ಸ್ಥಳೀಯ ಸಂಸ್ಥೆಯ ಸಿಆರ್ ಪಿಗಳಿಗೆ ಮಾಸಿಕ ಕನಿಷ್ಠ ವೇತನ ನಿಗದಿಪಡಿಸಲು ಮನವಿ

 ಸ್ಥಳೀಯ ಸಂಸ್ಥೆಯ ಸಿಆರ್ ಪಿಗಳಿಗೆ ಮಾಸಿಕ ಕನಿಷ್ಠ ವೇತನ ನಿಗದಿಪಡಿಸಲು ಮನವಿ




ಬೆಂಗಳೂರು: ಜೂ.22: ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಸಂಸಾ ಬಯಲು ರಂಗಮಂದಿರದಲ್ಲಿ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಾದ ಮಹಾನಗರ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಮತ್ತಿತರರ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ಪ್ರತಿಭಟನೆ ನಡೆಸಿದರು.


ಇತ್ತೀಚೆಗೆ 15.06.2026ರಂದು ರಾಷ್ಟ್ರೀಯ ಜೀವನೋಪಾಯ ಅಭಿಯಾನ ಬೆಂಗಳೂರು ನಿರ್ದೇಶಕರು, ಹೊರಡಿಸಿದ ಆದೇಶವನ್ನು ಹಿಂಪಡೆದು, ಮಾಸಿಕ ಕನಿಷ್ಠ ವೇತನ ನಿಗದಪಡಿಸಿ, ದೀನ ದಯಾಳ್ ಜನ್ ಆಜೀವಿಕ-ಶಹರಿ ಯೋಜನೆಯಡಿಯಲ್ಲಿ ಮುಂದುವರೆಸಬೇಕೆಂದು ನಗರದ ಅಭಿಯಾನ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.


ಇದೇ ವೇಳೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ಸಮುದಾಯ ಸಂಪನ್ಮೂಲ ಪ್ರಮುಖರಾದ ಅಂಜನಾಬಾಯಿ, ಹೇಮಾ, ವೈಶಾಲಿ, ರೇಣು, ಗಾಯತ್ರಿ, ಪ್ರಗತಿ, ಬಾನುಮತಿ, ಮತ್ತು ರಾಜ್ಯದ, ಹಲವು ಸಿಆರ್ ಪಿಗಳು ಉಪಸ್ಥಿತರಿದ್ದರು.

Image Description

Post a Comment

0 Comments