ಹೃದಯ

 ಹೃದಯ 


ಹೃದಯ ನೀನಿಲ್ಲದೆ ಏನಿದೆ?

ಈ ಜೀವಕ್ಕೆ ನಿನೇ ಸರ್ವಸ್ವವಾಗಿರುವೆ 

ಜೀವದ ಸೃಷ್ಟಿಯ ಮೊದಲ ಅಂಗವು 

ಜಗದ ಒಲವಿಗೆ ನಿನೇ ಕಾರಣಕರ್ತೃವು 

ನಿನ್ನ ಬಡಿತವೇ ಉಸಿರಿನ ತಾಣವು 

ನೀನಿಲ್ಲದೆ ಹೋದರೆ ಜಗವು ಶೂನ್ಯವು 



ಹೃದಯದ ಬಡಿತ ಒಲವಿನ ಮಿಡಿತ 

ವಿಷ್ಣುವಿನ ಹೃದಯ ಲಕ್ಷ್ಮಿಯ ನಿವಾಸ 


ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು 

ಮುಷ್ಠಿಯಷ್ಟು ನೀನಿರುವೆ ಜೀವಕ್ಕೆ ಆಧಾರವಾಗಿರುವೆ 

ಜನನ -ಮರಣಗಳ ನಡುವೆ ನಿನ್ನದೆ ಸಂಚಲನ 

ಆಮ್ಲಜನಕವನ್ನು ದೇಹಕ್ಕೆ ಸಾಗಿಸುವೆ 

ದೇಹದ ರಕ್ತವನ್ನು ಶುದ್ಧೀಕರಣ ಮಾಡುವೆ 

ಜೀವಿಗಳ ದೇಹವನ್ನು ಪರಿಶುದ್ಧಗೊಳಿಸುವೆ. 


ಭಾಗ್ಯ ಎಲ್.ಆರ್. ಶಿವಮೊಗ್ಗ

Image Description

Post a Comment

0 Comments