ತಂಬಾಕು ಸೇವನೆ ಅನಾರೋಗ್ಯಕ್ಕೆ ರಹದಾರಿ : ಸಂಗಮೇಶ ಎನ್ ಜವಾದಿ.

 ತಂಬಾಕು ಸೇವನೆ ಅನಾರೋಗ್ಯಕ್ಕೆ ರಹದಾರಿ : ಸಂಗಮೇಶ ಎನ್ ಜವಾದಿ.



ಚಿಟಗುಪ್ಪಾ:ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿ ತಂಬಾಕು ವ್ಯಸನಿಯಾದರೆ ಅನಾರೋಗಕ್ಕೆ ರಹದಾರಿಯಾಗುವುದಲ್ಲದೆ ಕೌಟುಂಬಿಕ ವ್ಯವಸ್ಥೆ ಹಾಳಾಗುತ್ತದೆ. ಆದ್ದರಿಂದ ಸರ್ಕಾರ ತಂಬಾಕು ಹಾಗೂ ಅದರ ಉತ್ಪನ್ನಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದು ಪರಿಸರವಾದಿ, ಹೋರಾಟಗಾರ ಸಂಗಮೇಶ ಎನ್ ಜವಾದಿ ಹೇಳಿದರು.


ತಾಲೂಕಿನ ಬೆಳಕೇರಾ ಗ್ರಾಮದ ಪಾಂಡುರಂಗ ವಿಠ್ಠಲ್ ದೇವಸ್ಥಾನದ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ತಂಬಾಕು ವಿರೋಧ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಗಮೇಶ ಎನ್ ಜವಾದಿ ರವರು ಪ್ರತಿ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನ (ವಿಶ್ವ ತಂಬಾಕು ವಿರೋಧಿ ದಿನ) ವನ್ನು ಆಚರಿಸಲಾಗುತ್ತದೆ. ತಂಬಾಕು ಸೇವನೆಯಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆಗಳು ಹಾಗೂ ಸಾವು-ನೋವುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ತಂಬಾಕು ಸೇವನೆಯಿಂದ ಬಾಯಿ, ಶ್ವಾಸಕೋಶ, ಗಂಟಲು ಮತ್ತು ಅನ್ನನಾಳದ ಕ್ಯಾನ್ಸರ್‌ಗೆ ಪ್ರಮುಖ ಕಾರಣ. ಹೃದಯಾಘಾತ, ಅಧಿಕ ರಕ್ತದೊತ್ತಡ ಮತ್ತು ಶ್ವಾಸಕೋಶದ ಮಾರಣಾಂತಿಕ ಕಾಯಿಲೆಗಳಿಗೆ ಮನುಷ್ಯ ಬಲಿಯಾಗುತ್ತಾನೆ. ಕಾರಣ ತಂಬಾಕು ತ್ಯಜಿಸುವುದು ಕುಟುಂಬದ ಆರೋಗ್ಯ ದೃಷ್ಟಿಯಿಂದ ಅತ್ಯುತ್ತಮ ನಿರ್ಧಾರವಾಗಿದೆ.ಷಇದನ್ನು ಹೋಗಲಾಡಿಸಲು ತಂಬಾಕು ರಹಿತ ದಿನವನ್ನು ಒಂದು ದಿನ ಮಾತ್ರ ಆಚರಿಸದೆ ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಯುವ ಜನಾಂಗ ಈ ದುಶ್ಚಟದಿಂದ ದೂರವಿರುವಂತೆ ಮಾಡುವ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ.

ಈ ಕುರಿತಂತೆ ಸಾರ್ವಜನಿರಕಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.


ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ರಾಜು ಹಡಪದ ಮಾತನಾಡಿ ತಂಬಾಕು, ಧೂಮಪಾನದ ದುಷ್ಪರಿಣಾಮ ಕುರಿತಂತೆ ಯುವಕರಿಗೆ ಅರಿವು ಮೂಡಿಸಬೇಕು. ಒಳ್ಳೆಯದು ಹಾಗೂ ಕೆಡಕು ಕುರಿತು ಅರ್ಥಮಾಡಿಸಬೇಕು. ಪ್ರತಿ ಮನೆಯಿಂದಲೇ ಈ ಕೆಲಸವಾಗಬೇಕು. ಇಂತಹ ದುಶ್ಚಟಗಳಿಗೆ ಪೂರ್ಣ ವಿರಾಮ ಹಾಕಬೇಕು. 

