🧘 *ಯೋಗದ ದಿವ್ಯ ಪಥ* 🧘

 🧘 *ಯೋಗದ ದಿವ್ಯ ಪಥ* 🧘



ಯೋಗವು ತೋರುವುದು ಆರೋಗ್ಯದ ದಾರಿಯು,

ಮನದಲಿ ಮೂಡಿಸುವುದು ಶಾಂತಿಯ ಸಾರವು,

ಬಾಳಿಗೆ ನೀಡುವುದು ನೆಮ್ಮದಿಯ ಬೆಳಕವು,

ಜೀವನಕೆ ತುಂಬುವುದು ಚೈತನ್ಯದ ಭಾವವು.


ಉಸಿರಿನ ಲಯದಲಿ ಅರಳುವುದು ಶಕ್ತಿಯು,

ಧ್ಯಾನದ ಬಲದಿಂದ ಕರಗುವುದು ಚಿಂತೆಯು,

ಸಮತೆಯ ಬದುಕಿಗೆ ಸಿಗುವುದು ಸೌಖ್ಯವು,

ಯೋಗದ ಸಾಧನೆಯೇ ಅಮೃತದ ಭಾಗ್ಯವು.


ವಿಶ್ವವ ಬೆಸೆಯುವ ಯೋಗದ ಮಂತ್ರವು,

ಮಾನವತೆಯ ಸಾರುವ ಶಾಂತಿಯ ತಂತ್ರವು,

ಆರೋಗ್ಯ ಬದುಕಿಗೆ ದಿವ್ಯ ಸಾಧನವು,

ಯುಗಯುಗಕ್ಕೂ ಉಳಿಯಲಿ ಯೋಗದ ವೈಭವವು.



    ಕವಿ: ಡಾ. ಜಯವೀರ ಎ. ಕೆ.

           ಖೇಮಲಾಪುರ

Image Description

Post a Comment

0 Comments