ಇದೇ 18ರಂದು ಶ್ರೀ ಆತ್ಮಾನಂದ ರವರ ಚಿತ್ರಕಲಾ ಪ್ರದರ್ಶನ ಆಯೋಜನೆ

 ಇದೇ 18ರಂದು ಶ್ರೀ ಆತ್ಮಾನಂದ ರವರ ಚಿತ್ರಕಲಾ ಪ್ರದರ್ಶನ ಆಯೋಜನೆ




ಕನ್ನಡ ಭವನ: ಕರ್ನಾಟಕ ಆರ್ಟ್ಸ್ ಫೌಂಡೇಶನ್ ವತಿಯಿಂದ ಚಿತ್ರಕಲಾ ಪ್ರದರ್ಶನ ಆಯೋಜನೆ


ಬೆಂಗಳೂರು: ಜೂ.16: ಕರ್ನಾಟಕ ಆರ್ಟ್ಸ್ ಫೌಂಡೇಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರ ನಗರ ಜಿಲ್ಲೆ ಇವರ ಸಹಯೋಗದೊಂದಿಗೆ ಚಿತ್ರಕಲಾವಿದ,, ಸಮಾಜ ಸೇವಕ, ಬಹುಮುಖ್ಯ ಪ್ರತಿಭೆ ಹಾಗೂ ಕರ್ನಾಟಕ ಲಲಿತ ಕಲಾ ಅಕಾಡೆಮಿ ನಿಕಟಪೂರ್ವ ಸದಸ್ಯ ಶ್ರೀ ಆತ್ಮಾನಂದ ಅವರ ಚಿತ್ರಕಲಾ ಪ್ರದರ್ಶನವನ್ನು ಇದೇ ಗುರುವಾರ ಬೆಳಗ್ಗೆ 11 ಗಂಟೆಗೆ (ದಿನಾಂಕ 18.06.2025) ವರ್ಣ ಆರ್ಟ್ ಗ್ಯಾಲರಿ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಆರ್ಟ್ಸ್ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ಸರೋಜಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಚಿತ್ರಕಲಾವಿದ ಆತ್ಮಾನಂದ ಅವರ ಚಿತ್ರಕಲಾ ಪ್ರದರ್ಶನವನ್ನು ಕನ್ನಡ ಚಿತ್ರರಂಗದ ಖ್ಯಾತ ಚಲನಚಿತ್ರ ನಟ ಶ್ರೀ ಸುಚೇಂದ್ರ ಪ್ರಸಾದ್ ಅವರು ಉದ್ಘಾಟಿಸಿದವರು. ಮುಖ್ಯ ಅತಿಥಿಯಾಗಿ 

ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಕೇಶವ್ ಪ್ರಸಾದ್ ರವರು, ಕರ್ನಾಟಕ ಲಲಿತ ಕಲಾ ಅಕಾಡೆಮಿ, ಬೆಂಗಳೂರು ಅಧ್ಯಕ್ಷರಾದ ಪ.ಸ. ಕುಮಾರ್ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ನಗರ ಜಿಲ್ಲೆಯ ಸಹಾಯಕ ನಿರ್ದೇಶಕ ಆರ್. ಚಂದ್ರಶೇಖರ್, ಕರ್ನಾಟಕ ಆರ್ಟ್ಸ್ ಫೌಂಡೇಶನ್ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಸೇರಿದಂತೆ ಅಭಿಮಾನಿ ವರ್ಗದವರು ಮತ್ತಿತರರು ಭಾಗವಹಿಸಲಿದ್ದಾರೆ.

Image Description

Post a Comment

0 Comments