ಪಾದ

 

ಎತ್ತಲಂತ ಹುಡುಕಲಯ್ಯ

ಆ ಜ್ಞಾನಿಯ ಪಾದವ ಕಲ್ಲು ಮುಳ್ಳು

ಗುಡಿಯೊಳಗೆ ಇಲ್ಲದಂತವ ಪಾದವ


ಮಾನವ ರೂಪವ ತಾಳಿ ಬಂದಂತ ಪಾದ

ದಲಿತರ ಭಾಸ್ಕರನಾಗಿ ಬೆಳದಂತ ಪಾದ

ಅಂತ ಪಾದ ಎಲ್ಲೊ ಸಿಗದಂತಾಗಿದೆ


ಸಾವಿರಾರು ಕನಸು ಕಟ್ಟಿಕೊಂಡು

ಬಂದಂತ ಪಾದ ಆ ಕನಸುಗಳೆಲ್ಲ

ನನಸು ಮಾಡಿದ ಪಾದ


ಹಗಲು ಇರಳು ಎನ್ನದೆ ಈ

ದಲಿತರಿಗಾಗಿ ಈ ರಾಷ್ಟವೆಲ್ಲಾ

ಸುತ್ತಿ ಬಂದ ಪಾದ


ರಾಮಜೀ ಭೀಮಬಾಯಿ ಪಾದಗಳೆಲ್ಲಾ

ಸೇರಿ ಎರಡಾದಂತ ಪಾದ ಅದು

ಬಾಬಾ ಸಾಹೇಬ ಅಂಬೇಡ್ಕರರ ಪಾದ


ರಚನೆ :ಅಮರ ಎನ್ ಕಾಂಬಳೆ

ಬಿರಡಿ

Image Description

Post a Comment

0 Comments