ಬಿಡಿ, ಸಿಗರೇಟ್‌, ಗುಟ್ಕಾ ಮತ್ತು ಹೊಗೆಸೊಪ್ಪು ಸೇವನೆಯಿಂದ ಒಂದು ಹೆಜ್ಜೆ ಮುಂದುಹೋಗಿ ಇಂದಿನ ಯುವ ಜನಾಂಗ ಇ-ಸಿಗರೇಟ್‌ ಸೇವನೆಗೆ ಮಾರುಹೋಗುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ಅತ್ಯಂತ ಗಂಭೀರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.


ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಅಸ್ಲಾಂಮಿಯಾ ಮಾತನಾಡಿ ತಂಬಾಕು ಉತ್ಪನ್ನಗಳ ಸೇವನೆಯಿಂದ ದಿನನಿತ್ಯ ಸಾವು-ನೋವು ನೋಡುತ್ತಿದ್ದೇವೆ. ವಿಶ್ವದಾದ್ಯಂತ ಪ್ರತಿ 6 ಸೆಕೆಂಡಿಗೆ ಒಬ್ಬರು ಮರಣ ಹೊಂದುತ್ತಿದ್ದಾರೆ. ಸಾಮೂಹಿಕ ಜಾಗೃತಿಯ ಮೂಲಕ ಇದಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿದರು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಯೋಜನಾಧಿಕಾರಿ ವೀರೇಶಪ್ಪಾ ಮಾತನಾಡಿ ತಂಬಾಕು ಉತ್ಪನ್ನಗಳ ಸೇವನೆಯಿಂದ ದಿನನಿತ್ಯ ಸಾವು-ನೋವು ನೋಡುತ್ತಿದ್ದೇವೆ. ವಿಶ್ವದಾದ್ಯಂತ ಪ್ರತಿ 6 ಸೆಕೆಂಡಿಗೆ ಒಬ್ಬರು ಮರಣ ಹೊಂದುತ್ತಿದ್ದಾರೆ. ಸಾಮೂಹಿಕ ಜಾಗೃತಿಯ ಮೂಲಕ ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಸಿಗರೇಟ್, ಬೀಡಿ ಸೇವನೆಯಿಂದ ಕೇವಲ ಉಪಯೋಗಿಸುವ ವ್ಯಕ್ತಿಗಷ್ಟೇ ಅಲ್ಲ. ಸುತ್ತಲಿನ ಸಮಾಜಕ್ಕೂ ಹಾನಿಯಾಗುತ್ತದೆ. ದೈಹಿಕ ಬಲ ಇರುವಾಗ ತಂಬಾಕು ಸೇವನೆಯಿಂದ ಏನೂ ಆಗುವುದಿಲ್ಲ. ಆದರೆ ಇಳಿವಯಸ್ಸಿನಲ್ಲಿ ಇದರ ಪರಿಣಾಮ ಗಂಭೀರವಾಗಿ ಗೊತ್ತಾಗುತ್ತದೆ. ಆದ್ದರಿಂದ ತಂಬಾಕು ಸೇವನೆಯಿಂದಾಗುವ ಹಾನಿಯ ಜಾಗೃತಿ ವಹಿಸುವುದು ಅಗತ್ಯ.

ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.


ಪ್ರಾಸ್ತಾವಿಕವಾಗಿ ತಾಲೂಕಿನ ಕೃಷಿ ಅಧಿಕಾರಿ ಸಿದ್ದು ಪೂಜಾರಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರು, ಸ್ಥಳೀಯ ಸೇವಾ ಪ್ರತಿನಿಧಿ ಪ್ರಿಯಾಂಕ, ಸುಧಾ, ಸುವಿಧಾ ಸಹಾಯಕಿ ಪ್ರೀಯಾಂಕ ,  ಸ್ವಸಹಾಯ ಸಂಘದ ಸದಸ್ಯರು, ಯುವಕರು , ವಿದ್ಯಾರ್ಥಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.

Image Description

Post a Comment

0 Comments