ಸ್ಕೌಟ್ ಮತ್ತು ಗೈಡ್ ಶಿಕ್ಷಕರುಗಳಿಗೆ ಜಿಲ್ಲಾ ಮಟ್ಟದ ದೇಶ ಭಕ್ತಿ ಗೀತ ಗಾಯನ ಸ್ಪರ್ಧೆ
ಬೆಳಗಾವಿ ಜಿಲ್ಲೆಯ ಎಲ್ಲ ಸ್ಕೌಟ್ ಮತ್ತು ಗೈಡ್ ಶಿಕ್ಷಕರುಗಳಿಗೆ ತಿಳಿಸುವುದೇನೆಂದರೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕನಾ೯ಟಕ ರಾಜ್ಯ ಸಂಸ್ಥೆಯ ಸುತ್ತೋಲೆಯಂತೆ ಮತ್ತು. ರಾಜ್ಯ ಮುಖ್ಯ ಆಯುಕ್ತರು ಶ್ರೀ ಪಿ. ಜಿ. ಆರ್. ಸಿಂಧ್ಯ ರವರ ಮಾಗ೯ದಶ೯ನದಂತೆ ಬೆಳಗಾವಿ ಜಿಲ್ಲೆಯ ಕಬ್ ಮಾಸ್ಟರ್, ಫ್ಲಾಕ್ ಲೀಡರ್,ಸ್ಕೌಟ್ ಮಾಸ್ಟರ, ಗೈಡ್ ಕ್ಯಾಪ್ಟನ್, ರೋವರ್ ಸ್ಕೌಟ್ ಲೀಡರ್ ಮತ್ತು ರೇಂಜರ್ ಲೀಡರ್ ಗಳಿಗೆ ಜಿಲ್ಲಾ ಮಟ್ಟದ ದೇಶ ಭಕ್ತಿ ಗೀತ ಗಾಯನ ಸ್ಪರ್ಧೆಯನ್ನು ಏಪ೯ಡಿಸಲಾಗಿದೆ. ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರು ತಾವು ಹಾಡುವ ಹಾಡನ್ನು ವಿಡಿಯೋ ಮಾಡಿ ಮೇಲಿನ ಪೋಸ್ಟರ್ ನಲ್ಲಿ ತಿಳಿಸಿದ ದೂರವಾಣಿ ಸಂಖ್ಯೆಗೆ ಟೆಲಿಗ್ರಾಂ ಆಪ್ ಮೂಲಕ ಕಳುಹಿಸದರೆ ಅವುಗಳಲ್ಲಿ ಪ್ರತಿ ತಾಲೂಕಿಗೆ ಒಂದು ವಿಡಿಯೋವನ್ನು ಆಯ್ಕೆ ಮಾಡಿ ದಿ. 25.09.2023 ರಂದು ಆಯೋಜಿಸುವ ಜಿಲ್ಲಾ ಮಟ್ಟದ ಕಾಯ೯ಕ್ರಮದಲ್ಲಿ ನೇರವಾಗಿ ಹಾಡಲು ಅವಕಾಶ ಇರುತ್ತದೆ. ಆದ್ದರಿಂದ ಬೆಳಗಾವಿ ಜಿಲ್ಲೆಯ ಕಬ್ ಮಾಸ್ಟರ್, ಫ್ಲಾಕ್ ಲೀಡರ್, ಸ್ಕೌಟ್ ಮಾಸ್ಟರ, ಗೈಡ್ ಕ್ಯಾಪ್ಟನ್, ರೋವರ್ ಸ್ಕೌಟ್ ಲೀಡರ್ ಮತ್ತು ರೇಂಜರ್ ಲೀಡರ್ ಗಳು ವಿಡಿಯೋವನ್ನು ದಿ. 18.09. 2023 ರೊಳಗೆ ಕಳುಹಿಸಿಕೊಡಲು ತಿಳಿಸಿದೆ. ಜಿಲ್ಲಾ ಕಾಯ೯ದಶಿ೯ಗಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಬೆಳಗಾವಿ. ಹೆಚ್ಚಿನ ಮಾಹಿತಿಗಾಗಿ 9591957083 8197440796 ಸಂಪರ್ಕಿಸಿ
ವರದಿ :ಡಾ. ವಿಲಾಸ್ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments