*ಹೆಮ್ಮೆಯ ಮಗಳು*...

 *ಹೆಮ್ಮೆಯ ಮಗಳು*...



                   ೧

ಕಣ್ಣಿಗೆ ಬೆಳಕಾಗಿ ಬಂದವಳು ನೀನು,

ಮನದಲಿ ನಗುವಾಗಿ ನಿಂತವಳು ನೀನು,

ಬದುಕಿನ ಹಾದಿಗೆ ದೀಪವಾದ ನೀನು,

ನನ್ನೆಲ್ಲ ಕನಸುಗಳ ರೂಪವೇ ನೀನು.

               

                  ೨

  

ಗುರುವಿಗೆ ಗೌರವದ ಗರಿಮೆಯ ನೀನು,

ಹಿರಿಯರಿಗೆ ವಿನಯದ ಹರಿವಿನ ನೀನು,

ಸ್ನೇಹದ ಸೌರಭದಿ ಅರಳಿದ ನೀನು,

ಸತ್ಕಾರ್ಯ ಸಿರಿಗೆ ಸಾಕ್ಷಿಯಾದ ನೀನು.

                    ೩


ಕಷ್ಟದ ಬಿಸಿಲಲಿ ನೆರಳಾದ ನೀನು,

ಧೈರ್ಯದ ಹೆಜ್ಜೆಗೆ ಬಲವಾದ ನೀನು,

ಸಾಧನೆಯ ಶಿಖರದ ಕನಸಾದ ನೀನು,

ಕುಟುಂಬ ಕೀರ್ತಿಗೆ ಕಿರೀಟವೇ ನೀನು.


                     ೪


ಕೂಡಲ ಸಂಗಮದ ಕರುಣೆಯ ನೀನು,

ಸಂಸ್ಕಾರದ ಸಿರಿಯ ಸುಗಂಧದ ನೀನು,

ಸದ್ಗುಣ ಸಂಪತ್ತಿನ ನಿಧಿಯಾದ ನೀನು,

ನನ್ನ ಜೀವದ ಹೆಮ್ಮೆಯ ಮಗಳು ನೀನು 



ಕವಿ:ಡಾ. ಜಯವೀರ ಎ.ಕೆ.

            ಖೇಮಲಾಪುರ

Image Description

Post a Comment

0 Comments