನಾನೇನು ಮಾಡಲಿ? 

ಅವನು ಯಾರೋ ರೌಡಿ ಅವನ ಸಾವಿಗೂ ನನಗೂ ಏನ್ರೀ ಸಂಬಂಧ? 

ನಿಮಗೆ ಸಂಬಂಧ ಕಲ್ಪಿಸುತ್ತಲ್ಲಾ ನಿಮ್ಮ ಹೇಳಿಕೆ ಬೇಕು 

ಅವನೆಲ್ಲೋ ಸತ್ತಿದ್ದಾನೆ   ನನ್ನ ಹೇಳಿಕೆ ಏಕೆ ಬೇಕ್ರೀ ಇನ್ಸ್ ಪೆಕ್ಟರ್? ನೋಡಿ ನೀವು ಇದೇ ರೀತಿ ನನಗೆ ತೊಂದರೆ ಕೊಡುತ್ತಿದ್ದರೆ ನಿಮ್ಮ ಮೇಲೆ ಹೈಯ್ಯರ್ ಆಫೀಸರ್ ಗೆ ಕಂಪ್ಲೇಂಟ್ ಮಾಡಬೇಕಾಗುತ್ತದೆ ಅದಕ್ಕೆ ಅವಕಾಶ ಮಾಡಿಕೊಳ್ಳಬೇಡ್ರೀ ಎಂದು ಫೋನ್ ಕಟ್ ಮಾಡುತ್ತಾರೆ

ಎಲ್ಲವೂ ಇವನಿಂದಲೇ ಆಗುತ್ತಿದೆ ಆದರೂ ಇವನು ಸಿಕ್ಕಿಕೊಳ್ಳುತ್ತಿಲ್ಲ ಹೇಗಾದರೂ ಮಾಡಿ ಇವನನ್ನು ಲಾಕ್ ಮಾಡಬೇಕೆಂದುಕೊಳ್ಳುತ್ತಾರೆ


ಮುಂದುವರೆಯುತ್ತದೆ


ಡಾ. ಎನ್ ಮುರಳೀಧರ್ 

ವಕೀಲರು ಹಾಗೂ ಸಾಹಿತಿ

ನೆಲಮಂಗಲ


Image Description

Post a Comment

0 Comments