✍️
ಮೂಕ ಮಹಾಜನಗಳೇ !
______
ಈ ಕಾಲದ ಮೂಕ ಮಹಾಜನಗಳೇ,
ಎಲ್ಲಿಯ ತನಕ ಸುಮ್ಮನಾಗಿರುವಿರಿ ?
ಏನನ್ನಾದರೂ ಮಾತನಾಡಿ !
ಮಾತನಾಡಿ,
ನೀವು ಜೀವಿಸುತ್ತಿದ್ದೀರಿ ಅಂತಾದರೂ ಮಾತನಾಡಿ,
ಸ್ವಲ್ಪ ನಿಮಗಾಗಿ ,
ಇನ್ನು ಸ್ವಲ್ಪ ನಿಮ್ಮ ಮುಂದಿನ ಪೀಳಿಗೆಯವರಿಗಾಗಿ
ಮಾತನಾಡಿ,
ನಿಮ್ಮ ಗುಲಾಮಗಿರಿಯ ಮತ್ತು ನಿಮ್ಮ ನೋವುಗಳ
ದಾಖಲೆಗಳ ಪುಟ ತೆರೆಯಿರಿ,
ಮಾತನಾಡಿ
ನಿಮ್ಮಯ ಸ್ವಾತಂತ್ರ್ಯಕ್ಕಾಗಿ ಮಾತನಾಡಿ.
ಈ ಕಾಲದ ಮೂಕ ಮಹಾಜನಗಳೇ, ಮಾತನಾಡಿ ,
ನಿಮ್ಮ ಅಸ್ತಿತ್ವಕ್ಕಾದರೂ ಮಾತನಾಡಿ.
@ ಶ್ರೀ ಅರ್ಜುನ್ ನಿಡಗುಂದೆ.
ಸದಲಗಾ.
🌹ಜೈ ಭೀಮ್ ಜೈ ಭಾರತ್💐

.gif)

.gif)


0 Comments