"ಸಂವಿಧಾನ ಪೀಠಿಕೆಯ ಪಠಣವು ಮನನˌ ನಮನವಾಗಲಿ": ಗಸ್ತಿ*



  *ರಾಯಬಾಗ*:ಸಂವಿಧಾನದ ಆಶಯಗಳ ಹೊನ್ನ ಕಣಜವಾಗಿರುವ ಭಾರತೀಯ ಸಂವಿಧಾನ ಪೀಠಿಕೆಯ ಪಠಣವು ನಮ್ಮೆಲ್ಲರಿಗೂ ಮನನವಾದರೆ ಪ್ರಜಾಪ್ರಭುತ್ವ ತತ್ವಗಳಿಗೆ ನಿಜಕ್ಕೂ ನಮನ ಸಲ್ಲಿಸಿದಂತಾಗುತ್ತದೆಯೆಂದು ಸಾವನಕುಮಾರ ಗಸ್ತಿ ಹೇಳಿದರು. ಅವರು ಸಮೀಪದ ಅಥಣಿ ತಾಲೂಕಿನ ಚಿಕ್ಕೂಡ ಸರಕಾರಿ ಪ್ರೌಢ ಶಾಲೆಯಲ್ಲಿ "ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ" ಅಂಗವಾಗಿ "ಸಂವಿಧಾನ ಓದು" ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಭಾರತ ಸಂವಿಧಾನ ಅಪೇಕ್ಷಿಸುವ ಬಹುತ್ವ ಸಂಸ್ಕೃತಿ ˌಸೋದರತ್ವ ˌಸಹಬಾಳ್ವೆˌಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಮನಮನಗಳಿಗೆ ಮುಟ್ಟಿಸುವ ಅಪರೂಪದ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮದ ಉದ್ದೇಶವನ್ನು ಸಾಕಾರಗೋಳಿಸೋಣವೆಂದು ಆಶಿಸಿದರು. ಮುಖ್ಯೋಪಾಧ್ಯಾಯ ರವೀಂದ್ರ ಪಾಟೀಲ ಮಾತನಾಡಿ "ಸಂವಿಧಾನ ಪೀಠಿಕೆಯ ವಾಚನ ನಿತ್ಯೋತ್ಸವವಾಗಬೇಕು. ಅದರ ಗರ್ಭದಲ್ಲಿರುವ ಮೌಲ್ಯಗಳು ನಮ್ಮ ಜೀವಕೋಶಗಳಾಗಬೇಕೆಂದು ಅರುಹಿದರು.ಸಮಾಜ ವಿಜ್ಞಾನ ಶಿಕ್ಷಕ ಶಂಕರ ಕಾಂಬಳೆ ಕಾರ್ಯಕ್ರಮ ಸಂಘಟಿಸಿದ್ದರು. ವಿದ್ಯಾರ್ಥಿಗಳು ಬಣ್ಣಬಣ್ಣದ ಹಾಳೆಗಳ ಮೇಲೆ ಸಂವಿಧಾನ ಪೀಠಿಕೆಯನ್ನು ಸಿಂಗರಿಸಿಕೊಂಡು ಬಂದು ಅಚ್ಚುಕಟ್ಟಾಗಿ ವಾಚಿಸಿದರು.ಶ್ರೀಕಾಂತ ಹಳ್ಳೂರˌಮಹಾದೇವ ಕಳ್ಳಿಗುದ್ದಿ ˌಸುಮಿತ್ರಾ ಮಗೆಣ್ಣವರ ˌಪಾರಿಸ ಬಳೋಜˌಜ್ಯೋತಿ ಮಹಾಬಳಶೆಟ್ಟಿˌಲಕ್ಷ್ಮೀ ಮಗದುಮ್ಮˌ ಸಾವಿತ್ರಿ ಮಾಳಿˌಅಕ್ಷಯ ಜಗದಾಳˌಸಾಕ್ಷಿ ಮಠಪತಿ ಉಪಸ್ಥಿತರಿದ್ದರು. ಕಾರ್ಯಕ್ರಮ ಅರ್ಥಪೂರ್ಣವಾಗಿ ಯಶಸ್ಸು ಆಲಂಗಿಸಿಕೊಂಡಿತು.


*ವರದಿ:ಡಾ.ಜಯವೀರ ಎ.ಕೆ.*

       *ಖೇಮಲಾಪುರ*

Image Description

Post a Comment

0 Comments