*ಮನುಕುಲದ ನಂದಾದೀಪ*

 *ಮನುಕುಲದ ನಂದಾದೀಪ*




ಮಕ್ಕಳೇ ಮನುಕುಲದ ಹೊಳೆಯುವ ದೀಪ,

ಮುಗ್ಧ ನಗುವಿನಲ್ಲಿ ಮೂಡುತ್ತದೆ ಹೊಸ ರೂಪ,

ಬಿಳಿಯ ಹಾಳೆಯಂತೆ ಮನದೊಳಗಿನ ಕಲ್ಪ,

ಭವಿಷ್ಯದ ಕನಸುಗಳಿಗೆ ಅವರೇ ಸುವರ್ಣ ಸ್ತೂಪ.



ಕೂಸು ಕಂದಯ್ಯನ ಆಟದಲಿ ಮಧುರ ನಾದ,

ಮನಮನೆ ತುಂಬಿಸುವ ಸಂತಸದ ಪ್ರಮೋದ,

ನಿಷ್ಕಲ್ಮಷ ಹೃದಯದ ಪ್ರೀತಿಯ ಸಂವಾದ,

ಬದುಕಿಗೆ ಬೆಳಕಾಗುವ ಅಮೃತದ ಪ್ರಸಾದ.



ಮಗು ಮನುಷ್ಯನ ತಂದೆಯೆಂಬ ಸತ್ಯದ ಜ್ಯೋತಿ,

ನಾಳಿನ ಭವಿಷ್ಯ ಕಟ್ಟುವ ಅವರೇ ಶಕ್ತಿ,

ಮೌಲ್ಯಗಳ ಬಿತ್ತನೆಯಿಂದ ಬೆಳೆಯುವ ಸಂಪತ್ತಿ,

ಸಮಾಜದ ಉನ್ನತಿಗೆ ಮಕ್ಕಳೇ ವಿಭೂತಿ.



ಸಂಸ್ಕಾರದ ಸಿರಿಯಲ್ಲಿ ಬೆಳೆಯುವ ಚೇತನ,

ಜ್ಞಾನದ ಬೆಳಕಿನಿಂದ ಮೂಡುವ ಸಾಧನ,

ಮಾನವೀಯ ಮೌಲ್ಯಗಳ ಹರಡುವ ಸ್ಪಂದನ,

ಸುಂದರ ಸಮಾಜದ ನಿರ್ಮಾಣಕ್ಕೆ ಕಾರಣ.


   


ಕವಿ:ಡಾ. ಜಯವೀರ ಎ. ಕೆ.

    ಕನ್ನಡ ಪ್ರಾಧ್ಯಾಪಕರು 

         ಖೇಮಲಾಪುರ

Image Description

Post a Comment

0 Comments