ನಮಿಸುತ್ತೇನೆ

 ನಮಿಸುತ್ತೇನೆ.


ನಾನು ಆಗಾಗ ಹೆದರುತ್ತೇನೆ

ಹರಿವ ನದಿಯ ಹಾಗೆ

ಜುಳು ಜುಳು ನಾದದಂತೆ

ಇಳುಕಿಗೆ ಬಳುಕುತ ತುಳುಕುತ.


ನಾನು ಆಗಾಗ ಸೋಲುತ್ತೇನೆ

ತೆನೆ ಹೊತ್ತ ಫಲದಂತೆ

ಎಳೆ ಬಿಸಿಲ ಹಿತದಂತೆ

ಹರಿವ ನೀರು ನಿಲ್ಲದಂತೆ.


ನಾನು ಆಗಾಗ ಗೆಲ್ಲುತ್ತೇನೆ

ಹಸುಳೆ ನಗುವ ನಗುವಲ್ಲಿ

ತಾಯಿ ಪ್ರೀತಿ ನೀಡುವಲ್ಲಿ

ಫಲವ ನೀಡುವ ಮಣ್ಣಲ್ಲಿ.


ನಾನು ಆಗಾಗ ಅಳುತ್ತೇನೆ

ಮಾಡಿದ ಪಾಪದ ಕೆಲಸದಲ್ಲಿ

ನೋಡಿದ ಕೆಡುಕು ಕಣ್ಣಲ್ಲಿ

ಎಲ್ಲವೂ ನೆನೆದು ಮಳೆಯಲ್ಲಿ.


ನಾನು ಆಗಾಗ ನಮಿಸುತ್ತೇನೆ

ಒಳಿತು ಮಾಡುವ ಕೈಗಳಿಗೆ

ಸಹಾಯ ಮಾಡುವ ಮನಗಳಿಗ

ಕಪಟ ಇರದ ಭಾವನೆಗಳಿಗೆ


ನಾನು ಆಗಾಗ ಮೌನಿಯಾಗುತ್ತೆನೆ

ಎದ್ದ ದೊಂಬಿಯ ಕಂಡು

ಖೇಡು ಮಾಡುವವರ ಕಂಡು

ದುಡಿಯದೆ ತಿನ್ನುವವರ ಕಂಡು.


ಶಿರೂರ ಶ್ರೀಶೈಲ...


Image Description

Post a Comment

0 Comments