ಶಿಸ್ತು, ಪ್ರಾಮಾಣಿಕತೆ ಮತ್ತು ಪರಿಶ್ರಮದಿಂದ ಗುರಿ ಸಾಧಿಸಿ:* *ಸಂಗಮೇಶ ನಾಯಿಕ*

 *ಶಿಸ್ತು, ಪ್ರಾಮಾಣಿಕತೆ ಮತ್ತು ಪರಿಶ್ರಮದಿಂದ ಗುರಿ ಸಾಧಿಸಿ:*

*ಸಂಗಮೇಶ ನಾಯಿಕ*



  

   ರಾಯಬಾಗ: ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆ ಹಾಗೂ ಕಠಿಣ ಪರಿಶ್ರಮವನ್ನು ಅಳವಡಿಸಿಕೊಂಡು ನಿರ್ದಿಷ್ಟ ಗುರಿಯತ್ತ ಸಾಗಿದರೆ ಖಂಡಿತವಾಗಿಯೂ ಯಶಸ್ಸು ಸಾಧ್ಯ ಎಂದು ಹಾರೂಗೇರಿ ಪೊಲೀಸ್ ಠಾಣೆಯ ಆರಕ್ಷಕ ಸಾಹಿತಿ  ಸಂಗಮೇಶ ನಾಯಿಕ ಹೇಳಿದರು.



  ತಾಲೂಕಿನ  ಕುಡಚಿ ಪಟ್ಟಣದ    ಶ್ರೀ ಅವಧೂತ ಶೈಕ್ಷಣಿಕ ಮತ್ತು ಸೋಶಿಯಲ್ ವೆಲ್ಫೇರ್ ಸೊಸೈಟಿಯ ಜಿ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಯಾoಡ  ಟೆಕ್ನಾಲಜಿ ಪಿ ಯು ಕಾಲೇಜಿನಲ್ಲಿ ಕಳೆದ ಗುರುವಾರ ದಿ. 18 ರಂದು ನಡೆದ ಪ್ರಸ್ತುತ  ಸಾಲಿನ ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.  ವ್ಯಾಸಂಗ   ಪೂರ್ಣಗೊಳ್ಳುವವರೆಗೂ ಜಾಲತಾಣಗಳ ಅತಿಯಾದ ಬಳಕೆಯಿಂದ ದೂರವಿದ್ದು, ಗುರುಗಳ ಮಾರ್ಗದರ್ಶನ ಹಾಗೂ ತಂದೆ-ತಾಯಿಯರ ಆಶಯಗಳಿಗೆ ಗೌರವ ನೀಡಬೇಕು. ದೇಶ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾವೇನು ಕೊಟ್ಟಿದ್ದೇವೆ ಎಂಬ ಆತ್ಮಾವಲೋಕನ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಮೂಡಬೇಕು” ಎಂದು ಕರೆ ನೀಡಿದರು.



  ದಿವ್ಯ ಸಾನಿದ್ಯ ವಹಿಸಿದ್ದ  ಪರಮಾನಂದವಾಡಿಯ ಪರಮಪೂಜ್ಯ ಶ್ರೀ ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮೀಜಿ ಅವರು, ಆಶೀರ್ವಚನ ನೀಡುತ್ತಾ, 

 ಸಂಸ್ಥೆಗಳು ಜ್ಞಾನ ಮತ್ತು ಸಂಸ್ಕಾರದ ಕೇಂದ್ರಗಳಾಗಬೇಕು. ಈ ಸಂಸ್ಥೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಜ್ಞಾನದ ಜ್ಯೋತಿಯಾಗಿ ಬೆಳಗಿ, ಉತ್ತಮ ಭವಿಷ್ಯ ರೂಪಿಸುವ ಕಾರ್ಯದಲ್ಲಿ ಮುನ್ನಡೆಯಲಿ ಎಂದು ಹಾರೈಸಿದರು.

ಸಂಸ್ಥೆಯ ಅಧ್ಯಕ್ಷರಾದ ಡಾ. ಬಿ.ಜೆ. ಪಾಟೀಲ ಅವರು ಶಿಕ್ಷಣದ ಮಹತ್ವ ಹಾಗೂ ಭವಿಷ್ಯದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿ ಕುರಿತು ಮಾತನಾಡಿ, ಜ್ಞಾನದ ಕಡೆಗೆ ಒಲವು ಬೆಳೆಸಿಕೊಂಡು ಉತ್ತಮ ನಾಗರಿಕರಾಗಿ ಹೊರಹೊಮ್ಮುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಜಿ.ಐ.ಎಸ್. ಕುಡಚಿಯ ಪ್ರಾಚಾರ್ಯರಾದ ಶ್ರೀಮತಿ ಉಜ್ವಲ ಘಾಟಗೆ ಅವರು ವಿಜ್ಞಾನ ಶಿಕ್ಷಣದ ಅಗತ್ಯತೆ, ಶಿಸ್ತು ಮತ್ತು ಸಂಯಮದ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಾಚಾರ್ಯರಾದ ವಿವೇಕಾನಂದ ಖೋತ ಅವರು ವಿದ್ಯಾರ್ಥಿಗಳು, ಪಾಲಕರು ಹಾಗೂ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಉಪಸ್ಥಿತ ಗಣ್ಯರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಟಿ ಎಂ ಕಂಬಾರ,ಅಶೋಕ ಹಾಗೂ ಪುಷ್ಪಾ ಗುಪತೆ ಉಪಸ್ಥಿತರಿದ್ದರು. 


ವರದಿ:ಡಾ. ಜಯವೀರ ಎ. ಕೆ.

        ಖೇಮಲಾಪುರ

Image Description

Post a Comment

0 Comments